• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ರಾಜ್ಯಾದ್ಯಂತ ವರ್ಷವಿಡೀ `ಗಾಂಧಿ ಭಾರತ’ ಕಾರ್ಯಕ್ರಮ

News Desk by News Desk
October 24, 2024
in Bengaluru News
Year-round 'Gandhi Bharat' program across the state
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು `ಗಾಂಧೀ ಭಾರತ’ ಹೆಸರಿನಲ್ಲಿ ವರ್ಷವಿಡೀ ರಾಜ್ಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಬೆಳಗಾವಿಯಲ್ಲಿ ಬರುವ ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರನ್ನು ಆಹ್ವಾನಿಸುವ ಚಿಂತನೆ ನಡೆದಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಶತಮಾನೋತ್ಸವ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಶತಮಾನೋತ್ಸವದ ಅಂಗವಾಗಿ ಒಂದು ವರ್ಷದ ಕಾಲ ಮಹಾತ್ಮ ಗಾಂಧೀಜಿಯವರ ಚಿಂತನೆ, ಪ್ರಯೋಗಗಳನ್ನು ಪುನರ್ ಮನನ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಕ್ಕಳು, ಯುವಜನರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ನವೆಂಬರ್ 14 ಜವಾಹರಲಾಲ್ ನೆಹರು ಅವರ ಜನ್ಮದಿನದಂದು ನೆಹರು ಅವರು ಗಾಂಧೀಜಿಯವರಿಂದ ಪ್ರಭಾವಿತರಾಗಿ ದೇಶದ ಅಭಿವೃದ್ಧಿಗೆ ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಸ್ಮರಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ವಿ.ಪ ಮಾಜಿ ಸಭಾಪತಿ ಬಿ.ಎಲ್. ಶಂಕರ ಮಾತನಾಡಿ, ಗಾಂಧೀ ಮತ್ತು ಭಾರತವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ಈ ಕಾರ್ಯಕ್ರಮಕ್ಕೆ `ಗಾಂಧೀ ಭಾರತ’ ಎಂಬ ಶೀರ್ಷಿಕೆ ನೀಡಲಾಗಿದೆ. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಂಬಂಧಿಸಿದ ಇಲಾಖೆಗಳು ತಕ್ಷಣ ಜಾರಿಗೊಳಿಸಬಹುದಾದ, ಮಧ್ಯಮಾವಧಿಯ ಮತ್ತು ದೀರ್ಘಾವಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳ ಪ್ರಮುಖ ಸ್ಥಳಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವಚಿತ್ರಗಳನ್ನು ಅಳವಡಿಸಲು ಕ್ರಮ ವಹಿಸಬೇಕು. ಗಾಂಧೀ ಭವನ, ಚಿತ್ರಕಲಾ ಪರಿಷತ್ ಈ ಚಿತ್ರಗಳನ್ನು ಒದಗಿಸಲಿವೆ. ಡಿ.ಎಸ್. ನಾಗಭೂಷಣ್ ಅವರು ಬರೆದ ಗಾಂಧೀ ಕಥನ ಕೃತಿಯನ್ನು ಮುದ್ರಿಸಿ ವಿತರಿಸಲು ಹಾಗೂ ರಿಚರ್ಡ್ ಅಟೆನ್ ಬರೋ ನಿರ್ದೇಶನದ ಮಹಾತ್ಮ ಗಾಂಧೀ ಚಲನಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ 57 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಶೈಕ್ಷಣಿಕ ಕ್ಯಾಲೆಂಡರ್‌ಗೆ ವ್ಯತ್ಯಯವಾಗದಂತೆ ಗಾಂಧೀಜಿಯವರ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗಾಂಧೀಜಿಯವರ ಉಕ್ತಿಗಳು ಹಾಗೂ ಅವರು ಹೇಳಿದ ಏಳು ಸಾಮಾಜಿಕ ಪಾತಕಗಳ ಕುರಿತು ಡಿಜಿಟಲ್ ಮುದ್ರಣಗಳನ್ನು ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅನಾವರಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹೊಸ ತಂತ್ರಜ್ಞಾನದ ಮೂಲಕ ಬೆರಳ ತುದಿಯಲ್ಲಿ ಗಾಂಧೀಜಿಯವರ ಮಹತ್ವ ಕುರಿತ ಮಾಹಿತಿಗಳನ್ನು ಯುವಜನರು ಮತ್ತು ಹೊಸ ಪೀಳಿಗೆಗೆ ಮರುಪರಿಚಯಿಸುವ ಹಾಗೂ ಜಾಗತಿಕವಾಗಿ ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಮತ್ತು ಸಂಬಂಧಿತ ಸ್ಥಳಗಳ ಕುರಿತ ಮಾಹಿತಿಯನ್ನು ಯುವಜನರು ಮತ್ತು ಹೊಸಪೀಳಿಗೆಗೆ ಪರಿಚಯಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದರು.

ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಗಾಂಧಿ ಭಾರತ ಕಾರ್ಯಕ್ರಮದ ಸ್ಮರಣಾರ್ಥ ರಾಜ್ಯದ ಪ್ರಮುಖ ಸ್ಥಳಗಳಲ್ಲಿ 100 ಲಕ್ಷ ಸಸಿಗಳನ್ನು ಹೆಚ್ಚುವರಿಯಾಗಿ ನೆಡಲು ಕ್ರಮವಹಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಗಾಂಧೀ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳಲ್ಲಿರುವ ಗಾಂಧೀ ಅಧ್ಯಯನ ವಿಭಾಗಗಳ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು.

ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮದ ಸಲಹೆಗಾರ ಬಿ.ಆರ್. ಪಾಟೀಲ, ಶಾಸಕರಾದ ಜೆ.ಟಿ. ಪಾಟೀಲ, ಅಲ್ಲಮಪ್ರಭು ಪಾಟೀಲ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, 2024ನೇ ಸಾಲಿನ ಗಾಂಧೀ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ. ಜಿ.ಬಿ. ಶಿವರಾಜು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ಆರ್. ವಿಶುಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಮೂಲಕ ಹಿಂದಿ, ಉರ್ದು, ತುಳು, ಕೊಡವ, ಕೊಂಕಣಿ, ಲಂಬಾಣಿ ಮತ್ತಿತರ ಭಾಷೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತು ಕಿರುಪುಸ್ತಕಗಳನ್ನು ಪ್ರಕಟಿಸಿ ವಿತರಿಸಲಾಗುವುದು ಎಂದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಶತಮಾನೋತ್ಸವ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ದೀಪಾಲಂಕಾರ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದರು.

ಗಾಂಧೀಜಿಯವರಿಗೆ ಆಪ್ತವಾದ ಗ್ರಾಮೀಣಾಭಿವೃದ್ಧಿ ಮತ್ತು ಸ್ವರಾಜ್ ಚಟುವಟಿಕೆಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಹಮ್ಮಿಕೊಳ್ಳಲಾಗುವುದು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಗಾಂಧೀ ವಿಚಾರಗಳ ಪರಿಣಿತರ ಸಲಹೆ ಪಡೆದು ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
– ಎಚ್.ಕೆ. ಪಾಟೀಲ.
ಸಚಿವರು, ಶತಮಾನೋತ್ಸವ ಸಮಿತಿಯ ಅಧ್ಯಕ್ಷರು.

Tags: BangaloreGadaggadaganewsLatestNewsupdatenewsYear-round 'Gandhi Bharat' program across the state
ShareSend
Previous Post

ಸ್ಮಾರಕಗಳ ಸಂರಕ್ಷಣಾ ಕಾಮಗಾರಿಗೆ ವೇಗ : ಸಿದ್ಧಲಿಂಗೇಶ್ವರ ಪಾಟೀಲ

Next Post

ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ

News Desk

News Desk

Next Post
Competitive Examination for the post of Village Administrative Officer

ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬಿಡುಗಡೆ ಸಂದರ್ಭದಲ್ಲಿ ‘ಬಾಸ್’ ಚಿತ್ರಕ್ಕೆ ಕಾನೂನು ಸಂಕಷ್ಟ: ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ

ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ನನಗೆ ಇಷ್ಟವಿಲ್ಲವಂತೆ! ದರ್ಶನ್ ಮುಂದೆ ವಿಜಯಲಕ್ಷ್ಮೀ ಬೇಸರ, ಪತ್ನಿಯ ಮಾತು ಕೇಳಿ ನಕ್ಕ ನಟ

October 28, 2026
ಬೆಂಗಳೂರು ಮಳೆಗೆ ಹೊಸ ದಾಖಲೆ: 111 ಮಿ.ಮೀ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬಟ್ಟೆ ತೆಗೆಯಲು ಹೋದಾಗ 4ನೇ ಮಹಡಿಯಿಂದ ಬಿದ್ದು 49 ವರ್ಷದ ಮಹಿಳೆ ದುರ್ಮರಣ!

