• About
  • Advertise
  • Privacy & Policy
  • Contact
Wednesday, November 4, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Sports News

ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!

Vijaya Sakshi News Desk by Vijaya Sakshi News Desk
November 4, 2026
in Sports News
ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!
0
SHARES
0
VIEWS
Share on Facebook

ನವದೆಹಲಿ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಇದೀಗ ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನಲ್ಲೂ ಮಿಂಚಿದೆ. ಅದರಲ್ಲೂ ಭಾರತದ ಯುವ ಸ್ಪಿನ್ನರ್ ವೈಷ್ಣವಿ ಶರ್ಮಾ ಬರೋಬ್ಬರಿ 53 ಸ್ಥಾನಗಳ ಜಿಗಿತ ಕಂಡು ಗಮನ ಸೆಳೆದಿದ್ದಾರೆ.

20 ವರ್ಷದ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ, ಜಿಂಬಾಬ್ವೆ ವಿರುದ್ಧದ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದಿಂದಾಗಿ ಐಸಿಸಿ ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 53 ಸ್ಥಾನ ಮೇಲಕ್ಕೇರಿ 94ನೇ ಸ್ಥಾನ ತಲುಪಿದ್ದಾರೆ.

ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ವೈಷ್ಣವಿ, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದರು. ತಮ್ಮ ವೃತ್ತಿಜೀವನದ ಕೇವಲ ಮೂರನೇ ಏಕದಿನ ಪಂದ್ಯದಲ್ಲೇ 39 ರನ್ ನೀಡಿ ಐದು ವಿಕೆಟ್ ಪಡೆದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಭಾರತದ ಕ್ಲೀನ್ ಸ್ವೀಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಭಾರತದ ಮತ್ತೊಬ್ಬ ಬೌಲರ್ ಸಯಾಲಿ ಸತ್ಘರೆ ಕೂಡ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. 18 ಸ್ಥಾನಗಳ ಪ್ರಗತಿ ಸಾಧಿಸಿರುವ ಅವರು 85ನೇ ಸ್ಥಾನಕ್ಕೆ ತಲುಪಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ಕೇವಲ 11 ರನ್ ನೀಡಿ ಎರಡು ವಿಕೆಟ್ ಪಡೆದಿದ್ದ ಸಯಾಲಿ, ಆರು ಓವರ್‌ಗಳಲ್ಲಿ ಬರೋಬ್ಬರಿ 30 ಡಾಟ್ ಬಾಲ್‌ಗಳನ್ನು ಎಸೆದು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು.

ಬ್ಯಾಟಿಂಗ್ ವಿಭಾಗದಲ್ಲೂ ಭಾರತೀಯ ಆಟಗಾರ್ತಿಯರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಮೂರು ಸ್ಥಾನ ಮೇಲಕ್ಕೇರಿ 18ನೇ ಸ್ಥಾನ ತಲುಪಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ದಾಖಲಿಸಿದ್ದು ಅವರ ಈ ಸಾಧನೆಗೆ ಕಾರಣವಾಗಿದೆ.

ಮತ್ತೊಂದೆಡೆ, ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಕೂಡ ಎಂಟು ಸ್ಥಾನಗಳ ಏರಿಕೆ ಕಂಡಿದ್ದಾರೆ. ಈ ಮೂಲಕ ಜಂಟಿ 65ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 51 ರನ್ ಸಿಡಿಸಿ ಶಫಾಲಿ ಅಬ್ಬರಿಸಿದ್ದರು.

ಒಟ್ಟಿನಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಂಡವಾಗಿ ಕ್ಲೀನ್ ಸ್ವೀಪ್ ಸಾಧಿಸಿರುವ ಭಾರತ ಮಹಿಳಾ ತಂಡ, ವೈಯಕ್ತಿಕ ರ‍್ಯಾಂಕಿಂಗ್‌ನಲ್ಲೂ ಗಮನಾರ್ಹ ಪ್ರಗತಿ ದಾಖಲಿಸಿದೆ.

Tags: ICC Womens ODI RankingsIndia Women Cricket TeamVaishnavi SharmaVaishnavi Sharma ICC RankingVijayasakshivijayasakshinews
ShareSendShare
Previous Post

ರಾಮನಗರದಲ್ಲಿ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ

Next Post

ಕೆಲಸ ಮಾಡುವ ಪತ್ನಿಗೆ ಗಂಡ ಜೀವನಾಂಶ ಕೊಡಬೇಕಾ? ಕರ್ನಾಟಕ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಹೀಗಿದೆ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ವಂದೇ ಮಾತರಂ 2 ಚರಣಕ್ಕೆ ಸೀಮಿತಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಕೆಲಸ ಮಾಡುವ ಪತ್ನಿಗೆ ಗಂಡ ಜೀವನಾಂಶ ಕೊಡಬೇಕಾ? ಕರ್ನಾಟಕ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಹೀಗಿದೆ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
22 ವರ್ಷ ಬಾಹ್ಯಾಕಾಶದಲ್ಲಿದ್ದ NASA ಉಪಗ್ರಹ ಇಂದು ಭೂಮಿಗೆ ವಾಪಸ್; ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷಗಳು?

22 ವರ್ಷ ಬಾಹ್ಯಾಕಾಶದಲ್ಲಿದ್ದ NASA ಉಪಗ್ರಹ ಇಂದು ಭೂಮಿಗೆ ವಾಪಸ್; ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷಗಳು?

November 4, 2026
ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

November 4, 2026
ವಂದೇ ಮಾತರಂ 2 ಚರಣಕ್ಕೆ ಸೀಮಿತಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಕೆಲಸ ಮಾಡುವ ಪತ್ನಿಗೆ ಗಂಡ ಜೀವನಾಂಶ ಕೊಡಬೇಕಾ? ಕರ್ನಾಟಕ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಹೀಗಿದೆ!

November 4, 2026
ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!

ಜಿಂಬಾಬ್ವೆ ವಿರುದ್ಧ ವಿಕೆಟ್ ಬೇಟೆ; ಐಸಿಸಿ ರ‍್ಯಾಂಕಿಂಗ್‌ʼನಲ್ಲಿ ಟಾಪ್ 100ಕ್ಕೆ ಲಗ್ಗೆ ಇಟ್ಟ ವೈಷ್ಣವಿ!

November 4, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

22 ವರ್ಷ ಬಾಹ್ಯಾಕಾಶದಲ್ಲಿದ್ದ NASA ಉಪಗ್ರಹ ಇಂದು ಭೂಮಿಗೆ ವಾಪಸ್; ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷಗಳು?

22 ವರ್ಷ ಬಾಹ್ಯಾಕಾಶದಲ್ಲಿದ್ದ NASA ಉಪಗ್ರಹ ಇಂದು ಭೂಮಿಗೆ ವಾಪಸ್; ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷಗಳು?

November 4, 2026
ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

ಸೌಜನ್ಯ ಕೊಲೆ ಪ್ರಕರಣಕ್ಕೆ 14 ವರ್ಷ ಹಳೆಯ ವರದಿಯೇ ನಿರ್ಣಾಯಕ ಸುಳಿವು? SIT ಕಣ್ಣು ಈಗ ಡಿಎನ್‌ಎ ಪರೀಕ್ಷೆ ಮೇಲೆ!

November 4, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper