HomeGadag Newsಕೆ.ಆರ್. ಚಿನ್ನಪ್ಪಗೌಡರಿಗೆ ಸನ್ಮಾನ

ಕೆ.ಆರ್. ಚಿನ್ನಪ್ಪಗೌಡರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಪರ ಜಿಲ್ಲಾ ಸರಕಾರಿ ವಕೀಲರಾಗಿ ನೇಮಕವಾದ ಗದಗ ನಗರದ ಕಳಕನಗೌಡ ರಾಯನಗೌಡ ಚಿನ್ನಪ್ಪಗೌಡರನ್ನು ಗೆಳೆಯರ ಬಳಗ ಹಾಗೂ ಸಮಾಜಬಾಂಧವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಮೇಶ ಕಲಬುರ್ಗಿ ಮಾತನಾಡಿ, ಚಿನ್ನಪ್ಪಗೌಡ ವಕೀಲರು ಅನೇಕರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಬಡವರಿಗಾಗಿ, ಹಣವಿಲ್ಲದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಎಂತಹ ಹಳೆಯ ಕೇಸುಗಳನ್ನು ಸಹ ಅವರು ಪ್ರಾಮಾಣಿಕ ಪ್ರಯತ್ನದಿಂದ ಯಶಸ್ವಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಇನ್ನೂ ಅನೇಕ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ವಿಶೇಷ ಚೇತನ ಮಕ್ಕಳಿಗೆ ಸಹಾಯ ಸಹಕಾರ ನೀಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿನ್ನಪ್ಪಗೌಡ, ನನ್ನ ಎಲ್ಲ ಗೆಳೆಯರ ಬಳಗದ ಸಹಾಯ ಸಹಕಾರದಿಂದ ಈ ಗುರಿ ಮುಟ್ಟಲು ಸಾಧ್ಯವಾಗಿದೆ. ಮುಂಬರುವ ದಿನಗಳಲಿವಿನ್ನೂ ಹೆಚ್ಚು ಸಮಾಜಮುಖಿಯಾಗಿ ಕಾರ್ಯ ಮಾಡುವೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಸಿಸ್ಟಂಟ್ ಗವರ್ನರ್ ಎಸ್.ಎಸ್. ಹೊಸಳ್ಳಿಮಠ, ಗೆಳೆಯರ ಬಳಗದ ಸುರೇಶ ತುಪ್ಪದ, ಮಂಜುನಾಥ ಬೆಂತೂರ, ಪ್ರಕಾಶ ಉಮಚಗಿ, ವೆಂಕಟೇಶ ಜಾಡರ, ಈರಣ್ಣ ಸೂಡಿಶೆಟ್ಟರ, ಸಿದ್ಧಲಿಂಗೇಶ ಹುಬ್ಬಳ್ಳಿ, ಮಹೇಶ ಮಲ್ಲಾಪೂರ, ಶಿವಣ್ಣ ಬ್ಯಾಹಟ್ಟಿ, ರಾಮೇನಹಳ್ಳಿ ವಕೀಲರು, ಶಿವು ಬಿನ್ನಾಳ, ಅಶಿಷ ಖಂಡೆಪ್ಪಗೌಡ್ರ, ಸ್ಪಂದನ ಚಿನ್ನಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img