ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಪಟ್ಟಣದ ಸಮರ್ಥ ಪುಡ್ಸ್ (ಖಡಕ್ ರೊಟ್ಟಿ ಕೇಂದ್ರ)ಗೆ ಕರ್ನಾಟಕ ಸರಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ), ಬೆಂಗಳೂರು ವತಿಯಿಂದ ಅತ್ಯುತ್ತಮ ಸೇವಾ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಧಾರವಾಡದ ಆಲೂರ ವೆಂಕಟರಾವ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೊಟ್ಟಿ ತಯಾರಿಕೆಯ ಮೂಲಕ ಅನೇಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿ ರಾಜ್ಯಾದ್ಯಂತ ಹೆಸರು ಗಳಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗುರುಚರಂತಯ್ಯ ಕೊಣ್ಣೂರಹಿರೇಮಠ, ಲೋಸಿ ಸಾಲ್ಡಾನ, ಬಸವರಾಜ ಗುರಿಕಾರ, ಎಲ್.ಐ. ಲಕ್ಕಮ್ಮನವರ, ರಮಾ ಆರ್., ಪರ್ವಿನಬಾನು ಬುಳ್ಳಣ್ಣವರ, ಬಸವರಾಜ ಬಾಗಲ್, ಮಂಜುನಾಥ ಮಟ್ಟಿ ಹಾಗೂ ಗೀತಾ ಪ್ರಧಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



