ಯೋಗಿ ಪುಟ್ಟರಾಜರು ಭಕ್ತರ ಮನದಲ್ಲಿದ್ದಾರೆ : ಶ್ರೀಕಾಂತ ಡೊಳ್ಳಿನ

0
A special pooja program
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಭಕ್ತರ ಹೃದಯದಲ್ಲಿ ನೆಲೆಸಿರುವ ಗದುಗಿನ ವೀರೇಶ್ವರ ಪುಣ್ಯಾಶ್ರಮದ ನಡೆದಾಡುವ ದೇವರು, ಡಾ.ಪುಟ್ಟರಾಜ ಕವಿ ಗವಾಯಿಗಳವರು ನಮ್ಮೊಂದಿಗೆ ಇಲ್ಲದಿರಬಹುದು. ಭಕ್ತರ ಮನದಲ್ಲಿ ಸದಾ ನೆಲೆಯೂರಿದ ಯೋಗಿಯಾಗಿದ್ದಾರೆ ಎಂದು ಕಾರಕೂನ ಸಂಘದ ಅಧ್ಯಕ್ಷ ಶ್ರೀಕಾಂತ ಡೊಳ್ಳಿನ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಜಗಜ್ಯೋತಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಸಿದ್ಧಿ ವಿನಾಯಕನ ದೇವಸ್ಥಾನದಲ್ಲಿ ಕಾರಕೂನ ಸಂಘದ ವತಿಯಿಂದ ಗಾನಯೋಗಿ ಲಿಂ.ಡಾ.ಪಂ.ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಲಿಂಗೈಕ್ಯರಾಗಿದ್ದು, ಅಂಧ, ಅನಾಥರ ಬಗೆಗಿನ ಅವರ ಕಾಳಜಿಯ ಮಹತ್ಕಾರ್ಯಗಳ ನೆನಪು ಮಾತ್ರ ಅಜರಾಮರ. ಅವರ ಸ್ಥಾನದಲ್ಲಿ ಈಗ ಪ.ಪೂಜ್ಯ ಕಲ್ಲಯ್ಯಜ್ಜನವರು ಪುಣ್ಯಾಶ್ರಮದ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ಅಂಧ, ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ವೀರೇಶ ಸಂಗಮದ ಮಾತನಾಡಿ, ಪುಟ್ಟರಾಜರು ಅವಿಶ್ರಾಂತವಾಗಿ ಸಂಗೀತ, ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಅಂಧ-ಅನಾಥರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು 98 ವಸಂತಗಳನ್ನು ಪೂರೈಸಿದ ಮಹಾನ್ ಚೇತನ ಎಂದರು.

ಈ ವೇಳೆ ರವಿ ಪವಾರ, ಕುಮಾರ ಸಂಗಮದ, ಮಂಜು ಸಂಗನಾಳ, ಬಸವರಾಜ ಜಾಲಿಯಳ, ಈರಪ್ಪ ಉಳ್ಳಾಗಡ್ಡಿ, ಕಳಕಪ್ಪ ಹಿರೇಕೊಪ್ಪ, ವೀರೇಶ ಗೌರಿಮಠ, ಪ್ರವೀಣ್ ಕರಮುಡಿ, ನರಸಪ್ಪ ಕುಷ್ಟಗಿ ಹಾಗೂ ಶ್ರಮಜೀವಿ ಸಂಘದ ಅಧ್ಯಕ್ಷ ಪರಶುರಾಮ ಕಲಾಲ, ಬಸವರಾಜ ಸುರಕೊಡ, ಕುಬೇರ ಹೊಸಮನಿ, ಯಶವಂತ ಪವಾರ, ಕೃಷ್ಣ ಘೋರ್ಪಡೆ ಸೇರಿ ವರ್ತಕ ಸಂಘದವರು, ಶ್ರಮಜೀವಿಗಳ ಸಂಘದವರು ಹಾಗೂ ರೈತ ಬಾಂಧವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here