HomeEntertainmentಒಟಿಟಿಯಲ್ಲಿ ಸಮಯ್ ರೈನಾ ಅಬ್ಬರ : ‘ಧುರಂಧರ್’ ಹಿಂದಿಕ್ಕಿ ವರ್ಷದ ಅತಿದೊಡ್ಡ ಹಿಟ್ ಆಯ್ತು ‘ಇಂಡಿಯಾಸ್...

ಒಟಿಟಿಯಲ್ಲಿ ಸಮಯ್ ರೈನಾ ಅಬ್ಬರ : ‘ಧುರಂಧರ್’ ಹಿಂದಿಕ್ಕಿ ವರ್ಷದ ಅತಿದೊಡ್ಡ ಹಿಟ್ ಆಯ್ತು ‘ಇಂಡಿಯಾಸ್ ಗಾಟ್ ಲೇಟೆಂಟ್ 2’

For Dai;y Updates Join Our whatsapp Group

ಒಟಿಟಿ ವೇದಿಕೆಗಳಲ್ಲಿ ಈ ವರ್ಷದ ಅತಿದೊಡ್ಡ ಸಂಚಲನವಾಗಿ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್ 2’ ಹೊರಹೊಮ್ಮಿದೆ. ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾವನ್ನೇ ಹಿಂದಿಕ್ಕಿದ ಈ ಶೋ, 38.5 ಮಿಲಿಯನ್ ವೀಕ್ಷಣೆಗಳನ್ನು ದಾಖಲಿಸಿ 2026ರ ಅತ್ಯಧಿಕ ವೀಕ್ಷಣೆ ಪಡೆದ ಒಟಿಟಿ ಕಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆರ್ಮ್ಯಾಕ್ಸ್ ಮೀಡಿಯಾ ಪ್ರಕಟಿಸಿರುವ ‘ದಿ ಇಂಡಿಯಾ ಒಟಿಟಿ ವಾಚ್‌ಲಿಸ್ಟ್: ಆನ್ ಆರ್ಮ್ಯಾಕ್ಸ್ ಸ್ಟ್ರೀಮ್‌ವ್ಯೂ ರಿಪೋರ್ಟ್ (ಜನವರಿ-ಜೂನ್ 2026)’ ವರದಿ ಭಾರತೀಯ ಒಟಿಟಿ ವೀಕ್ಷಕರ ಆಯ್ಕೆಯನ್ನು ಸ್ಪಷ್ಟಪಡಿಸಿದೆ. ಸಿನಿಮಾ, ವೆಬ್‌ಸಿರೀಸ್ ಮತ್ತು ರಿಯಾಲಿಟಿ ಶೋಗಳ ಪೈಕಿ ಸಮಯ್ ರೈನಾ ಅವರ ಶೋ ಅಗ್ರಸ್ಥಾನಕ್ಕೇರಿರುವುದು ವರದಿಯ ಪ್ರಮುಖ ಅಂಶವಾಗಿದೆ.

ಚಿತ್ರಮಂದಿರಗಳಲ್ಲಿ ಯಶಸ್ಸಿನ ಬಳಿಕ ನೆಟ್‌ಫ್ಲಿಕ್ಸ್‌ಗೆ ಬಂದ ‘ಧುರಂಧರ್’ ಸಿನಿಮಾ 35.2 ಮಿಲಿಯನ್ ವೀಕ್ಷಣೆಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ 27.8 ಮಿಲಿಯನ್ ವೀಕ್ಷಣೆಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಇದೇ ಪಟ್ಟಿಯಲ್ಲಿ ‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ವೆಬ್‌ಸಿರೀಸ್ 17.8 ಮಿಲಿಯನ್ ವೀಕ್ಷಣೆಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ 17.5 ಮಿಲಿಯನ್ ವೀಕ್ಷಣೆಗಳೊಂದಿಗೆ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ. ‘ಚಿರಯ್ಯಾ’ ಚಿತ್ರ 16.3 ಮಿಲಿಯನ್ ವೀಕ್ಷಣೆಗಳೊಂದಿಗೆ ಟಾಪ್-10 ಪಟ್ಟಿಯನ್ನು ಪೂರ್ಣಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img