ಕಾರವಾರ: ಗಾಂಜಾ ಸೇವಿಸಿ ಗೋಕರ್ಣ ಕಡಲ ತೀರದಲ್ಲಿ ಅಮಲಿನಲ್ಲಿ ಅಲೆದಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಐಟಿ ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಂ.ಎಸ್. ಪವನ್ (28) ಮತ್ತು ರಾಘು ಸೆಲ್ವರಂಗನ್ (30) ಎಂದು ಗುರುತಿಸಲಾಗಿದೆ. ಗೋಕರ್ಣದ ರುದ್ರಪಾದದ ಕರಿಯಪ್ಪನ ಕಟ್ಟೆ ಬಳಿ ಇರುವ ಬ್ಲೂ ಪೀನ್ ಬೀಚ್ ಸ್ಟೇಟ್ ರೆಸಾರ್ಟ್ ಎದುರಿನ ಸಮುದ್ರ ತೀರದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



