ಎಸ್‌ಎಸ್‌ಕೆ ಹೈಸ್ಕೂಲ್ ವಿದ್ಯಾರ್ಥಿನಿ ರಾಜ್ಯಕ್ಕೆ 4ನೇ ರ‍್ಯಾಂಕ್

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು 100ಕ್ಕೆ 100 ಆಗಿದೆ.

Advertisement

ಶಾಲೆಯ ವಿದ್ಯಾರ್ಥಿಗಳಾದ ಸೋಹಾ ನದಾಫ್- ಶೇ. 99.52 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದಾಳೆ. ಜಯಶ್ರೀ ಕಾಕೋಳ ಶೇ. 98.88, ಸಿರಿನ್‌ಬಾನು ಮಂಜಲಾಪೂರ ಶೇ. 95.36 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ, ದ್ವಿತಿಯ ಹಾಗೂ ತೃತಿಯ ಸ್ಥಾನಗಳನ್ನು ಪಡೆದಿದ್ದಾರೆ.

ಉಳಿದಂತೆ ವೈಷ್ಣವಿ ಪಾಟೀಲ ಶೇ. 94.88, ಶಾಂಭವಿ ಕುದರಿ ಶೇ. 94.4, ಹಿತೇಶ ತಾಂದಳೆ ಶೇ. 94.24, ನಂದಿತಾ ಕಾಳಪ್ಪನವರ 93.28, ವಿಕಾಸ ನೆಗಳೂರ ಶೇ.90.72 ಹಾಗೂ ನಿಖಿತಾ ಪಾಟೀಲ ಶೇ. 90.72 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಚೇರಮನ್ ಎಸ್.ಪಿ. ಬಳಿಗಾರ, ವೈಸ್ ಚೇರಮನ್ ಎಚ್.ಎಸ್. ತಳವಾರ, ಗೌರವ ಕಾರ್ಯದರ್ಶಿ ಸಿ.ಎಂ. ರಾಗಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here