HomeKoppalರೈತರಿಗೆ ಕೆಸಿಸಿ ಸಾಲ ಹಂಚಿಕೆ ಇಂದು

ರೈತರಿಗೆ ಕೆಸಿಸಿ ಸಾಲ ಹಂಚಿಕೆ ಇಂದು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಕರ್ನಾಟಕ ಸಹಕಾರಿ ಸಂಘ ಸ್ಥಾಪಿಸಲಾಗಿತ್ತು. ಆದರೆ ದೂರ ದೃಷ್ಟಿಯುಳ್ಳ ಅಧ್ಯಕ್ಷರು, ನಿರ್ದೇಶಕರು ಇಲ್ಲದೆ ನೆನೆಗುದಿಗೆ ಬಿದ್ದಿತ್ತು. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಿಂಗಜ್ಜ ಅಡಗಿ ಅನ್ನುವವರು ಈ ಸಹಕಾರಿ ಸಂಘಕ್ಕೆ ಅಧ್ಯಕ್ಷರಾದ ಮೇಲೆ ಪುನಃ ಅಭಿವೃದ್ಧಿ ಕಾಣುತ್ತಿದೆ.

ಬೂದಗುಂಪಾದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾ.13ರಂದು ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಆರ್‌ಕೆಡಿಸಿಸಿ ನಿರ್ದೇಶಕ ಮತ್ತು ಮಾಜಿ ಶಾಸಕ ಬಸವರಾಜ್ ಕೆ.ಇಟ್ನಾಳ್ ನೆರವೇರಿಸುವರು. ಸಂಘದ ಅಧ್ಯಕ್ಷ ನಿಂಗಜ್ಜ ಅಡಗಿ,ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು, ಸಹಕಾರಿ ಉಪ ನಿಬಂಧಕ ದಸ್ತಗಿರಿ ಕೊಪ್ಪಳ, ಪ್ರಮುಖರಾದ ಬಸವರಾಜ್ ಪೆದ್ಲ, ಪಕೀರಪ್ಪ ಎಮ್ಮಿ, ಲಕ್ಷö್ಮವ್ವ ಸಂಗಟಿ, ಅಧ್ಯಕ್ಷ ಗೋವಿಂದರಾಜ ಬೂದಗುಂಪ, ಕರಿಯಪ್ಪ ಅಜ್ಜಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img