ಬಿಗ್ ಬಾಸ್ ಕನ್ನಡ ಸೀಸನ್ 13ರಿಂದ ಮಾಡರ್ನ್ ಮಹಾಕವಿ ಮಂಜ ಎಲಿಮಿನೇಟ್ ಆಗಿದ್ದಾರೆ.
ದೊಡ್ಮನೆಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ವತಃ ಮಂಜು ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.
ಕಾಮನ್‌ಮ್ಯಾನ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ಮಾಡರ್ನ್ ಮಹಾಕವಿ ಮಂಜ, ಮನೆಯ ಇತರ ಸ್ಪರ್ಧಿಗಳ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಸಭ್ಯ ಪದಗಳನ್ನು ಬಳಸಿರುವ ಆರೋಪವೂ ಕೇಳಿಬಂದಿದೆ.
ಈ ವಿಚಾರವಾಗಿ ಬಿಗ್ ಬಾಸ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಮಂಜು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಎಲಿಮಿನೇಷನ್ ಘೋಷಿಸುವ ಮುನ್ನ ಮನೆಯ ನಿಯಮಗಳ ಉಲ್ಲಂಘನೆ ಹಾಗೂ ಮಂಜ ಅವರ ವರ್ತನೆಯ ಬಗ್ಗೆ ಬಿಗ್ ಬಾಸ್ ಸ್ಪಷ್ಟನೆ ನೀಡಿದ್ದಾರೆ.
ಮಂಜ ಮನೆಯಿಂದ ಹೊರಹೋಗುತ್ತಿದ್ದಂತೆ ಸ್ಪರ್ಧಿ ಯಶಸ್ ಸಂತಸ ವ್ಯಕ್ತಪಡಿಸಿದ್ದಾರೆ. “ಥ್ಯಾಂಕ್ಸ್ ಬಿಗ್ ಬಾಸ್, ಜಸ್ಟಿಸ್ ಸಿಕ್ಕಿದೆ” ಎಂದು ಹೇಳಿದ ಯಶಸ್ ಸಿಹಿ ತಿನ್ನುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇತ್ತ ಮಂಜ ಅವರ ಎಲಿಮಿನೇಷನ್‌ನಿಂದ ಆಸಿಯಾ ಫಿರ್ದೋಸ್, ತಾಂಡವ್ ರಾಮ್ ಹಾಗೂ ಜಗ್ಗ ಮಮ್ಮಿ ಅಚ್ಚರಿಗೆ ಒಳಗಾಗಿದ್ದಾರೆ. ಮಾಡರ್ನ್ ಮಹಾಕವಿ ಮಂಜ ಅವರ ಅನಿರೀಕ್ಷಿತ ನಿರ್ಗಮನ ಬಿಗ್ ಬಾಸ್ ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ.



