ಬೆಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಶನಿವಾರ ಪ್ರಕಟಗೊಂಡಿದೆ.
ಈ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ www.kseab.karnataka.gov.in ನಲ್ಲಿ ವೀಕ್ಷಿಸಬಹುದು. ಸಾರ್ವಜನಿಕರು ಮಂಡಳಿಯ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿಯನ್ನು ವೀಕ್ಷಿಸಿ, ಅಕ್ಟೋಬರ್ 9, 2025ರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಇ-ಮೇಲ್ ಮೂಲಕ chairpersonkscab@gmail.com ಗೆ ಅಥವಾ ಹಾರ್ಡ್ ಕಾಪಿಯನ್ನು ‘ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ ಗೆ ಕಳುಹಿಸಬಹುದು.
2nd PUC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ;
ದ್ವಿತೀಯ ಪಿಯುಸಿ ಪರೀಕ್ಷೆ – 1ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೊದಲ ಪರೀಕ್ಷೆ 2026ರ ಫೆಬ್ರವರಿ 28 ರಂದು ನಡೆಯಲಿದೆ. ಮಾರ್ಚ್ 17 ರಂದು ಕೊನೆಯ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ – 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, 2026ರ ಏಪ್ರಿಲ್ 25 ರಂದು ಪರೀಕ್ಷೆ ಶುರುವಾಗಿ, ಮೇ 9 ರಂದು ಕೊನೆಗೊಳ್ಳಲಿದೆ.
SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ;
SSLC ಪರೀಕ್ಷೆ – 1ರ ತಾತ್ಕಾಲಿಕ ವೇಳಾಪಟ್ಟಿಯಂತೆ ಪರೀಕ್ಷೆ 2026ರ ಮಾರ್ಚ್ 18 ರಂದು ಆರಂಭವಾಗಿ ಏಪ್ರಿಲ್ 1 ರಂದು ಕೊನೆಗೊಳ್ಳಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ – 2ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೇ 18ರಂದು ಪರೀಕ್ಷೆ ಆರಂಭವಾಗಿ ಮೇ 25 ರಂದು ಕೊನೆಗೊಳ್ಳಲಿದೆ.



