HomeGadag Newsಪುರಾಣ ಶ್ರವಣದಿಂದ ಒತ್ತಡ ಮುಕ್ತಿ : ಅಂದಪ್ಪ ಬಿಂಗಿ

ಪುರಾಣ ಶ್ರವಣದಿಂದ ಒತ್ತಡ ಮುಕ್ತಿ : ಅಂದಪ್ಪ ಬಿಂಗಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣ ಸಂಸ್ಕೃತಿಗಳನ್ನು ಯುವಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಬಂಗಾರವಾಗಲಿದೆ ಎಂದು ಕೇಶವ ಪಾರ್ಕ್ನ ಸಿದ್ಧಗಂಗಾಶ್ರೀ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಅಂದಪ್ಪ ಬಿಂಗಿ ಅಭಿಪ್ರಾಯಪಟ್ಟರು.

ಅವರು ನಗರದ ಸಿದ್ಧಗಂಗಾಶ್ರೀ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರಥಮ ಬಾರಿಗೆ ಗಣೇಶನ ಪ್ರತಿಷ್ಠಾಪನೆ ಹಾಗೂ ಭಜನಾ ಮಂಗಲ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಮಹಾ ಅನ್ನಸಂತರ್ಪಣೆ , ಶ್ರಾವಣ ಮಾಸದಲ್ಲಿ ಜರುಗಿದ ಭಜನಾ ಮಂಗಲ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗ, ವ್ಯವಹಾರದಲ್ಲಿ ಒತ್ತಡದ ಜೀವನ ಸಾಗಿಸುವಂತಾಗಿದೆ. ಒತ್ತಡದಿಂದ ಮುಕ್ತರಾಗಲು ಭಜನೆ, ಕೀರ್ತನೆಗಳು, ಪುರಾಣ-ಪ್ರವಚನ, ಭಕ್ತಿ ಸಂಗೀತ ಸಹಕಾರಿಯಾಗಲಿವೆ ಎಂದರು. ಈ ಸಂದರ್ಭದಲ್ಲಿ ಕೇಶವ ಪಾರ್ಕ್ನ ಸಿದ್ಧಗಂಗಾಶ್ರೀ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜ ಹಿರೇಮಠ, ಕಾರ್ಯದರ್ಶಿ ಬಸಯ್ಯ ಇಟಗಿಮಠ, ಖಜಾಂಚಿ ಜಗದೀಶಗೌಡ ಹುಡೇದ, ಪದಾಧಿಕಾರಿಗಳಾದ ಮಂಜುನಾಥ ಅಸೂಟಿ, ಶರಣಪ್ಪ ಪಲ್ಲೇದ, ಸಿದ್ಧಣ್ಣ ಜವಳಿ, ಅಶೋಕಗೌಡ ಪಾಟೀಲ, ಅಶೋಕ ಮಾನ್ವಿ, ಫಕ್ಕೀರೇಶ ಬೆಳವಗಿ, ಮಂಜಯ್ಯ ಹಿರೇಮಠ, ಬಸಯ್ಯ ರುದ್ರಾಪೂರಮಠ, ಚಂದ್ರಕಾಂತ ಮುದಗಲ್, ನಾಗರಾಜ ಶಿರೂರ, ಸಂಗನಬಸಪ್ಪ ಕುಂಬಾರ, ಎಂ.ಸಿ. ಹಿರೇಮಠ, ಎಚ್.ಎನ್. ಡೋಣಿ, ಎಲ್.ಎ. ಕವಲೂರ, ರಮೇಶ ಕುಂಬಾರ, ಮಲ್ಲು ಪಾಟೀಲ, ಚಂದ್ರಶೇಖರ ಹುಬಳಿಮಠ, ಸತೀಶ ಹಡಗಲಿ, ಗುರಪ್ಪ ನಿಡಗುಂದಿ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img