IPL 2025:‌ ರಿಂಕು ಸಿಂಗ್ ಕೆನ್ನೆಗೆ ಬಾರಿಸಿದ್ದೇಕೆ ಕುಲದೀಪ್..? ವಿಡಿಯೋ ವೈರಲ್

0
Spread the love

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಪಡೆಯನ್ನು 14 ರನ್‌ಗಳಿಂದ ಬಗ್ಗುಬಡಿಯಿತು. ಈ ಆವೃತ್ತಿಯಲ್ಲಿ 4ನೇ ಜಯ ಸಾಧಿಸಿದ ಹಾಲಿ ಚಾಂಪಿಯನ್ ತಂಡ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

Advertisement

ಇದರ ನಡುವೆ ಪಂದ್ಯ ಮುಗಿದ ನಂತರ ಎರಡೂ ತಂಡದ ಆಟಗಾರರು ಮೈದಾನದಲ್ಲಿ ನಿಂತು ಮಾತಾಡ್ತಿದ್ದಾರೆ. ಸಂಭಾಷಣೆಯಲ್ಲಿ ರಿಂಕು ಸಿಂಗ್ ನಗುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಕುಲದೀಪ್ ಯಾದವ್, ರಿಂಕು ಸಿಂಗ್​ಗೆ ಹೊಡೆದು ಏನೋ ಹೇಳುತ್ತಾರೆ.

ಆಗ ರಿಂಕು ಸಿಂಗ್, ಬೇಸರದಲ್ಲಿ ದಿಟ್ಟಿಸಿ ನೋಡಿದ್ದಾರೆ. ಮತ್ತೆ ಕುಲ್ದೀಪ್ ಕಪಾಳಕ್ಕೆ ಬಾರಿಸುತ್ತಾರೆ. ಆಗ ರಿಂಕು ಸಿಂಗ್ ಮುಖ ಕೆಂಪಾಗಿದೆ. ಅಲ್ಲದೇ ಗುರಾಯಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಇಬ್ಬರ ಮಧ್ಯೆ ನಿಜಕ್ಕೂ ಆಗಿರೋದು ಏನು ಅನ್ನೋದು ಇನ್ನು ಬಹಿರಂಗವಾಗಿಲ್ಲ. ಆದರೆ ತುಂಬಾ ಚರ್ಚೆಗೆ ಗ್ರಾಸವಾಗಿದೆ.


Spread the love

LEAVE A REPLY

Please enter your comment!
Please enter your name here