Home Blog Page 10

‘ಲಕ್ಷ್ಮಿ ನಿವಾಸ’ ಧಾರಾವಾಹಿಯಿಂದ ಪ್ರಮುಖ ನಟನೇ ಔಟ್‌: ಮತ್ತೋರ್ವ ಸ್ಟಾರ್‌ ಎಂಟ್ರಿ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯ ಪ್ರಮುಖ ಪಾತ್ರಗಳು ಒಬ್ಬರ ಹಿಂದೊಬ್ಬರಂತೆ ಬದಲಾಗುತ್ತಿದ್ದಾರೆ. ಈ ಹಿಂದೆ ತನು ಪಾತ್ರಧಾರಿ ಬದಲಾಗಿದ್ದರು. ಆ ಬಳಿಕ ಕಳೆದ ಒಂದು ವಾರಗಳ ಹಿಂದಷ್ಟೇ ಕಥಾ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಹೊರ ಬಂದರು.  ಇದೀಗ ಸೀರಿಯಲ್ ಮತ್ತೊಂದು ಪ್ರಮುಖ ಪಾತ್ರಧಾರಿ ಲಕ್ಷ್ಮೀ ನಿವಾಸ ತಂಡಕ್ಕೆ ಗುಡ್‌ ಬೈ ಹೇಳಿದ್ದಾರೆ.

ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶ್ವೇತಾ ವೈಯಕ್ತಿಕ ಕಾರಣದಿಂದ ಧಾರವಾಹಿ ತೊರೆದಿದ್ದಾರೆ. ಶ್ವೇತಾ ಜಾಗಕ್ಕೆ ನಟಿ ಮಾಧುರಿ ಎಂಟ್ರಿಕೊಟ್ಟಿದ್ದಾರೆ. ಇದೀಗ ಲಕ್ಷ್ಮೀ ಸೋದರನ ಪಾತ್ರದಲ್ಲಿ ನಟಿಸುತ್ತಿದ್ದ ನೀನಾಸಂ ಅಶ್ವಥ್ ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ.

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ನರಸಿಂಹ ಪಾತ್ರದಲ್ಲಿ ನಟಿಸುತ್ತಿದ್ದ ನೀನಾಸಂ ಅಶ್ವಥ್ ಧಾರವಾಹಿಯಿಂದ ಹೊರ ಬಂದಿದ್ದಾರೆ. ನೀನಾಸಂ ಅಶ್ವಥ್ ಸೀರಿಯಲ್‌ನಿಂದ ಹೊರ ಬಂದಿರೋದು ಯಾಕೆ ಎಂಬುದು ತಿಳಿದು ಬಂದಿಲ್ಲ. ಸದ್ಯ ನರಸಿಂಹಕ್ಕೆ ಪಾತ್ರಕ್ಕೆ ಮತ್ತೋರ್ವ ಖ್ಯಾತ ಹಿರಿಯ ನಟ ಧರ್ಮೆಂದ್ರ  ಎಂಟ್ರಿಕೊಟ್ಟಿದ್ದು ಸದ್ಯ ಆ ಪ್ರೋಮೋವನ್ನು ಝೀ ಕನ್ನಡ ವಾಹಿನಿ ಸೋಷಿಯಲ್‌ ಮೀಡಯಾದಲ್ಲಿ ಶೇರ್‌ ಮಾಡಿದೆ.

ಚಾಮರಾಜನಗರದಲ್ಲೂ ಹೃದಯಾಘಾತ ಭೀತಿ: ಕೋಲ್ಡ್ ಜ್ಯೂಸ್ ಕುಡಿಯುತ್ತಿದ್ದಂತೆ ಕುಸಿದು ‘ಚಾಲಕ’ ಸಾವು!

ಚಾಮರಾಜನಗರ;- ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಖಾಸಗಿ ಬಸ್ ಚಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ರಮೇಶ್ (೪೭) ಮೃತ ಚಾಲಕ.

