ಪ್ಲೇಟ್‌ಲೆಟ್‌ಗಳು ನಮ್ಮ ರಕ್ತದಲ್ಲಿರುವ ಅತಿ ಮುಖ್ಯವಾದ ಸಣ್ಣ ಕೋಶಗಳಾಗಿದ್ದು, ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ದೇಹದಲ್ಲಿ ಗಾಯವಾದಾಗ, ಈ ಪ್ಲೇಟ್‌ಲೆಟ್‌ಗಳು ಗಾಯದ ಸ್ಥಳದಲ್ಲಿ ಸೇರಿ ರಕ್ತದ ಗಡ್ಡೆ ರಚಿಸಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಇರುತ್ತದೆ. ಈ ಪ್ರಮಾಣ 1.5 ಲಕ್ಷಕ್ಕಿಂತ ಕಡಿಮೆಯಾದರೆ ಎಚ್ಚರಿಕೆ ಅಗತ್ಯ. 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಸ್ಥಿತಿ, 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚಾಗಿ ಜೀವಕ್ಕೆ ಅಪಾಯ ಉಂಟಾಗಬಹುದು.
ಪ್ರಮುಖ ಕಾರಣಗಳು:
ಪ್ಲೇಟ್‌ಲೆಟ್‌ಗಳ ಕೊರತೆಗೆ ಹಲವಾರು ಕಾರಣಗಳಿವೆ:
ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ
ಟೈಫಾಯ್ಡ್ ಮತ್ತು ಇತರೆ ವೈರಲ್ ಜ್ವರಗಳು
ಲಿವರ್ ಸಮಸ್ಯೆಗಳು, ವಿಶೇಷವಾಗಿ ಸಿರೋಸಿಸ್
ಬೋನ್ ಮ್ಯಾರೋ ಸಮಸ್ಯೆಗಳು
ಕ್ಯಾನ್ಸರ್ ಮತ್ತು ಕೀಮೋಥೆರಪಿ
ಆಟೋಇಮ್ಯೂನ್ ರೋಗಗಳು
ಲಕ್ಷಣಗಳು ಹೇಗಿರುತ್ತವೆ?
ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವಾಗ ಕಾಣುವ ಪ್ರಮುಖ ಲಕ್ಷಣಗಳು:
- ಸಣ್ಣ ಗಾಯಕ್ಕೂ ರಕ್ತಸ್ರಾವ ಹೆಚ್ಚು ಆಗುವುದು
- ರಕ್ತಸ್ರಾವ ತಡವಾಗಿ ನಿಲ್ಲುವುದು
- ಚರ್ಮದ ಮೇಲೆ ಕೆಂಪು/ನೇರಳೆ ಚುಕ್ಕೆಗಳು
- ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವ
- ಮಹಿಳೆಯರಲ್ಲಿ ಹೆಚ್ಚು ಪೀರಿಯಡ್ಸ್ ಬ್ಲೀಡಿಂಗ್
- ದಣಿವು, ದುರ್ಬಲತೆ, ತಲೆಸುತ್ತು
- ಹೇಗೆ ರಕ್ಷಿಸಿಕೊಳ್ಳಬೇಕು?
- ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
- ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ
- ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
- ಪೌಷ್ಟಿಕ ಆಹಾರ ಸೇವಿಸಿ (ಹಸಿರು ತರಕಾರಿ, ಹಣ್ಣು, ಪ್ರೋಟೀನ್)
- ಸಾಕಷ್ಟು ನೀರು ಕುಡಿಯಿರಿ
- ಜ್ವರ/ದುರ್ಬಲತೆಯನ್ನು ನಿರ್ಲಕ್ಷಿಸಬೇಡಿ
- ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ
ಪ್ಲೇಟ್‌ಲೆಟ್‌ಗಳ ಪ್ರಮಾಣ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಜೀವ ರಕ್ಷಿಸುತ್ತದೆ.



