ಬಾಲಿವುಡ್ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ಮೊದಲ ಮಗಳು ದುವಾ ಜೊತೆಗಿರುವ ಮುದ್ದಾದ ಪೋಸ್ಟ್ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು.
ದೀಪಿಕಾ ಪ್ರೆಗ್ನೆನ್ಸಿಯಲ್ಲಿದ್ದರೂ ಪ್ರೊಫೆಷನಲ್ ಕಮಿಟ್ಮೆಂಟ್ಗೆ ತುತ್ತಾಗದೇ ಮುಂದುವರಿದಿರುವ ನಟಿ ಇದೀಗ ಕಿಂಗ್ ಸಿನಿಮಾದಲ್ಲಿ ಆಕ್ಷನ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯ ವಿಚಾರವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ, ಅವರು ಮುಂಬೈನ ಸ್ಟುಡಿಯೋ ಸೆಟ್ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶಾರುಖ್ ಖಾನ್ ಜೊತೆಗಿನ ಪ್ರಮುಖ ಸನ್ನಿವೇಶಗಳ ಜೊತೆಗೆ, ಭರ್ಜರಿ ಫೈಟ್ ಸೀಕ್ವೆನ್ಸ್ನಲ್ಲಿ ಭಾಗಿಯಾಗಿರುವುದು ಚಿತ್ರತಂಡದ ಬದ್ಧತೆಯನ್ನು ತೋರಿಸುತ್ತದೆ.



