• About
  • Advertise
  • Privacy & Policy
  • Contact
Wednesday, November 4, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಫಿಕ್ಸ್? ಇಂದಿನಿಂದಲೇ ಹೊಸ ದರ ಜಾರಿ ಸಾಧ್ಯತೆ!

Vijaya Sakshi News Desk by Vijaya Sakshi News Desk
November 4, 2026
in Bengaluru News
ಮುಷ್ಕರಕ್ಕೆ ಹೋದ್ರೆ ಸಂಬಳ ಕಟ್! KSRTC ನೌಕರರಿಗೆ ಅಕ್ರಮ್ ಪಾಷಾ ಖಡಕ್ ವಾರ್ನಿಂಗ್
0
SHARES
3
VIEWS
Share on Facebook

ಬೆಂಗಳೂರು: ದಿನನಿತ್ಯದ ಜೀವನ ನಿರ್ವಹಣೆಯೇ ಜನಸಾಮಾನ್ಯರಿಗೆ ಸವಾಲಾಗಿರುವಾಗ, ಇದೀಗ ಬಸ್ ಪ್ರಯಾಣವೂ ದುಬಾರಿಯಾಗುವ ಸಾಧ್ಯತೆ ಎದುರಾಗಿದೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ಹೊಸ ದರ ಜಾರಿಯಾದರೆ ಪ್ರತಿದಿನ ಬಸ್‌ನಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.

ಹೌದು, KSRTC, BMTC, NWKRTC ಹಾಗೂ KKRTC ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. KSRTC, NWKRTC ಮತ್ತು KKRTC ಬಸ್‌ಗಳ ಪ್ರಯಾಣ ದರವನ್ನು ಶೇ.20ರಿಂದ 25ರಷ್ಟು ಹೆಚ್ಚಿಸುವ ಪ್ರಸ್ತಾವನೆಯಿದ್ದರೆ, ಬೆಂಗಳೂರಿನ BMTC ಬಸ್ ಟಿಕೆಟ್ ದರವನ್ನು ಶೇ.35ರಿಂದ 40ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಬಸ್ ಪ್ರಯಾಣ ಮತ್ತಷ್ಟು ದುಬಾರಿ?

ಈಗಾಗಲೇ ಪ್ರತಿದಿನ ಕೆಲಸ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗೆ BMTC ಬಸ್‌ಗಳನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಪ್ರಸ್ತಾವಿತ ದರದ ಪ್ರಕಾರ 0ರಿಂದ 2 ಕಿಲೋಮೀಟರ್ ಪ್ರಯಾಣದ ಟಿಕೆಟ್ ದರ ₹6ರಿಂದ ₹7 ಅಥವಾ ₹8ಕ್ಕೆ ಏರಿಕೆಯಾಗಬಹುದು. 4ರಿಂದ 6 ಕಿಲೋಮೀಟರ್ ಪ್ರಯಾಣಕ್ಕೆ ಈಗಿರುವ ₹18 ಬದಲಿಗೆ ₹21 ಅಥವಾ ₹22 ಪಾವತಿಸಬೇಕಾಗಬಹುದು.

ಇನ್ನು 16ರಿಂದ 18 ಕಿಲೋಮೀಟರ್ ಪ್ರಯಾಣದ ದರ ₹28ರಿಂದ ₹33 ಅಥವಾ ₹35ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ.

ದೂರದ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ:

ಕೇವಲ ನಗರ ಸಾರಿಗೆ ಮಾತ್ರವಲ್ಲದೆ, ದೂರದ ಪ್ರಯಾಣದ ಬಸ್ ಟಿಕೆಟ್ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

  • ಬೆಂಗಳೂರು-ರಾಮನಗರ: ₹75ರಿಂದ ₹90ಕ್ಕೆ

  • ಬೆಂಗಳೂರು-ಮೈಸೂರು: ₹165ರಿಂದ ₹200ಕ್ಕೆ

  • ಬೆಂಗಳೂರು-ಶಿವಮೊಗ್ಗ: ₹380ರಿಂದ ₹455ಕ್ಕೆ

  • ಬೆಂಗಳೂರು-ಬೀದರ್: ₹890ರಿಂದ ₹1,150ಕ್ಕೆ

ಇವು ಸದ್ಯದ ಪ್ರಸ್ತಾವಿತ ಏರಿಕೆಯ ಅಂದಾಜು ದರಗಳಾಗಿದ್ದು, ಅಂತಿಮ ದರಗಳು ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟವಾಗಲಿವೆ.

ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗುತ್ತಾ?

ಸಾರಿಗೆ ನಿಗಮಗಳು ನಿರ್ವಹಣಾ ವೆಚ್ಚ ಹಾಗೂ ಇಂಧನ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಶೇ.40ರಷ್ಟು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದವು. ಈ ಕುರಿತು ಸರ್ಕಾರ ದರ ಪರಿಷ್ಕರಣೆ ಸಮಿತಿ ರಚಿಸಿ ವರದಿ ಪಡೆದುಕೊಂಡಿದೆ. ಇದೀಗ ವರದಿ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ.

2025ರ ಜನವರಿ 5ರಂದು ಕೊನೆಯದಾಗಿ ಶೇ.15ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಇಂದು ಬೆಳಗ್ಗೆ 11.30ಕ್ಕೆ ಸಾರಿಗೆ ಸಚಿವ ಭೈರತಿ ಸುರೇಶ್ ಸುದ್ದಿಗೋಷ್ಠಿ ನಡೆಸಲಿದ್ದು, ದರ ಏರಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ. ಹೊಸ ದರ ಇಂದೇ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆಯೇ ಎಂಬುದರ ಬಗ್ಗೆಯೂ ಅಧಿಕೃತ ಸ್ಪಷ್ಟನೆ ದೊರೆಯಬೇಕಿದೆ.

Tags: BMTC Ticket PricekannadanewsKarnatakaKarnataka Bus Fare HikeKKRTCKSRTC Bus FareNWKRTCVijayasakshivijayasakshinews
ShareSendShare
Previous Post

ಆಂಧ್ರಪ್ರದೇಶದಲ್ಲಿ ಮುರಸು ಚಂಡಮಾರುತದ ಅಬ್ಬರ; ಇಬ್ಬರು ಸಾವು, 344 ಕೋಟಿ ರೂ. ನಷ್ಟ

Next Post

ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

November 4, 2026
ವಂದೇ ಮಾತರಂ 2 ಚರಣಕ್ಕೆ ಸೀಮಿತಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಕೆಲಸ ಮಾಡುವ ಪತ್ನಿಗೆ ಗಂಡ ಜೀವನಾಂಶ ಕೊಡಬೇಕಾ? ಕರ್ನಾಟಕ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಹೀಗಿದೆ!

November 4, 2026
ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!

ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!

November 4, 2026
ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

November 4, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

November 4, 2026
ವಂದೇ ಮಾತರಂ 2 ಚರಣಕ್ಕೆ ಸೀಮಿತಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಕೆಲಸ ಮಾಡುವ ಪತ್ನಿಗೆ ಗಂಡ ಜೀವನಾಂಶ ಕೊಡಬೇಕಾ? ಕರ್ನಾಟಕ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಹೀಗಿದೆ!

November 4, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper