HomeGadag Newsಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್‌ಗೆ ₹3.81 ಕೋಟಿ ಲಾಭ

ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್‌ಗೆ ₹3.81 ಕೋಟಿ ಲಾಭ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಲಿ., ಗದಗ 2025–26ನೇ ಸಾಲಿನಲ್ಲಿ ತೆರಿಗೆ ಪೂರ್ವ ₹3.81 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹನ ಟಿ. ಕೋಟಿ ತಿಳಿಸಿದರು.

ನಗರದ ಎಸ್.ಬಿ.ಎಸ್. ಗಾರ್ಡನ್‌ನಲ್ಲಿ ನಡೆದ ಬ್ಯಾಂಕಿನ 62ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್, ಐಎಂಪಿಎಸ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸದಸ್ಯರಿಗೆ ಪ್ರೋತ್ಸಾಹಧನ, ಸದಸ್ಯರ ಕಲ್ಯಾಣ ನಿಧಿ ಹಾಗೂ ಅಪಘಾತ ವಿಮೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುಬೇರಗೌಡ ಎಸ್. ಪರ್ವತಗೌಡ್ರ, ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಸಿ. ರಾಮನಕೊಪ್ಪ, ಶರಣಬಸಪ್ಪ ಕೆ. ಕುರಡಗಿ, ತೋತೋಸಾ ಆರ್. ಭಾಂಡಗೆ, ಸಂತೋಷ ಬಿ. ಅಬ್ಬಿಗೇರಿ, ಚಂದ್ರಕಾಂತ ಎಸ್. ಸಂಕಣ್ಣವರ, ಶಿವಾನಂದ ಎಚ್. ನಡವಲಗುಡ್ಡ, ಚನವೀರಪ್ಪ ಟಿ. ದುಂದೂರ, ಶಿವವ್ವ ಕೆ. ಕುರಡಗಿ, ಪಾರ್ವತಿದೇವಿ ಎಸ್. ಸಂಕಣ್ಣವರ, ವೃತ್ತಿಪರ ನಿರ್ದೇಶಕರಾದ ಸಿ.ಎ. ಬಸವರಾಜ ಎಂ. ಬಳಗೇರಿ ಹಾಗೂ ಬಸವರಾಜ ಎಂ. ಬಂದಕ್ಕನವರ, ಬ್ಯಾಂಕಿನ ಶೇರುದಾರರು, ಠೇವಣಿದಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img