ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾಂಧಿ ಸರ್ಕಲ್ ಹತ್ತಿರದಲ್ಲಿ ಕೆನರಾ ಬ್ಯಾಂಕ್ ಎದುರು ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಂ.ಗಂಗರಾಹುತರ, ಅಧ್ಯಕ್ಷರಾದ ಕಾಮ್ರೆಡ್ ವಾಯ್.ಎಸ್. ನಾಯಕ್ ಇವರ ನೇತೃತ್ವದಲ್ಲಿ ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದರು.
ಕಾರ್ಮಿಕ ವಿರೋಧಿ ನೀತಿಯನ್ನು ಹೊಂದಿರುವ 4 ಕಾರ್ಮಿಕ ನೀತಿ ಸಂಹಿತೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬೇಕು, ಎಲ್ಲ ಇಲಾಖೆಗಳಲ್ಲಿ ಎಲ್ಲ ವರ್ಗದ ಹುದ್ದೆಗಳ ಅಗತ್ಯ ನೇಮಕಾತಿಯನ್ನು ಮಾಡಲೇಬೇಕು, ವಿಮಾ ಕಂಪನಿಗಳ ಖಾಸಗೀಕರಣ ಬೇಡ, ಸಾರ್ವತ್ರಿಕ ಬ್ಯಾಂಕುಗಳ ಖಾಸಗೀಕರಣ ಬೇಡ, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಇವೇ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಮುಷ್ಕರದಲ್ಲಿ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಹನುಮೇಶ್ ಎಂ.ಗಂಗರಾಹುತರ, ಅಧ್ಯಕ್ಷರಾದ ಕಾಮ್ರೆಡ್ ವಾಯ್.ಎಸ್. ನಾಯಕ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಮುಖಂಡರಾದ ಕಾಮ್ರೆಡ್ ಪ್ರವೀಣ್ ಅಣ್ಣಿಗೇರಿ, ಕಾಮ್ರೇಡ್ ರಮ್ಯ, ವಿಮಾ ನೌಕರರ ಸಂಘದ ಮುಖಂಡರಾದ ಕಾಮ್ರೆಡ್ ಜೆ.ಎಸ್. ತಳವಾರ, ಕಾಮ್ರೆಡ್ ವಿ.ಕೆ. ಮುದ್ಗಲ್‌ಮಠ, ಕಾಮ್ರೆಡ್ ಮಂಜುನಾಥ್ ದೊಡ್ಮನಿ, ಕಾಮ್ರೆಡ್ ಸಿದ್ದು ಉಮಚಗಿ, ಕಾಮ್ರೆಡ್ ವಿಜಯ್, ವಿನೋದ್ ಹೊಸೂರ, ಹರೀಶ್ ಬಾಗಲಕೋಟೆ, ದೀಪಕ್ ಕೊಲ್ಲಾಪುರಿ, ರಾಜು ಸಿಂಗಾಡಿ, ಕಾಮ್ರೆಡ್ ಅಶೋಕ್ ಗೌಡರ, ಕಾಮ್ರೆಡ್ ಸಿದ್ದನಗೌಡ, ಕಾಮ್ರೆಡ್ ಕೃಷ್ಣವೇಣಿ, ಕಾಮ್ರೆಡ್ ಸತ್ಯವ್ವ ಮೇಲ್ಮನಿ, ಕಾಮ್ರೆಡ್ ಜೊತ್ಸ್ನಾ ಟಿ, ಕಾಮ್ರೆಡ್ ಮಣಿಕಂಠ, ಕಾಮ್ರೆಡ್ ವಿಕ್ರಂ ಬಲೇರಿ, ಕಾಮ್ರೆಡ್ ಶ್ರೀಕಾಂತ್, ಕಾಮ್ರೆಡ್ ಮಧು, ಕಾಮ್ರೆಡ್ ಸತೀಶ್ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಂ.ಗಂಗರಾಹುತರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.