ಮೃತ ರಮೇಶ್, ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಿಂದ ಕೊಳ್ಳೇಗಾಲಕ್ಕೆ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಮಧುವನಹಳ್ಳಿ ಗ್ರಾಮದ ಬಳಿ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ರಮೇಶ್ ತಕ್ಷಣ ಬಸ್ ನಿಲ್ಲಿಸಿ ಆಟೋದ ಮೂಲಕ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಊಟದ ವ್ಯತ್ಯಾಸದಿಂದ ಎದೆ ಉರಿ ಕಾಣಿಸಿಕೊಂಡಿರಬಹುದು ಎಂದು ತಿಳಿಸಿದ್ದಾರೆ.

ನಂತರ ಚಾಲಕ ರಮೇಶ್ ಖಾಸಗಿ ಬಸ್ ನಿಲ್ದಾಣದಲ್ಲಿ ತೆರಳಿ ಕೋಲ್ಡ್ ಜ್ಯೂಸ್ ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಜನನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರ ವೇಳೆಗೆ ಚಾಲಕ ಮೃತಪಟ್ಟಿದ್ದಾರೆ.

ನಾಯಿ ಅಡ್ಡ ಬಂದು ಬೈಕ್ ಅಪಘಾತ: ವಚನಾನಂದ ಶ್ರೀ ಸಹೋದರ ಸಾವು!

ಬೆಳಗಾವಿ:- ಬೈಕ್ ಅಪಘಾತದಲ್ಲಿ ಯೋಗಗುರು ಹಾಗೂ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರ ಸಹೋದರ ಅಶೋಕ್ ಗೌರಗೊಂಡ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಥಣಿ ಸಮೀಪದ ಭರಮೋಕೋಡಿ ಬಳಿ ಜರುಗಿದೆ.

ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಸಾಗುವಾಗ ‌ಭರಮೋಕೋಡಿ ಹತ್ತಿರ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ಅಡ್ಡ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ. ಪರಿಣಾಮ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಶೋಕ್‌ ಅವರು ತಾಯಿ ಹೆಂಡತಿ ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಂದಿನಿ ಪಾರ್ಲರ್‌ಗೆ ನುಗ್ಗಿ ದಾಂಧಲೆ: ವಸ್ತುಗಳನ್ನು ಪುಡಿಗೈದ ನಿವೃತ್ತ ಡಿಜಿ ಓಂಪ್ರಕಾಶ್ ಪುತ್ರಿ!

ಬೆಂಗಳೂರು:- ನಿವೃತ್ತ ಡಿಜಿ ಓಂಪ್ರಕಾಶ್ ಪುತ್ರಿ ದಾಂಧಲೆ ನಡೆಸಿದ್ದು, ನಗರದ ನಂದಿನಿ ಪಾರ್ಲರ್‌ ಒಂದಕ್ಕೆ ನುಗ್ಗಿ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಎಸ್, ಕೆಲವು ತಿಂಗಳ ಹಿಂದೆ ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದ ನಿವೃತ್ತ ಡಿಜಿ ಓಂ ಪ್ರಕಾಶ್ ಅವರ ಪುತ್ರಿ ದಾಂಧಲೆ ಮಾಡಿಕೊಂಡಿದ್ದಾರೆ. ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಸಿಬ್ಬಂದಿಗೂ ಕೂಡ ಕೃತಿಕಾ ಥಳಿಸಿದ್ದಾರೆ. ಅವರ ವರ್ತನೆಗೆ ಸ್ಥಳೀಯರು ಶಾಕ್ ಆಗಿದ್ದಾರೆ. ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆಯಾದ ನಂತರ ಸಹೋದರ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಇಡೀ ಮನೆಯಲ್ಲಿ ಮಗಳು ಕೃತಿಕಾ ಒಂಟಿಯಾಗಿ ವಾಸವಾಗಿದ್ದಾರೆ.