October 28, 2026
ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಿಡಿಗೆ ಹೊತ್ತಿ ಉರಿದ ಬೆಳೆಗಳು

ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಿಡಿಗೆ ಹೊತ್ತಿ ಉರಿದ ಬೆಳೆಗಳು

October 28, 2026
ಕರ್ನಾಟಕದಲ್ಲಿ ಇಂದಿನಿಂದ SIR: ಮತದಾರರ ಬಳಿ ಬಿಎಲ್ಓಗಳು ಕೇಳುವ ದಾಖಲೆಗಳೇನು? ಇಲ್ಲಿದೆ ಮಾಹಿತಿ!

ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ ವಿದೇಶಿಗರ ಹೆಸರು ಪತ್ತೆ! SIR ಪರಿಶೀಲನೆಯಲ್ಲಿ 716 ಮಂದಿ ಔಟ್‌

October 28, 2026

Recent News

ಬಿಡುಗಡೆ ಸಂದರ್ಭದಲ್ಲಿ ‘ಬಾಸ್’ ಚಿತ್ರಕ್ಕೆ ಕಾನೂನು ಸಂಕಷ್ಟ: ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ

ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ನನಗೆ ಇಷ್ಟವಿಲ್ಲವಂತೆ! ದರ್ಶನ್ ಮುಂದೆ ವಿಜಯಲಕ್ಷ್ಮೀ ಬೇಸರ, ಪತ್ನಿಯ ಮಾತು ಕೇಳಿ ನಕ್ಕ ನಟ

October 28, 2026
ಬೆಂಗಳೂರು ಮಳೆಗೆ ಹೊಸ ದಾಖಲೆ: 111 ಮಿ.ಮೀ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬಟ್ಟೆ ತೆಗೆಯಲು ಹೋದಾಗ 4ನೇ ಮಹಡಿಯಿಂದ ಬಿದ್ದು 49 ವರ್ಷದ ಮಹಿಳೆ ದುರ್ಮರಣ!

October 28, 2026
ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಿಡಿಗೆ ಹೊತ್ತಿ ಉರಿದ ಬೆಳೆಗಳು

ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಿಡಿಗೆ ಹೊತ್ತಿ ಉರಿದ ಬೆಳೆಗಳು

October 28, 2026
ಕರ್ನಾಟಕದಲ್ಲಿ ಇಂದಿನಿಂದ SIR: ಮತದಾರರ ಬಳಿ ಬಿಎಲ್ಓಗಳು ಕೇಳುವ ದಾಖಲೆಗಳೇನು? ಇಲ್ಲಿದೆ ಮಾಹಿತಿ!

ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ ವಿದೇಶಿಗರ ಹೆಸರು ಪತ್ತೆ! SIR ಪರಿಶೀಲನೆಯಲ್ಲಿ 716 ಮಂದಿ ಔಟ್‌

October 28, 2026
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬಿಡುಗಡೆ ಸಂದರ್ಭದಲ್ಲಿ ‘ಬಾಸ್’ ಚಿತ್ರಕ್ಕೆ ಕಾನೂನು ಸಂಕಷ್ಟ: ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ

ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ನನಗೆ ಇಷ್ಟವಿಲ್ಲವಂತೆ! ದರ್ಶನ್ ಮುಂದೆ ವಿಜಯಲಕ್ಷ್ಮೀ ಬೇಸರ, ಪತ್ನಿಯ ಮಾತು ಕೇಳಿ ನಕ್ಕ ನಟ

October 28, 2026
ಬೆಂಗಳೂರು ಮಳೆಗೆ ಹೊಸ ದಾಖಲೆ: 111 ಮಿ.ಮೀ ಧಾರಾಕಾರ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬಟ್ಟೆ ತೆಗೆಯಲು ಹೋದಾಗ 4ನೇ ಮಹಡಿಯಿಂದ ಬಿದ್ದು 49 ವರ್ಷದ ಮಹಿಳೆ ದುರ್ಮರಣ!

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
No Result
View All Result
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.