ಬೆಂಗಳೂರು: ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಜುಲೈ 29ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರಮುಖ ಪ್ರದೇಶಗಳು:
- ನಾರ್ತ್ ಗೇಟ್ 1, 2, 3
- ರಾಯಭಾರ ಕಚೇರಿ ಹಾಗೂ ಫಿಲಿಪ್ಸ್ ಕಂಪನಿ ಸುತ್ತಮುತ್ತಲಿನ ಪ್ರದೇಶಗಳು
- ದ್ವಾರಕಾನಗರ, ಬಾಬಾನಗರ ಹಾಗೂ ಕಟ್ಟಿಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು
- ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ ಹಾಗೂ ವಿನಾಯಕನಗರ
- ಮಣಿಪಾಲ ಕಾಲೇಜು, ಬಿಎಸ್‌ಎಫ್ ಕ್ಯಾಂಪ್ ಮತ್ತು ಪಿಡಿಎಂಎಸ್ ಪ್ರದೇಶಗಳು
ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಹಾಗೂ ಉದ್ಯಮಗಳಿಗೆ ಉಂಟಾಗುವ ಅನಾನುಕೂಲತೆಗಾಗಿ ಬೆಸ್ಕಾಂ ವಿಷಾದ ವ್ಯಕ್ತಪಡಿಸಿದೆ. ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಹಾಗೂ ಕಾಮಗಾರಿ ಅವಧಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದೆ.



