HomeGadag Newsಗದಗದ KRIDL ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ವಿಜಯವಾಡದತ್ತ ತೆರಳಿದ್ರಾ ಫರ್ವೇಜ್?

ಗದಗದ KRIDL ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ವಿಜಯವಾಡದತ್ತ ತೆರಳಿದ್ರಾ ಫರ್ವೇಜ್?

For Dai;y Updates Join Our whatsapp Group

ಗದಗ: ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದು ಹಾಗೂ ಗುತ್ತಿಗೆದಾರರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಇಲಾಖೆ ಎಂಡಿಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಗದಗದ ಕೆಆರ್‌ಐಡಿಎಲ್ ಎಇಇ ಅಧಿಕಾರಿ ಫರ್ವೇಜ್ ಧಾರವಾಡ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ನಡೆಯಲಿದ್ದ ಇಲಾಖೆಯ ಸಭೆಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಫರ್ವೇಜ್ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.

ಅಧಿಕಾರಿ ಪತ್ತೆಗಾಗಿ ಗದಗ ಎಸ್ಪಿ ಮಿಥುನ್ ಎಚ್.ಎನ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ ಐದು ತಂಡಗಳನ್ನು ರಚಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಂಗಳೂರಿನಿಂದ ವಿಜಯವಾಡದತ್ತ ಪ್ರಯಾಣ?

ಪೊಲೀಸರ ತನಿಖೆಯಲ್ಲಿ ಫರ್ವೇಜ್ ಗದಗದಿಂದ ಬೆಂಗಳೂರಿಗೆ ತೆರಳಿದ್ದು, ಬಳಿಕ ಆಂಧ್ರಪ್ರದೇಶದ ವಿಜಯವಾಡದತ್ತ ಪ್ರಯಾಣಿಸಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಅವರ ಮೊಬೈಲ್‌ನ ಕೊನೆಯ ಲೊಕೇಷನ್ ವಿಜಯವಾಡ ಎಂದು ತಿಳಿದುಬಂದಿದ್ದು, ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಆಂಧ್ರಪ್ರದೇಶದಲ್ಲೂ ಹುಡುಕಾಟ ನಡೆಸುತ್ತಿದ್ದಾರೆ.

ಫರ್ವೇಜ್ ಮನೆಯಿಂದ ಹೊರಡುವಾಗ ಸುಮಾರು ₹40 ಸಾವಿರ ನಗದು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆದರೆ ನಾಪತ್ತೆಯಾದ ಬಳಿಕ ಅವರ ಎಟಿಎಂ ಕಾರ್ಡ್ ಅಥವಾ ಮೊಬೈಲ್ ಬಳಕೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಈ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಪೊಲೀಸರು ಅವರ ಚಲನವಲನ ಪತ್ತೆಹಚ್ಚಲು ಮುಂದಾಗಿದ್ದಾರೆ.

ಡಿವೈಎಸ್‌ಪಿ ಮೇಲ್ವಿಚಾರಣೆಯಲ್ಲಿ ಐದು ಪೊಲೀಸ್ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಫರ್ವೇಜ್ ಸ್ವಯಂ ಎಲ್ಲಿಗಾದರೂ ತೆರಳಿದ್ದಾರೆಯೇ ಅಥವಾ ಅವರ ನಾಪತ್ತೆಯ ಹಿಂದೆ ಬೇರೆ ಕಾರಣವಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

2024ರಲ್ಲೂ ನಾಪತ್ತೆಯಾಗಿದ್ದ ಫರ್ವೇಜ್:

ಇನ್ನು ಫರ್ವೇಜ್ ಈ ಹಿಂದೆ ಕೂಡ ನಾಪತ್ತೆಯಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. 2024ರ ಫೆಬ್ರವರಿಯಲ್ಲಿ 4ರಿಂದ 5 ದಿನಗಳ ಕಾಲ ನಾಪತ್ತೆಯಾಗಿದ್ದ ಅವರು, ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದ ಆರೋಪ ಮಾಡಿದ್ದರು. ಆಗ ಪೊಲೀಸರು ನಡೆಸಿದ ಹುಡುಕಾಟದಲ್ಲಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಪತ್ತೆಯಾಗಿದ್ದರು.

ಇದೀಗ ಎರಡನೇ ಬಾರಿಗೆ ಫರ್ವೇಜ್ ನಾಪತ್ತೆಯಾಗಿರುವುದು ಇಲಾಖೆಯ ಅಧಿಕಾರಿಗಳು ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದು ಮತ್ತು ಗುತ್ತಿಗೆದಾರರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ಅಂಶಗಳನ್ನೂ ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ. ಸದ್ಯ ಫರ್ವೇಜ್ ಪತ್ತೆಗೆ ಐದು ತಂಡಗಳಿಂದ ಶೋಧ ಕಾರ್ಯ ಮುಂದುವರಿದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img