ಕಳೆದ ಸೋಮವಾರ ಸಂಜೆ ಮನೆಯ ಪಕ್ಕದ ನಂದಿನಿ ಪಾರ್ಲರ್‌ಗೆ ಕೃತಿಕಾ ಬಂದಿದ್ದರು. ಅಂಗಡಿ ಮುಂದೆ ಸ್ವಲ್ಪ ಹೊತ್ತು ಹಾಗೇ ನಿಂತು ಅಲ್ಲಿನ ಮಾಲೀಕನನ್ನು ದಿಟ್ಟಿಸಿ ನೋಡಿದ್ರು. ಇದನ್ನು ನೋಡಿದ ಮಾಲೀಕ, ‘ಯಾಕೆ ಮೇಡಂ ಏನಾಯ್ತು’ ಅಂತಾ ಕೇಳಿದ್ದ. ಈ ವೇಳೆ ಕೋಪಗೊಂಡ ಕೃತಿಕಾ ಏಕಾಏಕಿ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊಡೆದು ಪೀಸ್ ಪೀಸ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ, ತಡೆಯೋಕೆ ಬಂದ ಮಾಲೀಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಆಕೆಯ ವರ್ತನೆಯಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರನ್ನು ನೋಡಿ ಏನೂ ಆಗೇ ಇಲ್ಲ ಎಂಬಂತೆ ಕೃತಿಕಾ ಮನೆಗೆ ಹೋಗಿದ್ದಾರೆ. ಪ್ರಕರಣ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಭೀಕರ ಅಪಘಾತ: ಕ್ಯಾಂಟರ್ ಲಾರಿ ಹರಿದು ಗೃಹಿಣಿ ಸ್ಥಳದಲ್ಲೇ ಸಾವು!

ನೆಲಮಂಗಲ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹೊರವಲಯದ ಮಾಕಳಿ ಬಳಿ ಕ್ಯಾಂಟರ್ ಲಾರಿ ಹರಿದು ಗೃಹಿಣಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

24 ವರ್ಷದ ಯಶೋಧ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಹೆಗ್ಗಡ ದೇವನಪುರದಿಂದ ಫಂಕ್ಷನ್ ಮುಗಿಸಿ ಅಂಚೆಪಾಳ್ಯ ಕಡೆ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಎಡಕ್ಕೆ ಬಂದ ಕ್ಯಾಂಟರ್ ಚಾಲಕ ಬೈಕ್ ಗೆ ಗುದ್ದಿದ್ದಾನೆ.

ಈ ವೇಳೆ ಮಹಿಳೆಯು, ಬೈಕ್ ನಿಂದ ಕೆಳಕ್ಕೆ ಬಿದ್ದಿದ್ದಾರೆ. ಆಗ ಯಶೋಧ ಮೇಲೆ ಲಾರಿ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಹಿಳೆ ಶವವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

Heart Attack Death: ಹೃದಯಾಘಾತದಿಂದ ಸರ್ಕಾರಿ ವೈದ್ಯ ಸಾವು!

ಚಿತ್ರದುರ್ಗ:- ಹೃದಯಾಘಾತದಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರೋರ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅರಸನಘಟ್ಟ ಗ್ರಾಮದಲ್ಲಿ ಜರುಗಿದೆ.

ಡಾ. ಎನ್. ಸಂದೀಪ(48) ಮೃತ ವೈದ್ಯ. ಸಂದೀಪ್, ಶಿವಮೊಗ್ಗದ ಹೊಳೆಹೊನ್ನೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಇದ್ದಕ್ಕಿದ್ದಂತೆ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಜುಲೈ 28 ರಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಡಾ. ಸಂದೀಪ ಸಾವನ್ನಪ್ಪಿದ್ದಾರೆ. ಸ್ವಗ್ರಾಮ ಅರಸನಘಟ್ಟದಲ್ಲಿ ಡಾ. ಸಂದೀಪ ಅಂತ್ಯಸಂಸ್ಕಾರ ನೆರವೇರಿದೆ. ವೈದ್ಯನೇ ಹೃದಯಾಘಾತಕ್ಕೆ ಬಲಿ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದೆ.

