ಸಿನಿಮಾ ಸಂಭ್ರಮ ಮಧ್ಯೆ ನಡೆದ ಘಟನೆಯೊಂದು ಇದೀಗ ಕಾನೂನು ವಿವಾದಕ್ಕೆ ತಿರುಗಿದೆ. ಜೆಸಿ ಸಿನಿಮಾ ಬಿಡುಗಡೆಯ ದಿನ ಥಿಯೇಟರ್‌ನಲ್ಲಿ ಅಭಿಮಾನಿಗಳ ನಡುವೆ ಲಾಂಗ್ ಹಿಡಿದು ಪೋಸ್ ನೀಡಿದ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಪಾಯಕಾರಿ ಆಯುಧದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗೋವಿಂದರಾಜ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.
ಇದೀಗ ಪೊಲೀಸರು ನಟರಿಗೆ ನೋಟಿಸ್ ನೀಡಿದ್ದು, ಲಾಂಗ್ ಎಲ್ಲಿಂದ ಬಂದಿತು ಮತ್ತು ಏಕೆ ಹಿಡಿದಿದ್ದರು ಎಂಬ ಬಗ್ಗೆ ವಿವರಣೆ ಕೇಳಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.



