HomeMysuruಮೈಸೂರು ದಸರಾ ಗಜಪಡೆಯಿಂದ ‘ಕ್ಯಾಪ್ಟನ್’ ಅಭಿಮನ್ಯು ಔಟ್: ಅಂಬಾರಿ ಹೊತ್ತ ಗಜರಾಜನಿಗೆ ವಯಸ್ಸಿನ ಬ್ರೇಕ್!

ಮೈಸೂರು ದಸರಾ ಗಜಪಡೆಯಿಂದ ‘ಕ್ಯಾಪ್ಟನ್’ ಅಭಿಮನ್ಯು ಔಟ್: ಅಂಬಾರಿ ಹೊತ್ತ ಗಜರಾಜನಿಗೆ ವಯಸ್ಸಿನ ಬ್ರೇಕ್!

For Dai;y Updates Join Our whatsapp Group

ಮೈಸೂರು: ಮೈಸೂರು ದಸರಾ ವೈಭವಕ್ಕೆ ವರ್ಷಗಳ ಕಾಲ ರಾಜಗಾಂಭೀರ್ಯ ತುಂಬಿದ್ದ ಅಭಿಮನ್ಯು ಈ ಬಾರಿ ಗಜಪಡೆಯ ಭಾಗವಾಗುವುದಿಲ್ಲ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಭಿಮನ್ಯುವನ್ನು ದಸರಾ ಆನೆಗಳ ಪಟ್ಟಿಯಿಂದ ಕೈಬಿಟ್ಟಿದ್ದು, ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತ ಗಜರಾಜನ ದಸರಾ ಕರ್ತವ್ಯಕ್ಕೆ ಅಂತ್ಯ ಹಾಡಿದೆ.

ಚಿನ್ನದ ಅಂಬಾರಿ ಹೊತ್ತು ಮೈಸೂರು ರಾಜಬೀದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿನ ಗಾಂಭೀರ್ಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಆರು ಬಾರಿ ಅಂಬಾರಿ ಹೊತ್ತಿದ್ದ ಈ ಗಜರಾಜನಿಗೆ ಮೈಸೂರು ಜನರಲ್ಲೂ ಅಪಾರ ಅಭಿಮಾನವಿದೆ. ಆದರೆ ವಯಸ್ಸಿನ ಕಾರಣದಿಂದ ಈ ಬಾರಿ ಅಭಿಮನ್ಯುವಿಗೆ ದಸರಾ ಕರ್ತವ್ಯದಿಂದ ವಿಶ್ರಾಂತಿ ನೀಡಲಾಗಿದೆ.

ಅಭಿಮನ್ಯುವಿನ ಖ್ಯಾತಿ ಅಂಬಾರಿ ಹೊರುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ್ದ ಆತ ‘ಕೂಂಬಿಂಗ್ ಸ್ಪೆಷಲಿಸ್ಟ್’ ಎಂದೇ ಗುರುತಿಸಿಕೊಂಡಿದ್ದ. ಅಪಾಯಕಾರಿ ಕಾಡಾನೆಗಳನ್ನು ನಿಯಂತ್ರಿಸುವ ಕಾರ್ಯಾಚರಣೆಗಳಲ್ಲಿ ಅರಣ್ಯ ಇಲಾಖೆಯ ಪ್ರಮುಖ ಆನೆಗಳಲ್ಲಿ ಒಂದಾಗಿದ್ದ.

ಅಭಿಮನ್ಯುವಿನ ಸ್ಥಾನವನ್ನು ಸದ್ಯ ಖಾಲಿ ಇಡಲಾಗಿದ್ದು, ಭೀಮ ಮತ್ತು ಹರ್ಷ ಆನೆಗಳನ್ನು ಮೀಸಲು ಆನೆಗಳಾಗಿ ಇರಿಸಲಾಗಿದೆ. ದಸರಾ ಗಜಪಡೆಯ ಮೊದಲ ಹಂತದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆಗಮಿಸಲಿವೆ. ಎರಡನೇ ಹಂತದಲ್ಲಿ ರೂಪ, ಚೈತ್ರ ಹಾಗೂ ಶ್ರೀಕಂಠ ಗಜಪಡೆ ಸೇರಲಿವೆ.

ಅಭಿಮನ್ಯು ಈ ಬಾರಿ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗದಿದ್ದರೂ, ಮೈಸೂರು ದಸರಾ ಇತಿಹಾಸದಲ್ಲಿ ಆತನ ಸ್ಥಾನ ಅಳಿಸಲಾಗದು. ಅಂಬಾರಿಯ ಭಾರ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿದ ಆ ಗಜರಾಜನ ನೆನಪು ಮಾತ್ರ ಮೈಸೂರು ಜನರ ಮನದಲ್ಲಿ ಎಂದಿಗೂ ಉಳಿಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img