HomeGadag Newsಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಾರ್ಮಿಕರು ಕಷ್ಟ ಜೀವಿಗಳಾಗಿದ್ದು, ಮಕ್ಕಳ ಭವ್ಯ ಭವಿಷ್ಯ ರೂಪಿಸಲು ಅವರಿಗೆ ಉನ್ನತ ಶಿಕ್ಷಣ, ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕೆಂದು ಗದುಗಿನ ಅಪ್ಪುರಾಜ್ ಇವೆಂಟ್ಸ್ ಹಾಗೂ ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್‌ನ ಅಧ್ಯಕ್ಷ ಅಪ್ಪುರಾಜ ಭದ್ರಕಾಳಮ್ಮನಮಠ ಅಭಿಪ್ರಾಯಪಟ್ಟರು.

ಅವರು ಕಾರ್ಮಿಕ ಕಲ್ಯಾಣ ಸಂಸ್ಥೆ ಗದಗ, ಗದಗ ಜಿಲ್ಲಾ ಸಮಸ್ತ ಕಟ್ಟಡ ಕಾರ್ಮಿಕರ ಬಳಗದಿಂದ ನಗರದ ಕಾರ್ಮಿಕ ಕಲ್ಯಾಣದ ಸಂಸ್ಥೆಯಲ್ಲಿ ಏರ್ಪಡಿಸಿದ್ದ, ಕಾರ್ಮಿಕರ ಮಕ್ಕಳ ಸ್ನಾತಕೋತ್ತರ ಎಲ್.ಎಲ್.ಎಂ ಪದವಿ ಪಡೆದ ಕಾರ್ಮಿಕರ ಮಕ್ಕಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಯವಾದಿ ಎಸ್.ಕೆ. ನದಾಫ ಕಾರ್ಮಿಕರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರು. ಕಾರ್ಮಿಕ ಕಲ್ಯಾಣ ಸಂಸ್ಥೆಯ ಗೌರವ ಅಧ್ಯಕ್ಷ ಝಡ್.ಡಿ. ಬೇಲೇರಿ, ಭೀಮಸಿ ಪೂಜಾರ ಜಂದಿಸಾಬ ಬಳ್ಳಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗದುಗಿನ ಎಚ್.ಸಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರು, ನ್ಯಾಯವಾದಿಗಳಾದ ನಾಜಿಮಾ ಎನ್.ಮುಲ್ಲಾ ಅವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಂಕರಗೌಡ ಭರಮಗೌಡ್ರ ಸಂದರ್ಭೋಚಿತವಾಗಿ ಮಾತನಾಡಿದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ನಾಶೀರ ಚಿಕೇನಕೊಪ್ಪ ನಿರೂಪಿಸಿದರು. ಇಬ್ರಾಹಿಂ ಹಳ್ಳಿಕೇರಿ ವಂದಿಸಿದರು.
ಸಮಾರಂಭದಲ್ಲಿ ಮಹಮ್ಮದಲಿ ಕಾತರಕಿ, ಮಹ್ಮದಇಸೂಫ ಬೇಪಾರಿ, ಶಿವಶಂಕರಗೌಡ ಕರಿಸೋಮನಗೌಡ್ರ, ಸುನೀಲ ಚಳಗೇರಿ, ಚನ್ನವೀರಗೌಡ ಪಾಟೀಲ, ಎಂ.ಎಸ್. ಹಳ್ಳಿಕೇರಿ, ಮುನೀರ್‌ಅಹ್ಮದ್ ಸವಣೂರ, ವಿಜಯಲಕ್ಷ್ಮಿ ಕುರ್ತಕೋಟಿ, ರತ್ನಾ ಕುರಗೋಡ, ಪಾಲಾಕ್ಷವ್ವ ವಾಲ್ಮೀಕಿ, ಶೌಕತ್ ಯರಂಡಿವಾಲೆ, ಅಲ್ಲಾಭಕ್ಷ ದೊಡ್ಡಮನಿ, ರಮೇಶ ವಾಲ್ಮೀಕಿ, ಮಲ್ಲು ವಾಲ್ಮೀಕಿ ಮುಂತಾದವರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್‌ನ ಉಪಾಧ್ಯಕ್ಷ ಬಸವರಾಜ ಜಿನಗಾ, ಮುಳಗುಂದದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮೌಲಾಸಾಬ ಸದರಬಾವಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹಮ್ಮದಇರ್ಫಾನ್ ಡಂಬಳ ಕಾರ್ಮಿಕರ ಬದುಕು ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಮಾತನಾಡಿದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img