HomeSports NewsIPL 2025: ಐಪಿಎಲ್‌ʼನಿಂದ ಹೊರಬಿದ್ದ ಸ್ಟಾರ್ ಆಟಗಾರ ಗ್ಲೆನ್ ಫಿಲಿಪ್ಸ್..! ಯಾಕೆ ಗೊತ್ತಾ..?

IPL 2025: ಐಪಿಎಲ್‌ʼನಿಂದ ಹೊರಬಿದ್ದ ಸ್ಟಾರ್ ಆಟಗಾರ ಗ್ಲೆನ್ ಫಿಲಿಪ್ಸ್..! ಯಾಕೆ ಗೊತ್ತಾ..?

For Dai;y Updates Join Our whatsapp Group

Spread the love

ಗುಜರಾತ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರಸ್ತುತ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡಕ್ಕೆ ಶಾಕಿಂಗ್‌ ಮಾಹಿತಿ ಎದುರಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್​ ಆಗಿರುವ ಗ್ಲೆನ್ ಫಿಲಿಪ್ಸ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಹೌದು ಸ್ನಾಯು ಸೆಳೆತದಿಂದ ಮೈದಾನದಲ್ಲೇ ಕುಸಿದು ಬಿದ್ದ ಗ್ಲೆನ್ ಫಿಲಿಪ್ಸ್ ಆ ಬಳಿಕ ಮೈದಾನ ತೊರೆದಿದ್ದರು.

ಇದೀಗ ಅವರ ವೈದ್ಯಕೀಯ ರಿಪೋರ್ಟ್​ಗಳು ಬಂದಿದ್ದು, ಈ ವರದಿಯಲ್ಲಿ ಹೆಚ್ಚಿನ ವಿಶ್ರಾಂತಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಗ್ಲೆನ್ ಫಿಲಿಪ್ಸ್ ನ್ಯೂಝಿಲೆಂಡ್​ಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಗ್ಲೆನ್ ಫಿಲಿಪ್ಸ್ ಅವರನ್ನು ಬರೋಬ್ಬರಿ 2 ಕೋಟಿ ರೂ.ಗೆ ಖರೀದಿಸಿದೆ. ಅದರಂತೆ ಇದೇ ಮೊದಲ ಬಾರಿಗೆ ಜಿಟಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದರು. ಆದರೆ ದುರಾದೃಷ್ಟವಶಾತ್ ಇದೀಗ ಗಾಯಗೊಂಡು ಗ್ಲೆನ್ ಫಿಲಿಪ್ಸ್ ಐಪಿಎಲ್​ನಿಂದ ಹಿಂದೆ ಸರಿದ್ದಾರೆ. ಗ್ಲೆನ್ ಫಿಲಿಪ್ಸ್ ಅನುಪಸ್ಥಿತಿಯ ಕಾರಣ ಇದೀಗ ಗುಜರಾತ್ ಟೈಟಾನ್ಸ್ ಬದಲಿ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!