ಬಳ್ಳಾರಿ: ಬಳ್ಳಾರಿಯಲ್ಲಿ ಅಬಕಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಮೆಣಸಿನಕಾಯಿ ಬೆಳೆಯಲ್ಲಿ ಬೆಳದಿದ್ದ 44 ಗಾಂಜಾ ಗಿಡಗಳು ಪತ್ತೆಯಾಗಿದೆ. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮದಲ್ಲಿ 5ಲಕ್ಷ ರೂ ಮೌಲ್ಯದ 44 ಗಾಂಜಾ ಗಿಡ ವಶಕ್ಕೆ ಪಡೆಯಲಾಗಿದ್ದು,
ಗೋಟೂರು ಗ್ರಾಮದ ಸರ್ವೇ ನಂ – 31ರಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳದಿದ್ದರು. ಪ್ರತಿಯೊಂದು ಗಾಂಜಾ ಗಿಡ ಸುಮಾರು 5ರಿಂದ 6 ಅಡಿ ಎತ್ತರವಿದ್ದು, ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ಅಬಕಾರಿ ಡಿಸಿ ಮಂಜುನಾಥ್, ಡಿಎಸ್ಪಿ ಶರಣಪ್ಪ ಕರಡಿ, ಪಿಎಸ್ಐ ಹೊನ್ನುರ್ ವಲಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ವಿಚಾರಣೆ ನಡಿಸ್ತಿದ್ದಾರೆ.



