ಚಿನ್ನ ಕೇವಲ ಸ್ಥಿರ ಸಂಪತ್ತಾಗಿ ಉಳಿದಿಲ್ಲ, ಬದಲಾಗಿ ಕಾಲ ಉರುಳಿದಂತೆ ಹೆಚ್ಚು ಲಾಭ ನೀಡುವ ಕಮೊಡಿಟಿಯಾಗಿಯೂ ಪ್ರಸಿದ್ಧವಾಗುತ್ತಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಬಹುತೇಕ ಭಾರತೀಯ ಕುಟುಂಬಗಳು ಚಿನ್ನವನ್ನು ಹೊಂದಿವೆ ಕಾರಣ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವೆಂದೂ ನಂಬಲಾಗಿದೆ.
ಇನ್ನೊಂದೆಡೆ ರಾಷ್ಟ್ರದ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಚಿನ್ನದ ಮೀಸಲುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಮೌಲ್ಯದ ವಿಶ್ವಾಸಾರ್ಹ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಭಾರತವು ಸಹ ಸಾಕಷ್ಟು ಅಗಾಧ ಪ್ರಮಾಣದ ಚಿನ್ನದ ಮೀಸಲನ್ನು ಹೊಂದಿದೆ.
ಕ್ರಿಸ್‌ಮಸ್ ಹಬ್ಬದ ದಿನವಾದ ಇಂದು ಚಿನ್ನ, ಬೆಳ್ಳಿ ಬೆಲೆಗಳು ಅಲ್ಪ ಏರಿಕೆ ಆಗಿವೆ. ಚಿನ್ನದ ಬೆಲೆ 30 ರೂ, ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 12,735 ರೂನಿಂದ 12,765 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,925 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 233 ರೂನಿಂದ 234 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 245 ರೂ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,27,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 25ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,444 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,765 ರೂ
- ಚೆನ್ನೈ: 12,820 ರೂ
- ಮುಂಬೈ: 12,765 ರೂ
- ದೆಹಲಿ: 12,780 ರೂ
- ಕೋಲ್ಕತಾ: 12,765 ರೂ
- ಕೇರಳ: 12,765 ರೂ
- ಅಹ್ಮದಾಬಾದ್: 12,770 ರೂ
- ಜೈಪುರ್: 12,780 ರೂ
- ಲಕ್ನೋ: 12,780 ರೂ
- ಭುವನೇಶ್ವರ್: 12,765 ರೂ