ಲಾಡ್ಜ್ ನಲ್ಲಿ ಪ್ರೇಯಸಿಯನ್ನು ಕೊಲೆಗೈದ ಲವರ್: ಅಷ್ಟಕ್ಕೂ ನಡೆದಿದ್ದೇನು?

ಒಡಿಶಾ:- ಯುವತಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ಜರುಗಿದೆ.

ಮೃತಳನ್ನು ಪ್ರಿಯಾ ಕುಮಾರಿ ಮೊಹರಾನ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಲಂಜಿಪಲ್ಲಿ ಪ್ರದೇಶದ ನಿವಾಸಿ 24 ವರ್ಷದ ಅಭಯ ಕುಮಾರ್ ಮೊಹರಾನ ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಕೊಲೆಗೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ಬೆರ್ಹಾಂಪುರ ಎಸ್‌ಪಿ ತಿಳಿಸಿದ್ದಾರೆ. ಈ ಜೋಡಿ ಒಟ್ಟು 3 ಬಾರಿ ಇದೇ ಲಾಡ್ಜ್‌ಗೆ ಹೋಗಿದ್ದಾರೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.

Heart Attack: ಹಾಸನದಲ್ಲಿ ಹೃದಯಾಘಾತದಿಂದ ಮತ್ತೊಂದು ಸಾವು!

ಹಾಸನ:- ಹಾಸನದಲ್ಲಿ ಹೃದಯಾಘಾತದ ಸರಣಿ ಸಾವಿನ ಸಂಖ್ಯೆ ಮುಂದುವರಿದಿದೆ. ಇದೀಗ ಹೃದಯಾಘಾತಕ್ಕೆ ಮತ್ತೊಂದು ಬಲಿ ಆಗಿದ್ದು, ಹಾಸನದ ಕರಿಗೌಡ ಕಾಲೋನಿಯಲ್ಲಿ ಘಟನೆ ಜರುಗಿದೆ.

ಸಂಪತ್ ಕುಮಾರ್ (53) ಮೃತ ವ್ಯಕ್ತಿ. ಮೃತ ಸಂಪತ್ ಕುಮಾರ್ ಗೆ ಮೊದಲು ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹಿಮ್ಸ್ ಆಸ್ಪತ್ರೆಗೆ ಮನೆಯವರು ಕರೆದೊಯ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಂಪತ್ ಕುಮಾರ್ ಸಾವನ್ನಪ್ಪಿದ್ದಾರೆ.

ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಕಳೆದ 42 ದಿನಗಳಲ್ಲಿ ಒಟ್ಟು 28 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕ ಹುಟ್ಟು ಹಾಕಿದೆ.

ಧಾರಕಾರ ಮಳೆ: ಉತ್ತರ ಕನ್ನಡ, ಕೊಡಗಿನ ಶಾಲೆಗಳಿಗೆ ಇಂದು ರಜೆ ಘೋಷಣೆ!

ಕಾರವಾರ:- ಧಾರಕಾರ ಮಳೆ ಮುಂದುವರಿದ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಿಸಿ ಆಯಾ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಿಗೆ ರಜೆ ಘೋಷಣೆ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ನೀಡಿದ್ದಾರೆ.

ಜಿಲ್ಲೆಯಲ್ಲಿ ಗಾಳಿ ಸಹಿತ ಹೆಚ್ಚಿನ ಮಳೆಯಾಗುತಿದ್ದು, ಇಂದು ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯ ಜೊತೆಗೆ ಗಾಳಿಯ ರಭಸವೂ ಹೆಚ್ಚಿರಲಿದೆ. ಈ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೂ ಕೂಡ ನಿರ್ಬಂಧ ಹೇರಲಾಗಿದೆ. ಅಲ್ಲದೇ ಜಿಲ್ಲೆಯ ಜಲಪಾತಗಳು ಹಾಗೂ ಕಡಲತೀರ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರೆದಿದೆ.

