ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಇದೀಗ ಕಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ‘ಪಾಕೆಟ್ ನಾವೆಲ್’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿ ಅವರ ಪಾತ್ರದ ಸ್ವರೂಪ ಬಹಿರಂಗವಾಗಿದೆ – ಈ ಬಾರಿ ಅವರು ಖಳನಾಯಕ.
ಚಿತ್ರದ ನಾಯಕ ವಿಜಯ್ ಸೇತುಪತಿ ಆಗಿದ್ದರೆ, ನಾಯಕಿಯಾಗಿ ಮಾಳವಿಕಾ ಮೋಹನನ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ನಟ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ.
ಅರಣ್ಯ ಕಾಂಡಂ ಹಾಗೂ ಸೂಪರ್ ಡಿಲಕ್ಸ್ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿರಲಿದೆ ಎನ್ನಲಾಗುತ್ತಿದೆ.
ಈಗಾಗಲೇ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ರಾಜ್ ಬಿ ಶೆಟ್ಟಿ, ಲ್ಯಾಂಡ್‌ಲಾರ್ಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಯಕ ಛಾಯೆ ತೋರಿಸಿದ್ದರು. ಆದರೆ ಈ ಬಾರಿ ತಮಿಳು ಚಿತ್ರರಂಗದಲ್ಲೇ ಅವರ ಹೊಸ ಇಮೇಜ್ ನಿರ್ಮಾಣವಾಗುವ ನಿರೀಕ್ಷೆ ಮೂಡಿದೆ.



