ವಿಜಯಸಾಕ್ಷಿ ಸುದ್ದಿ, ರೋಣ : ದಿ.ಮಾತೋಶ್ರೀ ಬಸಮ್ಮಾ ಪಾಟೀಲರ 20ನೇ ಪುಣ್ಯಸ್ಮರಣೆ ಆಗಸ್ಟ್ 1ರಂದು ನಡೆಯಲಿದ್ದು, ಸಮಿತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ಜರುಗಲಿವೆ. ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಪುರಸಭೆಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಅವರು ಶನಿವಾರ ದಿ.ಮಾತೋಶ್ರೀ ಬಸಮ್ಮಾ ಪಾಟೀಲರವರ 20ನೇ ಪುಣ್ಯಸ್ಮರಣೆ ನಿಮಿತ್ತ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷವೂ ಸಹ ಉಚಿತ ನೇತ್ರ ತಪಾಸಣಾ ಶಿಬಿರ, ಕೃಷಿ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಿತಿಯ ಸದಸ್ಯರು ನಿರ್ಧರಿಸಿರುವುದು ಸ್ವಾಗತರ್ಹ ಎಂದರು.
ವಿ.ಬಿ. ಸೋಮನಕಟ್ಟಿಮಠ ಮಾತನಾಡಿ, ಮಾತೋಶ್ರೀ ಬಸಮ್ಮಾ ಸಂ.ಪಾಟೀಲರ 20ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನರೆಗಲ್ ಪಟ್ಟಣದಲ್ಲಿ ಮಾಡುವುದಾಗಿ ಅಲ್ಲಿನ ಜನತೆ ನಿರ್ಧರಿಸಿದ್ದಾರೆ. ಅಲ್ಲದೆ, ಗಜೇಂದ್ರಗಡದ ಜನರು ಸಹ ಪಟ್ಟಣದಲ್ಲಿ ಆಚರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಶಾಸಕ ಜಿ.ಎಸ್. ಪಾಟೀಲರ ಗಮನಕ್ಕೆ ಈ ಎಲ್ಲ ವಿಷಯಗಳನ್ನು ತಂದು ಅವರ ನಿರ್ದೇಶನವನ್ನು ಪಡೆದು ಚರ್ಚಿಸೋಣ ಎಂದರು.
ಮಲ್ಲಯ್ಯಜ್ಜ ಮಹಾಪುರುಷಮಠ ಮಾತನಾಡಿದರು. ಹುಚ್ಚಪ್ಪ ನವಲಗುಂದ, ಬಸವರಾಜ ನವಲಗುಂದ, ಆನಂದ ಚಂಗಳಿ, ಸಂಗು ನವಲಗುಂದ, ಸಂಜಯ ದೊಡ್ಡಮನಿ, ಬಸನಗೌಡ ಪಾಟೀಲ, ಅಪ್ಪು ಗಿರಡ್ಡಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.