HomeGadag Newsಬಡಾವಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಪ್ರಾಪ್ತ ಅರೆಸ್ಟ್- 12 ಬೈಕ್ ಜಪ್ತಿ

ಬಡಾವಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಪ್ರಾಪ್ತ ಅರೆಸ್ಟ್- 12 ಬೈಕ್ ಜಪ್ತಿ

For Dai;y Updates Join Our whatsapp Group

Spread the love

ಗದಗ:- ಅಂತರ್ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಬೆಟಗೇರಿ ಬಡಾವಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗದಗ ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಮ್.ಬಿ ಸಂಕದ, ಡಿವೈಎಸ್ಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಧೀರಜ್ ಸಿಂಧೆ, ಬಡಾವಣೆ ಠಾಣಾ ಪಿಎಸ್ಐಗಳಾದ ಮಾರುತಿ ಜೋಗದಂಡಕರ, ಬಿ.ಟಿ.ರಿತ್ತಿ, ಎಎಸ್ಐ ಎನ್.ಎಫ್.ಬೆಟಗೇರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಕೊನೆಗೂ ಅರೆಸ್ಟ್ ಮಾಡುವಲ್ಲಿ ಖಾಕಿಪಡೆ ಯಶಸ್ವಿಯಾಗಿದೆ.

ಈ ಬಾಲಕ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ದೂರು ದಾಖಲಿಸಿ ತನಿಖೆಗಿಳಿದ ಪೊಲೀಸರು, ಅಪ್ರಾಪ್ತ ಬಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಆತನಿಂದ ಅಂದಾಜು 4 ಲಕ್ಷ 40 ಸಾವಿರ ಮೌಲ್ಯದ 12 ಬೈಕ್ ಹಾಗೂ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಪಿ.ಎಚ್. ದೊಡಮನಿ, ಅಶೋಕ ಗದಗ, ನಾಗರಾಜ್ ಬರಡಿ, ಎಸ್.ಎಚ್. ಕಮತರ, ಮಹೇಶ್ ಹೂಗಾರ, ಅಕ್ಷಯ ಬದಾಮಿ, ತಾಂತ್ರಿಕ ವಿಭಾಗದ ಗುರುರಾಜ್ ಬೂದಿಹಾಳ, ಸಂಜೀವ ಕೊರಡೂರ ಇದ್ದರು.

ಇನ್ನೂ ಘಟನೆ ಸಂಬಂಧ ಭರ್ಜರಿ ಕಾರ್ಯಾಚರಣೆ ಮಾಡಿದ್ದ ಗದಗ ಬಡಾವಣೆ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕಾರ್ಯಾಚರಣೆಯಲ್ಲಿ ಭಾಗಿರುವ ಪೊಲೀಸ್ ಸಿಬ್ಬಂದಿಗೆ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!