ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ನಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಬಿಎಂಆರ್ಸಿಎಲ್ ಟಿಕೆಟ್ ದರವನ್ನು ಪ್ರಕಟಿಸಿದೆ.

ನವೆಂಬರ್ 14ರ ಬೆಳಿಗ್ಗೆ 6 ಗಂಟೆಯಿಂದ ಪಿಂಕ್ ಲೈನ್ನಲ್ಲಿ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ.
ನವೆಂಬರ್ 13ರ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಂಕ್ ಲೈನ್ ಮೆಟ್ರೋಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಳಿಕ ನವೆಂಬರ್ 14ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಈ ಮಾರ್ಗ ಮುಕ್ತವಾಗಲಿದೆ.
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗೆ ಪ್ರಯಾಣಿಸಲು ₹30 ಟಿಕೆಟ್ ದರ ನಿಗದಿಪಡಿಸಲಾಗಿದೆ. ಉಳಿದ ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನೂ ಬಿಎಂಆರ್ಸಿಎಲ್ ಪ್ರಕಟಿಸಿದೆ.
ಎಲ್ಲಿಂದ ಎಲ್ಲಿಗೆ ಎಷ್ಟು ಟಿಕೆಟ್ ದರ?
-
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರ – ₹30
-
ಎಸ್.ಜಿ. ಪಾಳ್ಯದಿಂದ ಹುಳಿಮಾವು – ₹20
-
ಎಸ್.ಜಿ. ಪಾಳ್ಯದಿಂದ ಐಐಎಂಬಿ (ಬಿಳೇಕಹಳ್ಳಿ) – ₹20
-
ಎಸ್.ಜಿ. ಪಾಳ್ಯದಿಂದ ಎನ್.ಎಸ್. ಪಾಳ್ಯ – ಜೆ.ಪಿ. ನಗರ 4ನೇ ಹಂತ – ₹10
8 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ:
ಪಿಂಕ್ ಲೈನ್ನಲ್ಲಿ ಮೊದಲ ಹಂತದಲ್ಲಿ ಬಿಇಎಂಎಲ್ನಿಂದ ಬಂದಿರುವ ಐದು ಮೆಟ್ರೋ ರೈಲುಗಳು ಸಂಚರಿಸಲಿವೆ. ಸುಮಾರು 8 ನಿಮಿಷಕ್ಕೊಂದು ರೈಲು ಲಭ್ಯವಾಗುವ ನಿರೀಕ್ಷೆಯಿದೆ.
ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗಿನ ಸುಮಾರು 7.5 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಒಟ್ಟು ಆರು ಮೆಟ್ರೋ ನಿಲ್ದಾಣಗಳಿವೆ. ಈ ಕಾಮಗಾರಿಗೆ ಸುಮಾರು ₹3,470 ಕೋಟಿ ವೆಚ್ಚ ಮಾಡಲಾಗಿದೆ.










