ಫ್ರಾನ್ಸ್: ‘ಕಾನ್ ಚಲನಚಿತ್ರೋತ್ಸವ 2026’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಭಾರತೀಯ ಸಿನಿ ತಾರೆಯರ ದಂಡೇ ರೆಡ್ ಕಾರ್ಪೆಟ್ ಮೇಲೆ ಮಿಂಚಲು ಸಜ್ಜಾಗಿದೆ. ಬಾಲಿವುಡ್‌ನಿಂದ ದಕ್ಷಿಣ ಭಾರತದವರೆಗೆ ಹಲವು ಸ್ಟಾರ್‌ಗಳು ವಿಶ್ವದ ಗಮನ ಸೆಳೆಯಲಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಕಾನ್ ರೆಡ್ ಕಾರ್ಪೆಟ್‌ನ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಆಲಿಯಾ ಭಟ್ ಕೂಡ ಭಾರತೀಯ ಫ್ಯಾಷನ್‌ನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಸಿದ್ಧರಾಗಿದ್ದಾರೆ.
ಮಲಯಾಳಂ ನಟಿ ಕಲ್ಯಾಣಿ ಪ್ರಿಯದರ್ಶನ್ ಈ ಬಾರಿ ಮೊದಲ ಬಾರಿಗೆ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿದ್ದು, ಅವರ ಎಂಟ್ರಿ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ತಾರಾ ಸುತಾರಿಯಾ ಕೂಡ ಇದೇ ಮೊದಲ ಅನುಭವಕ್ಕೆ ಸಜ್ಜಾಗಿದ್ದಾರೆ.
ಅದಿತಿ ರಾವ್ ಹೈದರಿ, ಕರಣ್ ಜೋಹರ್, ಅಮ್ಮಿ ವಿರ್ಕ್ ಸೇರಿದಂತೆ ಹಲವು ಕಲಾವಿದರು ಈ ಬಾರಿಯ ಭಾರತೀಯ ಪ್ರತಿನಿಧಿತ್ವವನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಮರಾಠಿ ಚಿತ್ರರಂಗದ ಅಶೋಕ್ ಸರಫ್ ಮತ್ತು ಪ್ರಜಕ್ತಾ ಮಾಲಿ ಪಾರಂಪರಿಕ ಮರಾಠಿ ಉಡುಗೆಯಲ್ಲಿ ವಿಶೇಷ ಮೆರುಗು ನೀಡಲಿದ್ದಾರೆ.
ಕಾನ್ 2026ರಲ್ಲಿ ಭಾರತೀಯ ಸಿನಿರಂಗದ ಹಾಜರಾತಿ ಈ ಬಾರಿ ಕೇವಲ ಗ್ಲಾಮರ್ ಮಟ್ಟದಲ್ಲೇ ಅಲ್ಲ, ವೈವಿಧ್ಯಮಯ ಭಾಷಾ ಚಿತ್ರರಂಗಗಳ ಶಕ್ತಿಯ ಪ್ರದರ್ಶನವಾಗಿಯೂ ಕಾಣಿಸಿಕೊಳ್ಳುತ್ತಿದೆ.



