HomeGadag Newsಪ್ರಬಂಧ ಸ್ಪರ್ಧೆಯಲ್ಲಿ ಈಶ್ವರ ಕುರಿ ರಾಜ್ಯಮಟ್ಟಕ್ಕೆ ಆಯ್ಕೆ

ಪ್ರಬಂಧ ಸ್ಪರ್ಧೆಯಲ್ಲಿ ಈಶ್ವರ ಕುರಿ ರಾಜ್ಯಮಟ್ಟಕ್ಕೆ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ವತಿಯಿಂದ ಶಾಲಾ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ ಗದಗ ಇವರ ಸಹಯೋಗದಲ್ಲಿ ಸಿದ್ದಲಿಂಗ ನಗರದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸರ್ಕಾರಿ ಪ್ರೌಢಶಾಲೆ ಮೆಣಸಗಿಯ ಕನ್ನಡ ಭಾಷಾ ಶಿಕ್ಷಕ ಈಶ್ವರ ಕುರಿ ಪ್ರೌಢಶಾಲಾ ಶಿಕ್ಷಕರಿಗಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಧಾ ಬನ್ನಿಕಲ್, ಎಂ.ಎ. ಯರಗುಡಿ, ಶ್ರೀಧರ ಬಡಿಗೇರ, ಎಂ.ಎಚ್. ಸವದತ್ತಿ, ಹೂಲಗೇರಿ, ಮೋನೆ ಅವರು ಪ್ರಮಾಣಪತ್ರ ವಿತರಣೆ ಮಾಡಿದರು.

ವಿಜೇತ ಶಿಕ್ಷಕರಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಎಲ್. ದಾಸರ, ಎಸ್.ಆರ್. ಪಾಟೀಲ, ಸುರೇಶ್ ದೇಸಾಯಿ, ಆರ್.ಎಚ್. ಪಾಟೀಲ, ಗಣೇಶ್ ಚವ್ಹಾಣ, ಸದಾನಂದ ಚಲವಾದಿ, ಎಸ್.ಎಂ. ರಾಠೋಡ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img