HomeGadag Newsಪತ್ರಿಕೋದ್ಯಮಕ್ಕೆ ಕೃತಕ ಬುದ್ಧಿಮತ್ತೆಯ ಸವಾಲು: ಹಿರಿಯ ಪತ್ರಕರ್ತ ಅನಂತ ಎಸ್. ಕಾರ್ಕಳ

ಪತ್ರಿಕೋದ್ಯಮಕ್ಕೆ ಕೃತಕ ಬುದ್ಧಿಮತ್ತೆಯ ಸವಾಲು: ಹಿರಿಯ ಪತ್ರಕರ್ತ ಅನಂತ ಎಸ್. ಕಾರ್ಕಳ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಿಕೋದ್ಯಮವು ಸಾಂಪ್ರದಾಯಿಕ ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳತ್ತ ವೇಗವಾಗಿ ಸಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದೇ ಮಾಧ್ಯಮಗಳಿಗೆ ಅತಿ ದೊಡ್ಡ ಸವಾಲಾಗಿದೆ ಎಂದು ಹಿರಿಯ ಪತ್ರಕರ್ತ ಅನಂತ ಎಸ್. ಕಾರ್ಕಳ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಹಿರಿಯ ಪತ್ರಕರ್ತ ಎಚ್.ಎಂ. ಶರೀಫನವರ ಜನ್ಮದಿನ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಅವರ ಆಪ್ತ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಜನರನ್ನು ಹೆಚ್ಚು ಸೆಳೆಯುತ್ತಿರುವ ಪರಿಣಾಮ ಮುಖ್ಯವಾಹಿನಿ ಮಾಧ್ಯಮಗಳು ಓದುಗರಿಂದ ದೂರವಾಗುತ್ತಿರುವುದು ಮಾಧ್ಯಮ ಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಆನಂದ ಸಾಲಿಗ್ರಾಮ ಮಾತನಾಡಿ, ಬಹುತೇಕ ಸುದ್ದಿ ಸಂಸ್ಥೆಗಳು ಡಿಜಿಟಲ್ ವೇದಿಕೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಓದುಗರು ಪತ್ರಿಕೆಗಳಿಗಿಂತ ಮೊಬೈಲ್ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಸುದ್ದಿಯನ್ನು ಪಡೆಯುತ್ತಿದ್ದಾರೆ. ರೀಲ್ಸ್ ಹಾಗೂ ಕಿರಿದಾದ ವಿಡಿಯೊಗಳ ಮೂಲಕ ಸುದ್ದಿ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಸಾಂಪ್ರದಾಯಿಕ ಮಾಧ್ಯಮಗಳಿಗೆ ಸವಾಲಾಗಿದೆ ಎಂದು ಹೇಳಿದರು.

ಟಿವಿ9 ಜಿಲ್ಲಾ ವರದಿಗಾರ ಸಂಜಯ್ ಪಾಂಡ್ರೆ ಮಾತನಾಡಿ, ವರದಿಗಳನ್ನು ಸಿದ್ಧಪಡಿಸುವುದು ಹಾಗೂ ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಎಐ ಬಳಕೆ ಹೆಚ್ಚುತ್ತಿರುವುದರಿಂದ ಸತ್ಯಾಸತ್ಯತೆ ಪರಿಶೀಲಿಸುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ಜನಶ್ರೀ ಟೈಮ್ಸ್ ಸಂಪಾದಕ ಆನಂದಯ್ಯ ವಿರಕ್ತಿಮಠ ಮಾತನಾಡಿ, ಎಐ ತಂತ್ರಜ್ಞಾನ ನಕಲಿ ಸುದ್ದಿಗಳ (ಫೇಕ್ ನ್ಯೂಸ್) ಹಾವಳಿಯನ್ನು ಹೆಚ್ಚಿಸುವುದರ ಜೊತೆಗೆ ಪತ್ರಕರ್ತರ ಉದ್ಯೋಗಕ್ಕೂ ಆತಂಕ ತಂದೊಡ್ಡಿದೆ ಎಂದರು.

ಗದಗ ಜಿಲ್ಲೆಯ ಬಹುತೇಕ ಪತ್ರಿಕೆಗಳ ಕಾನೂನು ಸಲಹೆಗಾರ ಹಾಗೂ ನ್ಯಾಯವಾದಿ ಟಿ.ಎನ್. ಭಾಂಡಗೆ ಮಾತನಾಡಿ, ಡಿಜಿಟಲ್ ಜಾಹೀರಾತುಗಳ ಆದಾಯ ಗೂಗಲ್ ಹಾಗೂ ಮೆಟಾದಂತಹ ತಂತ್ರಜ್ಞಾನ ಕಂಪನಿಗಳ ಪಾಲಾಗುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಚ್.ಎಂ. ಶರೀಫನವರ, ಡಿಜಿಟಲ್ ಯುಗದಲ್ಲಿ ಸುದ್ದಿ ಸಂಸ್ಥೆಗಳು ಪೇವಾಲ್ (Paywall) ಹಾಗೂ ಚಂದಾದಾರಿಕೆ ಮಾದರಿಗಳತ್ತ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಪತ್ರಿಕೋದ್ಯಮ ಮತ್ತು ಮಾಧ್ಯಮಗಳ ಇಂದಿನ ಸವಾಲುಗಳ ಕುರಿತು ಸರ್ಕಾರ ಹಾಗೂ ಸಮಾಜದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿ ಗೌರವಿಸಿದ ಎಲ್ಲ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸ್ವಾಗತಿಸಿದರು. ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸುರೇಶ ಕಡ್ಲಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಪೈ ಕಾರ್ಯಕ್ರಮ ನಿರೂಪಿಸಿದರು. ನ್ಯೂಸ್ 18 ಜಿಲ್ಲಾ ವರದಿಗಾರ ಸಂತೋಷ ಕೊಣ್ಣೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಸುವರ್ಣ ಟಿವಿ ಜಿಲ್ಲಾ ವರದಿಗಾರ ಗಿರೀಶ ಕಮ್ಮಾರ, ರಿಪಬ್ಲಿಕ್ ಟಿವಿ ವರದಿಗಾರ ಮಂಜು ಪತ್ತಾರ, ಕ್ಯಾಮೆರಾಮೆನ್ ಮಂಜು ಸಾಳೇರ, ಶಂಭುಲಿಂಗಯ್ಯ, ವಿಜಯಸಾಕ್ಷಿ ವರದಿಗಾರ ಗೌಸ್ ಬೆಟಗೇರಿ, ಸ್ನೇಹ ಸುದ್ದಿ ಸಂಪಾದಕ ಗಣೇಶ ದೊಡ್ಡಮನಿ, ಪರಶುರಾಮ ಸೇರಿದಂತೆ ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img