ಕೊಡಗು ಜಿಲ್ಲೆಯಲ್ಲಿ ರಜೆ ಘೋಷಣೆ:

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆ ಇಂದು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜ ಅವರು ಆದೇಶಿಸಿದ್ದಾರೆ.

ಪವಾಡ ಪುರುಷರ ನೆನೆಯೋಣ…

ಈ ನಾಡಿನಲ್ಲಿ ಧರ್ಮಕ್ಕೆ ಸಂಕಟ ಬಂದಾಗ ಧರ್ಮ ಸಂಸ್ಥಾಪನೆಗಾಗಿ ಧರ್ಮಾತ್ಮರು, ಶರಣ ಶರಣೆಯರು, ಯೋಗಿಗಳು, ಪುಣ್ಯ ಪುರುಷರು, ಸಾಧು-ಸಂತರು, ದಾರ್ಶನಿಕರು, ಮಹಾತ್ಮರು ಕಾಲಕಾಲಕ್ಕೆ ತಕ್ಕಂತೆ ಉದಯಿಸಿ ತಮ್ಮ ಆಚಾರ-ವಿಚಾರದಿಂದಲೋ ಅವತರಿಸಿ ಬಂದಿರುವುದರಿಂದ ಈ ನಾಡಿಗೆ ಧರ್ಮದ ನಾಡೆಂದು, ಮಹಾತ್ಮರ ಮಂಗಲದ ವಾಸಸ್ಥಾನವೆಂದು, ಭಕ್ತವಂತರ ನಾಡೆಂದೂ ಕರೆಯುವುದುಂಟು.

ಇಂತಹ ಪುಣ್ಯದ ಭೂಮಿಯಲ್ಲಿ ಅವತಾರಿ ಪುರುಷರಾಗಿ ಹಾಲಕೆರೆಯ ಪರಮಪೂಜ್ಯ ಮಹಾ ತಪಸ್ವಿ ಲಿಂಗೈಕ್ಯ ಗುರು ಅನ್ನದಾನ ಶಿವಯೋಗಿಗಳು, ಕೋಡಿಕೊಪ್ಪದ ಲಿಂಗೈಕ್ಯ ಹಠಯೋಗಿ ಹುಚ್ಚೀರಪ್ಪಜ್ಜನವರೂ, ಗದುಗಿನ ಗಾನಯೋಗಿ ಪಂಡಿತ ಲಿಂಗೈಕ್ಯ ಡಾ. ಪುಟ್ಟರಾಜ ಗವಾಯಿಗಳವರೂ ಜನಿಸಿ ಭಕ್ತರ ಬಾಳಿಗೆ ಬೆಳಕನ್ನು ಚೆಲ್ಲಿದರು.

ಇಂತಹ ಅನೇಕ ಮಹಿಮಾ ಪುರುಷರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯ ಶ್ರೀ ಅಣ್ಣಯ್ಯ-ತಮ್ಮಯ್ಯನವರು ಶಿವಶರಣರಾಗಿ, ಭಕ್ತಿವಂತರಾಗಿ, ಗುರು-ಲಿಂಗ-ಜಂಗಮರ ಸೇವಾ ತತ್ಪರರಾಗಿ ದಾಸೋಹ ಮೂರ್ತಿಗಳಾಗಿ, ಮನು ಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಿಮಾ ಪುರುಷರಾಗಿ ಮೆರೆದ ವಿಷಯ ಇಂದಿಗೂ ಚಿರಸ್ಮರಣೀಯ.

