HomeEntertainment‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ಸಂಕಷ್ಟ: ಯೂಟ್ಯೂಬ್‌ನಿಂದ ಮಾಯವಾದ ‘ಕೆಡಿ’ ಸಿನಿಮಾ ಟ್ರೇಲರ್

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ಸಂಕಷ್ಟ: ಯೂಟ್ಯೂಬ್‌ನಿಂದ ಮಾಯವಾದ ‘ಕೆಡಿ’ ಸಿನಿಮಾ ಟ್ರೇಲರ್

For Dai;y Updates Join Our whatsapp Group

Spread the love

ರಿಲೀಸ್‌ಗೆ ಕೆಲವೇ ದಿನ ಬಾಕಿ ಇರುವಾಗಲೇ KD: The Devil ಸಿನಿಮಾ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಧ್ರುವ ಸರ್ಜಾ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಎರಡು ದಿನಗಳಲ್ಲೇ ಯೂಟ್ಯೂಬ್‌ನಿಂದ ಅಳಿಸಲಾಗಿದ್ದು, ಸಿನಿ ವಲಯದಲ್ಲಿ ಅನುಮಾನಗಳನ್ನು ಹುಟ್ಟಿಸಿದೆ.

ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್‌ ನೀಡಿರುವ ಮಾಹಿತಿಯ ಪ್ರಕಾರ, ಟ್ರೇಲರ್‌ನಲ್ಲಿ ಸೆನ್ಸಾರ್ ಪ್ರಮಾಣೀಕರಣಕ್ಕೆ ವಿರುದ್ಧವಾದ ಕೆಲವು ಅಂಶಗಳು ಸೇರಿದ್ದರಿಂದ ಅದನ್ನು ಪ್ರೈವೇಟ್ ಮಾಡಲಾಗಿದೆ. ಇದೀಗ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿ ಮರುಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಇದೇ ವೇಳೆ, KVN ಸಂಸ್ಥೆಗೆ ಇದು ಮತ್ತೊಂದು ಹಿನ್ನಡೆ ಎಂದೇ ಹೇಳಬಹುದು. ಈ ಹಿಂದೆ ವಿಜಯ್ ನಟನೆಯ ‘ಜನ ನಾಯಗನ್’ ಮುಂದೂಡಿಕೆಯಾದರೆ, ಯಶ್ ಅಭಿನಯದ ‘ಟಾಕ್ಸಿಕ್’ ಕೂಡ ಬಿಡುಗಡೆ ದಿನಾಂಕ ಬದಲಾವಣೆ ಕಂಡಿತ್ತು.

‘ಕೆಡಿ’ ಸಿನಿಮಾ ಆರಂಭದಿಂದಲೂ ವಿವಾದಗಳ ನಡುವೆ ಸಾಗುತ್ತಿದ್ದು, ಹಾಡು ವಿರೋಧ, ಸೆನ್ಸಾರ್ ಸಮಸ್ಯೆ ಬಳಿಕ ಇದೀಗ ಟ್ರೇಲರ್ ಡಿಲೀಟ್ ಆಗಿರುವುದು ತಂಡಕ್ಕೆ ದೊಡ್ಡ ಸವಾಲಾಗಿದೆ.

ಏಪ್ರಿಲ್ 30ರಂದು ಬಿಡುಗಡೆ ಗುರಿಯಿಟ್ಟಿರುವ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದರೂ, ಈ ಬೆಳವಣಿಗೆ ಚಿತ್ರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭಿಮಾನಿಗಳು ಇದೀಗ ಹೊಸ ಟ್ರೇಲರ್ ಹಾಗೂ ಅಧಿಕೃತ ಸ್ಪಷ್ಟನೆಗಾಗಿ ಕಾದು ಕುಳಿತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!