ಗದಗ: ಹಿರಿಯ ಶಿಕ್ಷಣ ತಜ್ಞರಾದ ಡಾ. ಆರ್.ಎಂ. ಕುಬೇರಪ್ಪನವರ ಅಭಿಮಾನಿ ಬಳಗದಿಂದ ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಮುಂಬರುವ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಯುವ ಶೈಕ್ಷಣಿಕ ಹೋರಾಟಗಾರರಾದ ಡಾ. ಹನುಮಂತಗೌಡ ಆರ್. ಕಲ್ಮನಿ ಅವರು ಪದವೀಧರ ಮತದಾರರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ವಿ. ದೇಸಾಯಿಗೌಡ್ರ, ಎಂ. ಶರಣು, ಈರಣ್ಣಾ ಗಾಣಿಗೇರ, ಕೆ. ಬೆಂತೂರ, ಡಾ. ವಿ. ಮುಳಗುಂದ, ಎಂ.ಕೆ. ಜಟ್ಟೆಣ್ಣವರ ಉಪಸ್ಥಿತರಿದ್ದರು.
Trending Now