ಕಲಬುರ್ಗಿ ಜಿಲ್ಲೆಯ ವಾಗಿನಗಿರಿಯಿಂದ ಬಂದ ಕುದರಿ ಮನೆತನದ ಉಭಯ ಶಿವಶರಣರು 1811ರಲ್ಲಿ ಅಣ್ಣಯ್ಯನವರು ಹಾಗೂ 1814ರಲ್ಲಿ ತಮ್ಮಯ್ಯನವರು ವೀರಶೈವ ಸದಾಚಾರ ಸಂಪನ್ನರಾದ ಸಣ್ಣಬಸವಪ್ಪ ಶೆಟ್ಟರ ಹಾಗೂ ಚನ್ನಮ್ಮ ಎಂಬ ಪುಣ್ಯ ದಂಪತಿಗಳ ಉದರದಿಂದ ಸತ್ಪುತ್ರರಾಗಿ ಜನ್ಮವೆತ್ತಿ ಬಂದರು.

ಈ ಶರಣರು ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬದುಕಿಗೆ ವಿಶಿಷ್ಟವಾದ ಅರ್ಥ ಕೊಟ್ಟು ಜನರ ಬಾಳಿಗೆ ಬೆಳಕನ್ನು ನೀಡಿದರು. ತಮ್ಮಯ್ಯ ಶರಣರು ಬಾಲ್ಯಾವಸ್ಥೆಯಲ್ಲಿಯ ಅನೇಕ ಪವಾಡಗಳನ್ನು ತೋರಿಸಿದರು. ಕೋಡಿಕೊಪ್ಪದ ಹಠಯೋಗಿ ಹುಚ್ಚೀರಪ್ಪಜ್ಜನವರು ಇಡಿ ಜಗತ್ತಿಗೆ ನೀಡಿದ ಸಂದೇಶ “ಯಾವುದು ಹೌದು ಅದು ಅಲ್ಲ; ಯಾವುದು ಅಲ್ಲ ಅದು ಹೌದು” ಎನ್ನುವ ನುಡಿಯನ್ನು ಸಾರಿದ ಹಾಗೇ 137 ವರ್ಷಗಳ ಹಿಂದೆಯ ತಮ್ಮಯ್ಯ ಶರಣರು ಕಲಿಯುಗದಲ್ಲಿ ದುಷ್ಟರ ಹಾವಳಿ ಹೆಚ್ಚಾಗುವುದು “ಸತ್ಯ ಸುಳ್ಳಾಗುತ್ತದೆ, ಸುಳ್ಳು ಸತ್ಯವಾಗುತ್ತದೆ” ಎಂಬ ಭವಿಷ್ಯವಾಣಿ ನುಡಿದರು. ಅಂದು ಅವರು ಹೇಳಿರುವ ಮಾತು ಇಂದಿನ ದಿನಗಳಲ್ಲಿ ನಾವು ನಿತ್ಯ ಕಾಣುತ್ತಿದ್ದೇವೆ.

ಶರಣರು ಬಾಲ್ಯದಲ್ಲಿಯೇ ಮಹಾತೇಜಸ್ವಿಗಳಾಗಿ ಅವತಾರಿಕ ಪುರುಷರಾಗಿ ಅದ್ಭುತ ಪವಾಡ ರೂಪಗಳನ್ನು ತೋರಿಸಿ ಮಹಾ ಶಿವಶರಣರೆನಿಸಿಕೊಂಡು ಆಟಿಕೆಯ ಸಾಮಗ್ರಿ ಕಟ್ಟಿಗೆಯ ಬಸವಣ್ಣನಿಂದ ಓಂಕಾರ ನುಡಿಸಿದರು. ಅದೇ ಬಸವಣ್ಣನಿಂದ ಬಂದ ಅಪವಾದಕ್ಕೆ ಕಳ್ಳನಿಂದ ನಿಜವ ನುಡಿಸಿದರು. ಇಂತಹ ಪವಾಡ ಸನ್ನಿವೇಶವನ್ನು, ಪ್ರತ್ಯಕ್ಷವಾಗಿ ಕಂಡ ಭಕ್ತರು ಇವರು ಸಾಮಾನ್ಯರಲ್ಲವೆಂದು ಮಹಾ ಪವಾಡ ಪುರುಷರೆಂದು ಅರಿತು ಅಪಾರವಾದ ಭಕ್ತಿ, ಪ್ರೀತಿ, ವಿಶ್ವಾಸಗಳನ್ನಿಟ್ಟುಕೊಂಡು ನಡೆಯ ಹತ್ತಿದರು.

