Home India News ಕ್ರೆಡಿಟ್ ಕಾರ್ಡ್ ಇಎಂಐ: ಕಾಣುವಷ್ಟು ಸುಲಭವಲ್ಲ, ಅಡಗಿರುವ ಖರ್ಚುಗಳಿಗೆ ಎಚ್ಚರ!

ಕ್ರೆಡಿಟ್ ಕಾರ್ಡ್ ಇಎಂಐ: ಕಾಣುವಷ್ಟು ಸುಲಭವಲ್ಲ, ಅಡಗಿರುವ ಖರ್ಚುಗಳಿಗೆ ಎಚ್ಚರ!

0
ಕ್ರೆಡಿಟ್ ಕಾರ್ಡ್ ಇಎಂಐ: ಕಾಣುವಷ್ಟು ಸುಲಭವಲ್ಲ, ಅಡಗಿರುವ ಖರ್ಚುಗಳಿಗೆ ಎಚ್ಚರ!
Spread the love

ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವವರು ಹೆಚ್ಚಿನವರು ಇಎಂಐ ಆಯ್ಕೆಯನ್ನು ಬಳಸುವುದು ಸಾಮಾನ್ಯ.

ವಿಶೇಷವಾಗಿ ದುಬಾರಿ ವಸ್ತುಗಳನ್ನು ಖರೀದಿಸುವಾಗ ಒಮ್ಮೆಗೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ ತಿಂಗಳ ಕಂತುಗಳಲ್ಲಿ ಪಾವತಿಸುವುದು ಸುಲಭವೆನಿಸುತ್ತದೆ. “ನೋ ಕಾಸ್ಟ್” ಅಥವಾ “ಝೀರೋ ಕಾಸ್ಟ್” ಇಎಂಐ ಎಂಬ ಆಫರ್‌ಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತವೆ.

ಆದರೆ ಈ ಇಎಂಐ ಆಯ್ಕೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಉದಾಹರಣೆಗೆ, ₹80,000 ಮೌಲ್ಯದ ವಾಷಿಂಗ್ ಮಷೀನ್ ಖರೀದಿಸಿ 12 ತಿಂಗಳ ಇಎಂಐ ಆಯ್ಕೆ ಮಾಡಿಕೊಂಡರೆ ತಿಂಗಳಿಗೆ ₹7,900 ಪಾವತಿಸುವುದು ಸುಲಭವೆನಿಸುತ್ತದೆ. ಆದರೆ ಈ ಕಂತುಗಳ ಹಿಂದೆ ಅಡಗಿರುವ ಖರ್ಚುಗಳನ್ನು ಹಲವರು ಗಮನಿಸುವುದಿಲ್ಲ.

ಇಎಂಐಗೆ ಪರಿವರ್ತಿಸಿದ ಕ್ಷಣದಿಂದಲೇ ಅದು ಸಾಲವಾಗುತ್ತದೆ. ಹಣಕಾಸು ಸಂಸ್ಥೆಗಳು ಇದಕ್ಕೆ ಶೇ.12ರಿಂದ 24ರವರೆಗೆ ವಾರ್ಷಿಕ ಬಡ್ಡಿ ವಿಧಿಸಬಹುದು. ಜೊತೆಗೆ ಪ್ರೋಸಸಿಂಗ್ ಫೀ, ಜಿಎಸ್‌ಟಿ ಸೇರಿದಂತೆ ಇತರೆ ಶುಲ್ಕಗಳೂ ಸೇರುತ್ತವೆ. ಇದರ ಪರಿಣಾಮವಾಗಿ ₹80,000 ಮೌಲ್ಯದ ವಸ್ತುವಿಗೆ ಒಟ್ಟು ₹1 ಲಕ್ಷದವರೆಗೆ ಪಾವತಿಸುವ ಸ್ಥಿತಿ ಎದುರಾಗಬಹುದು.

ಇಎಂಐಗೆ ಸಂಬಂಧಿಸಿದ ಪ್ರಮುಖ ಶುಲ್ಕಗಳು:

  • ಬಡ್ಡಿದರ: ಶೇ.12–24
  • ಪ್ರೋಸಸಿಂಗ್ ಫೀ: ಖರೀದಿ ಮೊತ್ತದ ಶೇ.1–3
  • ಜಿಎಸ್‌ಟಿ: ಬಡ್ಡಿ ಮತ್ತು ಪ್ರೋಸಸಿಂಗ್ ಫೀ ಮೇಲೆ ಶೇ.18
  • ಮುಂಗಡ ಪಾವತಿ ಶುಲ್ಕ: ಬಾಕಿ ಮೊತ್ತದ ಶೇ.1–5
  • ಕ್ಯಾಷ್‌ಬ್ಯಾಕ್/ರಿವಾರ್ಡ್ ನಷ್ಟ
  • ಮರ್ಚಂಟ್ ಡಿಸ್ಕೌಂಟ್ ನಷ್ಟ

ಇಎಂಐ ಆಯ್ಕೆ ಮಾಡಿಕೊಂಡ ನಂತರ ಮಧ್ಯದಲ್ಲಿ ಪೂರ್ಣ ಹಣ ಕಟ್ಟಲು ಯತ್ನಿಸಿದರೂ ದಂಡ ವಿಧಿಸುವ ಸಾಧ್ಯತೆ ಇದೆ. ಜೊತೆಗೆ, ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ಕ್ಯಾಷ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳು ಇಎಂಐ ಆಯ್ಕೆ ಮಾಡಿದರೆ ಅನ್ವಯವಾಗುವುದಿಲ್ಲ.

“ಝೀರೋ ಕಾಸ್ಟ್ ಇಎಂಐ” ಎಂಬ ಆಫರ್‌ಗಳಲ್ಲಿಯೂ ಗ್ರಾಹಕರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಈ ಆಫರ್‌ನಲ್ಲಿ ಬಡ್ಡಿ ಇಲ್ಲದಿದ್ದರೂ, ಅಂಗಡಿ ನೀಡುವ ಡಿಸ್ಕೌಂಟ್ ಕಡಿತಗೊಳ್ಳಬಹುದು. ಅಂದರೆ, ಬಡ್ಡಿಯ ಲಾಭ ಸಿಗುವುದಾದರೂ ರಿಯಾಯಿತಿ ತಪ್ಪುತ್ತದೆ.

ಒಟ್ಟಿನಲ್ಲಿ, ಇಎಂಐ ಆಯ್ಕೆ ಮಾಡುವ ಮುನ್ನ ಅದರ ಎಲ್ಲಾ ನಿಯಮಗಳು ಮತ್ತು ಅಡಗಿರುವ ಶುಲ್ಕಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.


Spread the love

LEAVE A REPLY

Please enter your comment!
Please enter your name here