ಕೋಲಾರ: ಭೀಕರ ಅಪಘಾತ ಸಂಭವಿಸಿದ ಓರ್ವ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೆಜಿಎಫ್ ಹೊರವಲಯದ ಕೃಷ್ಣವರಂ ಹಾಗು ಸೀ ಲೈಟ್ ರಸ್ತೆ ಮಧ್ಯೆ ನಡೆದಿದೆ. ಕರ್ಣ (48) ಮೃತ ದುರ್ಧೈವಿಯಾಗಿದ್ದು, ದೇವಿ, ವಿಯನಸೈ, ಡೆನ್ನಿಸ್, ಶೆರ್ಲಿ ಗಾಯಾಗಳು ಆಗಿದ್ದಾರೆ.
ನೆನ್ನೆ ರಾತ್ರಿ ಐಸ್ ಕ್ರೀಂ ತಿನ್ನಲು ಕೆಜಿಎಫ್ ನಗರದಿಂದ ಹೊರಗೆ ತೆರಳಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ.
ಗಾಯಾಳುಗಳನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆ ಸಂಬಂಧ ಕೆಜಿಎಫ್ ನ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



