HomeGadag Newsಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ : ಸುರೇಶ ಕುಂಬಾರ

ಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ : ಸುರೇಶ ಕುಂಬಾರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಜೀವನ ವ್ಯರ್ಥವಾಗದಂತೆ, ಅರ್ಥವಿಲ್ಲದಂತೆ ಬದುಕಬೇಡಿ. ನಮ್ಮೊಳಗಿನ ಆತ್ಮ-ಇಂದ್ರಿಯಗಳ ನಂಜಿನಲ್ಲಿರುವದರಿಂದ ಅದರಂತೆ ತನು-ಮನ ಪಾತ್ರ ಮಾಡುತ್ತದೆ. ಅಲ್ಲದ, ಒಲ್ಲದ ಬದುಕಿನಿಂದ ಉತ್ತಮ ಸಮಾಜ ನಿರ್ಮಾತರಾಗಲು ಸಾಧ್ಯವಿಲ್ಲ. ದೇವರು ನೀಡಿದ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆಯ ಹಿರಿಯ ಉಪನಿರ್ದೇಶಕ ಸುರೇಶ ಕುಂಬಾರ ಸಲಹೆ ನೀಡಿದರು.

ಶ್ರೀ ಶಿವಶರಣಮ್ಮನವರ ಧ್ಯಾನಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ ಬೆಟಗೇರಿ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಹಾಗೂ ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ, ಚೇತಕ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ನಯನತಾರ ಕಲಾ ಸಂಘ, ಶ್ರೀ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಬೆಟಗೇರಿ ಇವುಗಳ ಸಹಯೋಗದಲ್ಲಿ ಯೋಗ ಶಿಬಿರ ಸಮಾರೋಪ, ಕವಿಗೋಷ್ಠಿ, ನಿಮ್ಮ ಕಥೆ-ನಮ್ಮ ಜೊತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಉಪಸ್ಥಿತಿ ವಹಿಸಿದ ನಿರ್ಮಲಾ ತರವಾಡೆ ಸಾಂದರ್ಭಿಕ ನುಡಿಗಳನ್ನಾಡಿದರು. ಸಾಕ್ಷಿ, ಶ್ರಾವಣಿ ಮಾತನಾಡಿದರು. ಡಾ. ರಾಜೇಂದ್ರ ಗಡಾದ, ಡಾ. ವಿನಾಯಕ ಕಮತದ, ಪ್ರೊ. ಬಸವರಾಜ ನೆಲಜೇರಿ, ಮಮತಾ ದೊಡ್ಡಮನಿ, ಕಳಕಪ್ಪ ಜಲ್ಲಿಗೇರಿ, ಶಿವಾನಂದ ಭಜಂತ್ರಿ ಕವಿತೆ ವಾಚಿಸಿದರೆ, ಮಂಗಳಮುಖಿ ಗಾಯಕಿ ಪಲ್ಲವಿ ಹಾಡಿದರು.

ವೇದಿಕೆಯ ಮೇಲೆ ಇನ್ನರವೀಲ್ ಅಧ್ಯಕ್ಷೆ ರಜನಿ ಪಾಟೀಲ, ಜ್ಯೋತಿ ಭರಮಗೌಡರ, ಚಂದ್ರು ನಾವಿ, ಪ್ರಿಯಾಂಕ ಹಳ್ಳಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಆಯ್.ಕೆ. ಕಮ್ಮಾರ, ರಾಜು ಧೂಳ, ಲಿಂಗರಾಜ ಬಗಲಿ, ಬಸವರಾಜ ಈರಣ್ಣವರ, ಪುಷ್ಪಲತಾ ಬಿಜಾಪೂರ, ಸುನಿತಾ ಕುಭೇರಸಿಂಗ ದೊಡ್ಡಮನಿ ಉಪಸ್ಥಿತರಿದ್ದರು.

ಚನ್ನಬಸವ ಅಧ್ಯಕ್ಷತೆ ವಹಿಸಿದ್ದರು. ಮಂಗಳಮುಖಿಯರಿಗೆ ಹಾಗೂ ಪೌರಕಾರ್ಮಿಕರಿಗೆ ವಸ್ತçಧಾರಣ ಗೌರವ ಪುರಸ್ಕಾರ ಮಾಡಲಾಯಿತು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಗಣೇಶಕಬಾಡಿ, ರಮೇಶ ಹಾದಿಮನಿ, ದ್ಯಾಮಣ್ಣ ಉಗಲಾಟ, ಅಂಬಣ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರ ಮಾತನಾಡಿ, ಮಂಗಳಮುಖಿಯರಿಗೂ ಹಲವಾರು ಕೌಶಲ್ಯ ತರಬೇತಿಗಳನ್ನು ಕೌಶಲ್ಯ ಇಲಾಖೆಯಿಂದ ನೀಡಲಾಗುತ್ತದೆ. ನೀವೂ ಸರಳವಾಗಿ ಎಲ್ಲರ ಜೊತೆ ಬೆರೆತು ಬದುಕುವದನ್ನು ರೂಢಿಸಿಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img