ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇತ್ತೀಚೆಗೆ ನಡೆದ ಎಸ್.ಎಸ್.ಕೆ. ತರುಣ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ನಡೆದ ಎಸ್.ಎಸ್.ಕೆ. ತರುಣ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಶ್ರೀರಾಮ ಸುರೇಂದ್ರಸಾ ಹಬೀಬ, ಉಪಾಧ್ಯಕ್ಷರಾಗಿ ನಾರಾಯಣಸಾ ರಾಮಚಂದ್ರಸಾ ಕಬಾಡಿ, ಗೌರವ ಕಾರ್ಯದರ್ಶಿಯಾಗಿ ಸುರೇಶ ಸೋಮನಾಥಸಾ ಮೇರವಾಡೆ, ಸಹಕಾರ್ಯದರ್ಶಿಯಾಗಿ ಪರಶುರಾಮ ಹನಮಂತಸಾ ಸೋಳಂಕಿ, ಖಜಾಂಚಿಯಾಗಿ ಸತ್ಯನಾರಾಯಣ ಫಕ್ಕೀರಸಾ ಮೇರವಾಡೆ, ಲೆಕ್ಕ ಪರಿಶೋಧಕರಾಗಿ ನರಸಿಂಗಸಾ ವೆಂಕೂಸಾ ಮೇರವಾಡೆ ಹಾಗೂ ವ್ಯಾಯಾಮಶಾಲೆ ಚೇರ್ಮನ್ ಆಗಿ ವಿನಾಯಕ ಶಂಕರಸಾ ಹಾದಿಮನಿ ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳನ್ನು ಪಂಚ ಟ್ರಸ್ಟ್ ಕಮಿಟಿ, ಎಸ್.ಎಸ್.ಕೆ. ತರುಣ ಸಂಘ, ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಮುಖಂಡರು ಮತ್ತು ಸಮಾಜಬಾಂಧವರು ಅಭಿನಂದಿಸಿ, ಶುಭ ಹಾರೈಸಿದರು.



