ಗದಗ: ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಆ.10ರಂದು ನೆರವೇರಿದ್ದು, ಒಟ್ಟು 6,36,616 ರೂ. ನಗದು ಹಾಗೂ 1.3 ಗ್ರಾಂ ಚಿನ್ನ ಸಂಗ್ರಹವಾಗಿರುವುದು ತಿಳಿದುಬಂದಿದೆ.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪ.ಪೂಜ್ಯ ಕಲ್ಲಯ್ಯಜ್ಜನವರ ಸಮ್ಮುಖದಲ್ಲಿ ಇದೇ ಮೊದಲ ಬಾರಿಗೆ ಟ್ರಸ್ಟಿಗಳು ಹಾಗೂ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆಸಲಾಯಿತು. ಭಕ್ತರು ಸಲ್ಲಿಸಿದ್ದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಹುಂಡಿ ಎಣಿಕೆ ಸಂದರ್ಭದಲ್ಲಿ 1.3 ಗ್ರಾಂ ಚಿನ್ನದ ಜೊತೆಗೆ 6,36,616 ರೂ. ನಗದು ಸಂಗ್ರಹವಾಗಿರುವುದು ಲೆಕ್ಕಪತ್ರದಲ್ಲಿ ದಾಖಲಾಗಿದೆ. ಎಣಿಕೆ ಕಾರ್ಯದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಉಪಾಧ್ಯಕ್ಷ ಪ್ರಕಾಶ ಬಸರಿಗೆಡ, ಸಂಗಮೇಶ ದುಂದೂರ, ಶಿವರುದ್ರಪ್ಪ ಇಟಗಿ, ಪಿ.ಸಿ. ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ, ಪುಣ್ಯಾಶ್ರಮದ ಹಳೆಯ ವಿದ್ಯಾರ್ಥಿ ಸಾಧಕರ ಪ್ರತಿನಿಧಿ ಸಂದೀಪ ಸೇರಿದಂತೆ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಭಕ್ತರು ಸಲ್ಲಿಸಿದ ಕಾಣಿಕೆಗಳ ಮೂಲಕ ಸಂಗ್ರಹವಾದ ಹಣ ಹಾಗೂ ಚಿನ್ನದ ವಿವರಗಳನ್ನು ಹುಂಡಿ ಎಣಿಕೆ ಕಾರ್ಯದ ಮೂಲಕ ದಾಖಲಿಸಲಾಗಿದೆ ಎಂದು ಪುಣ್ಯಾಶ್ರಮದ ಪ್ರಕಟಣೆ ತಿಳಿಸಿದೆ.



