HomeDharwadಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ : ಡಾ. ನವೀನ ಮಂಕಣಿ

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ : ಡಾ. ನವೀನ ಮಂಕಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಧಾರವಾಡ : ಇಲ್ಲಿಯ ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ಧಾರವಾಡ ಐಎಂಎ ಶಾಖೆಯ ಅಧ್ಯಕ್ಷರಾಗಿ ಡಾ. ನವೀನ ಮಂಕಣಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ವೈದ್ಯರಲ್ಲಿ ಏಕತೆ ಇರಬೇಕು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ವೈದ್ಯ ವೃತ್ತಿಗೆ ಗೌರವ ಪ್ರಾಪ್ತವಾಗುತ್ತದೆ. ನಮ್ಮ ಕಾಲಾವಧಿಯಲ್ಲಿ ಆದಷ್ಟು ಸಮಾಜ ಸೇವೆಗೆ ಮುಂದಾಗುತ್ತೇವೆ ಎಂದು ವಾಗ್ದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಂಸಿ ಅಧ್ಯಕ್ಷ ಡಾ. ಯೋಗಾನಂದರೆಡ್ಡಿ ಮಾತನಾಡಿ, ವೈದ್ಯರು ಯಾವಾಗಲೂ ಸಮಾಜಮುಖಿ ಕೆಲಸವನ್ನು ಮಾಡುತ್ತಿರುತ್ತಾರೆ. ವೃತ್ತಿ ಬದ್ಧತೆ ತೋರುತ್ತಾರೆ. ಇದರ ಜತೆಗೆ ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಬದುಕಿನತ್ತ ಹೆಚ್ಚು ಲಕ್ಷö್ಯ ಕೊಡಬೇಕು ಎಂದು ವಿನಂತಿಸಿದರು.

ಕಾರ್ಯದರ್ಶಿಯಾಗಿ ಡಾ. ಸುಹಾಸ ಎಚ್., ಖಜಾಂಚಿಯಾಗಿ ಡಾ. ಸಪ್ನ ಡಿ.ಎಸ್. ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸತೀಶ ಇರಕಲ್, ಕಾರ್ಯದರ್ಶಿ ಡಾ. ಕಿರಣ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷ ಡಾ. ಸುಧೀರ ಜಂಬಗಿ, ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ. ಕವಿತಾ ಮಂಕಣಿ, ಡಾ. ಲಕ್ಕೋಳ, ಡಾ. ಮಧುಸೂದನ ಕೆ, ಡಾ. ವಿ.ಆರ್. ಸೊರಗಾವಿ, ಡಾ. ಪವನ್ ಪಾಟೀಲ, ಡಾ. ಸಂತೋಷ ಪಾಟೀಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img