ಕೊಲಂಬೊ: ಭಾರತ-ಪಾಕಿಸ್ತಾನ ಪೈಪೋಟಿ ಎಂದೇ ಪ್ರಸಿದ್ಧಿ ಪಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 61 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.
176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಕುಸಿದು ಪವರ್ ಪ್ಲೇಯಲ್ಲೇ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್ ಮಾತ್ರ ಪ್ರತಿರೋಧ ತೋರಿದರೆ ಉಳಿದ ಬ್ಯಾಟರ್‌ಗಳು ಬೇಗನೆ ಔಟ್ ಆದರು.
12ನೇ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊಹಮ್ಮದ್ ನವಾಜ್ ಕ್ಯಾಚ್ ಔಟ್ ಆದ ಕ್ಷಣದಿಂದ ಪಂದ್ಯ ಸಂಪೂರ್ಣ ಭಾರತ ಕಡೆ ತಿರುಗಿತು. ಈ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಟೇಡಿಯಂ ತೊರೆದು ಹೊರಟ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಭಾರತದ ಬೌಲರ್‌ಗಳ ದಾಳಿಗೆ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿನ ಬಳಿಕ ವಿವಿಧ ದೇಶಗಳ ಅಭಿಮಾನಿಗಳು ಸಂಭ್ರಮಿಸಿದರು.



