HomeGadag News`ಜನ ಕಲ್ಯಾಣ ಯಾತ್ರೆ' ಪ್ರತಿಭಟನೆ

`ಜನ ಕಲ್ಯಾಣ ಯಾತ್ರೆ’ ಪ್ರತಿಭಟನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಹಾಗೂ ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ ಮುಂಡರಗಿ ಇವರ ಆಶ್ರಯದಲ್ಲಿ ಗದಗ-ಬೆಟಗೇರಿ ರೈಲ್ವೆ ನಿಲ್ದಾಣದ ಎದುರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜನ ಕಲ್ಯಾಣ ಯಾತ್ರೆಯ ಪ್ರತಿಭಟನೆ ಮಾಡಲಾಯಿತು.
ವೇದಿಕೆಯ ಮುಂಡರಗಿ ತಾಲೂಕಾ ಸಂಚಾಲಕ ಬಸವರಾಜ ಯಲ್ಲಪ್ಪ ನವಲಗುಂದ ಮಾತನಾಡಿ, 2014ರ ರೈಲ್ವೆ ಮುಂಗಡ ಪತ್ರದಲ್ಲಿ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಮಂಜೂರಾಗಿದ್ದು, 2015ರಲ್ಲಿ ಹರಪನಹಳ್ಳಿವರೆಗೆ 94 ಕಿ.ಮಿ. ಸಮೀಕ್ಷೆ ಮಾಡಲಾಗಿದೆ. ಈ ಮಾರ್ಗಕ್ಕೆ ರೂ 813.14 ಕೋಟಿ ಅಂದಾಜು ಪತ್ರಿಕೆಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ರೈಲ್ವೆ ಯೋಜನೆಯ ವರದಿಯನ್ನು ಸರ್ಕಾರ ಕಾಯ್ದಿರಿಸಿರುತ್ತದೆ. ಹೀಗಾಗಿ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಮಂಜೂರಾತಿ ವಿಳಂಬವಾಗುತ್ತಿದ್ದು, ಎಲ್ಲ ಅಡೆತಡೆಗಳನ್ನು ನಿವಾರಿಸಿ ಸರ್ಕಾರ ತಕ್ಷಣ ನೂತನ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣಕ್ಕೆ ಕಾನೂನು ಮಹಾವಿದ್ಯಾಲಯ ಹಾಗೂ ಒಂದು ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಬೇಕು. ರಾಜ್ಯಾದ್ಯಂತ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕಾಯಂಗೊಳಿಸಬೇಕು ಹಾಗೂ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಂಚನಗೌಡ ಗದಗ, ಬಸವರಾಜ ಅಗ್ಗದ, ಯಲ್ಲಪ್ಪ ಹೊಂಬಳಗಟ್ಟಿ, ಆನಂದ ಹೊನ್ನಕೇರಿ, ಅನ್ನಪೂರ್ಣ ಕುಬಸದ, ವಿಜಯಲಕ್ಷ್ಮೀ ಯರಾಸಿ, ವಿಶಾಲ ಕೋನುರಿ, ಲಕ್ಷ್ಮೀಬಾಯಿ ಯರಾಸಿ, ಮೀನಾಕ್ಷಮ್ಮ ಶಿರೂರು, ಹನುಮಪ್ಪ ಶಿರೂರು, ಸುರೇಶ ಶಾಬಾದಿ, ಶಶಿ ಶಾಬಾದಿ, ಲಲಿತಾ ಹೊಸಮನಿ, ಅನ್ನಕ್ಕ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!