ಡಾ. ತಮ್ಮನಗೌಡ್ರ ಅವರ ಕಾರ್ಯ ಮಾದರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ಭಾಗದ ಹಿರಿಯ ಸಾಹಿತಿಗಳು, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಂಗಮೇಶ ತಮ್ಮನಗೌಡ್ರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದು, ಅವರು ಇಲ್ಲಿಯವರೆಗೂ ಸುಮಾರು 114 ಕೃತಿಗಳನ್ನು ಹೊರತಂದಿರುವದು ಸಾಹಿತ್ಯದಲ್ಲಿ ಅವರ ಅನುಭವಕ್ಕೆ ಸಾಕ್ಷಿಯಾಗಿದೆ ಎಂದು ಸಂಕದಾಳ ಹಾಲಸ್ವಾಮಿಮಠದ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

Advertisement

ಅವರು ಪಟ್ಟಣದಲ್ಲಿ ಡಾ. ತಮ್ಮನಗೌಡ್ರ ಅವರು ನೂತನ ಗೃಹ ಪ್ರವೇಶವನ್ನು ಸಾಹಿತ್ಯಿಕ ಕಾರ್ಯಕ್ರಮವಾಗಿ ನೆರವೇರಿಸಿದ ಸಂದರ್ಭದಲ್ಲಿ, ಅವರು ರಚಿಸಿದ ಮಠಗಳ ಕಣ್ಣಂಚಿನ ಸತ್ಯ ಮತ್ತು ಸಾಧನೆಯ ಸಂತೃಪ್ತರು ಭಾಗ-1 ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ 36 ವರ್ಷಗಳಿಂದ ಸಾಹಿತ್ಯಿಕ ಸೇವೆ ಮಾಡುತ್ತಿರುವ ತಮ್ಮನಗೌಡ್ರ ಅವರ ಕಾರ್ಯ ಮಾದರಿಯಾಗಿದ್ದು, ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯಿಕ ಚಟುವಟಿಕೆಗಳು ಮುಂದುವರಿಯಲಿ ಎಂದು ಹಾರೈಸಿದರು.

ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ, ಅಶೋಕ ಬಡೀಗೇರ, ಜಗದೀಶ ಮಡಿವಾಳರ, ಮಲ್ಲಿಕಾರ್ಜುನ ಮಡಿವಾಳರ, ಸೋಮಶೇಖರಯ್ಯ ಲದ್ದಿಮಠ, ಗುರುಭಾಯಿ ಹುಲಸೂರ, ರುದ್ರಪ್ಪ ಗುಜಮಾಗಡಿ, ಶರಣಪ್ಪ ಗುಜಮಾಗಡಿ, ಬಾಳಪ್ಪ ಗುಜಮಾಗಡಿ, ಗದುಗಿನ ಶಂಕರಗೌಡ ತಮ್ಮನಗೌಡ್ರ, ಮಂಜುನಾಥಗೌಡ ತಮ್ಮನಗೌಡ್ರ, ಶಿವನಗೌಡ ತಮ್ಮನಗೌಡ್ರ, ಬಾಲಪ್ಪಗೌಡ ತಮ್ಮನಗೌಡ್ರ, ಮಂಜುನಾಥ ಡೋಣಿ, ಅಲ್ಲಾಸಾಬ್ ನದಾಫ್, ಚಂದ್ರಕಲಾ ಇಟಗಿಮಠ, ಫಕ್ಕೀರೇಶ ಹಳ್ಳೆಮ್ಮನವರ, ಯಮನೂರಸಾಬ್ ನದಾಫ್, ಈಶ್ವರ ಮೆಡ್ಲೇರಿ, ಶಂಕರ ಹಡಗಲಿ, ಬಿಇಓ ವಿ.ವಿ. ನಡುವಿನಮನಿ, ಡಾ. ಬಾಡಗಿ, ಡಾ. ಮಂಜುನಾಥಗೌಡ ಪಾಟೀಲ, ಜಿ.ಎಂ. ಮುಂದಿನಮನಿ ಮುಂತಾದವರಿದ್ದರು. ಡಾ. ಸಂಗಮೇಶ ತಮ್ಮನಗೌಡ್ರ ವಂದಿಸಿದರು.


Spread the love

LEAVE A REPLY

Please enter your comment!
Please enter your name here