ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಲ್ಲಿ ಫ್ಲೈ 91 ಸಂಸ್ಥೆಯ ವಿಮಾನಗಳಿಗೆ ಪದೇ ಪದೇ ಲ್ಯಾಂಡಿಂಗ್ ಸಮಸ್ಯೆಗಳು ಎದುರಾಗುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ಘಟನೆಯಲ್ಲಿ ಹೈದರಾಬಾದ್‌ನಿಂದ ಬಂದ ವಿಮಾನವು ಹವಾಮಾನ ವೈಪರಿತ್ಯದ ಹಿನ್ನೆಲೆ ಸುಮಾರು 40 ನಿಮಿಷಗಳ ಕಾಲ ಆಗಸದಲ್ಲೇ ಸುತ್ತಾಡಿ ನಂತರ ಸುರಕ್ಷಿತವಾಗಿ ಇಳಿಯಬೇಕಾಯಿತು. ಈ ಮೂಲಕ ವಾರದಲ್ಲೇ ಮೂರನೇ ಬಾರಿ ಇದೇ ರೀತಿಯ ತೊಂದರೆ ದಾಖಲಾಗಿದೆ.
ಇದಕ್ಕೂ ಮೊದಲು ಫೆಬ್ರವರಿ 19 ಮತ್ತು 21ರಂದು ನಡೆದ ಘಟನೆಗಳಲ್ಲಿ ವಿಮಾನಗಳು ಗಂಟೆಗಳ ಕಾಲ ಹಾರಾಡಿ ಬಳಿಕ ತಡವಾಗಿ ಲ್ಯಾಂಡ್ ಆಗಿದ್ದವು. ಅಧಿಕಾರಿಗಳು ಹವಾಮಾನ ಕಾರಣವನ್ನು ಮುಂದಿಟ್ಟರೂ, ಒಂದೇ ಸಂಸ್ಥೆಯ ವಿಮಾನಗಳಿಗೆ ಮಾತ್ರ ಈ ಸಮಸ್ಯೆ ಮರುಕಳಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸಮಯೋಚಿತ ಮಾಹಿತಿ ನೀಡದ ಏರ್‌ಲೈನ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾನ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.



