ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ. ಚಿನ್ನವನ್ನು ಬಿಸ್ಕತ್, ಗಟ್ಟಿ ಬಂಗಾರ ಇಲ್ಲವೇ ಆಭರಣಗಳ ರೂಪದಲ್ಲಿ ಸಾಮಾನ್ಯವಾಗಿ ಕೊಳ್ಳಲಾಗುತ್ತದೆ.
ಚಿನ್ನವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಳ್ಳಲು ಬಯಸುತ್ತಾರೆ, ಕಾರಣ ಆರ್ಥಿಕವಾಗಿ ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುವುದೇ ಆಗಿದೆ ಎಂದರೆ ತಪ್ಪಿಲ್ಲ. ಆದರೆ ಸಾಮಾನ್ಯವಾಗಿ ಬಂಗಾರ ಹಾಗೂ ಬೆಳ್ಳಿ ದರಗಳಲ್ಲಿ ಏರಿಳಿತವಾಗುವುದು ಸಹಜವಾಗಿದ್ದು ಇದು ಹಲವು ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಾರಣಗಳಿಂದಾಗುತ್ತಿರುತ್ತದೆ.
ಚಿನ್ನ, ಬೆಳ್ಳಿ ಬೆಲೆಗಳು ಇಂದು ಬುಧವಾರವೂ ಏರಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್ಗೆ 80 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 2 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,645 ರೂನಿಂದ 11,725 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,17,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,910 ರುಪಾಯಿ ಆಗಿದೆ.
100 ಗ್ರಾಮ್ ಬೆಳ್ಳಿ ಬೆಲೆ 16,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,17,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 16,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,600 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 26ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,725 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,593 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,725 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,725 ರೂ
- ಚೆನ್ನೈ: 11,800 ರೂ
- ಮುಂಬೈ: 11,725 ರೂ
- ದೆಹಲಿ: 11,740 ರೂ
- ಕೋಲ್ಕತಾ: 11,725 ರೂ
- ಕೇರಳ: 11,725 ರೂ
- ಅಹ್ಮದಾಬಾದ್: 11,730 ರೂ
- ಜೈಪುರ್: 11,740 ರೂ
- ಲಕ್ನೋ: 11,740 ರೂ
- ಭುವನೇಶ್ವರ್: 11,725 ರೂ