ಗುರುವಿನ ಆಜ್ಞೆಯಂತೆ ಇಲಕಲ್ಲ ಪಟ್ಟಣದ ರುದ್ರಪ್ಪ ಮಾಟೂರ ಇವರ ಪುತ್ರಿ ಗಂಗಮ್ಮನವರನ್ನು ಅಣ್ಣಯ್ಯ (ಮಲ್ಲಿರ್ಜುನಪ್ಪ)ನೊಂದಿಗೆ ಹಾಗೂ ಜಾಲಿಹಾಳ ಗ್ರಾಮದ ಪರಪ್ಪ ಕಡಗದ ಇವರ ಪುತ್ರಿ ಅಂದಾನಮ್ಮನವರನ್ನು ತಮ್ಮಯ್ಯ (ಬಸವಶ್ರೇಷ್ಠ)ನೊಂದಿಗೆ 1835ರಲ್ಲಿ ಮದುವೆಯಾದರು. ಉಭಯ ಶರಣರು ಸಂಸಾರವನ್ನು ದಾಸೋಹ ಮೂರ್ತಿಗಳಾಗಿ ಸಾಗಿಸುತ್ತಿದ್ದರು.

1884ರಲ್ಲಿ ತಮ್ಮಯ್ಯನವರು, 1889ರಲ್ಲಿ ಅಣ್ಣಯ್ಯನವರು ಲಿಂಗೈಕ್ಯರಾದರು. ತಮ್ಮಯ್ಯ ಶರಣರು ತಾವು ಲಿಂಗೈಕ್ಯರಾಗುವುದಕ್ಕಿಂತ ಒಂದು ವಾರ ಮೊದಲೇ ಲಿಂಗೈಕ್ಯರಾಗುವುದನ್ನು ಹಾಗೂ ಐದು ವರ್ಷಗಳ ನಂತರ ನಮ್ಮ ಅಣ್ಣಯ್ಯನವರು ಲಿಂಗೈಕ್ಯರಾಗುತ್ತಾರೆಂದು ಭಕ್ತರಲ್ಲಿ ಭವಿಷ್ಯ ನುಡಿದಿದ್ದರು. ಐಕ್ಯರಾದ ಎಂಟು ದಿನಗಳ ನಂತರ ಶರಣರು ಮುಷ್ಠಿಗೇರಿ, ನೆಲ್ಲೂರು ಗ್ರಾಮದ ಜಂಗಮರಿಗೆ ದರ್ಶನ ಕೊಟ್ಟರು.

ಶರಣರ ಪವಾಡಗಳು ಒಂದೆರಡಲ್ಲ. ತಂದೆಯ ಕಾಲದಲ್ಲಿ ಹೊಲಮನೆಗಳನ್ನು ಬರೆಯಿಸಿಕೊಂಡಿದ್ದ ಸಾಲಗಾರರನ್ನು ಕರೆಯಿಸಿ ಶರಣರು ನಿಮ್ಮ ಹೊಲ, ಮನೆಗಳನ್ನು ನೀವು ತೆಗೆದುಕೊಳ್ಳಿ, ನಿಮ್ಮ ಸಾಲವು ತೀರಿ ಹೋಯಿತು ಎಂದು ಹೇಳಿ ಸಾವಿರಾರು ಸಾಲದ ಕಾಗದಪತ್ರಗಳನ್ನು ಸುಟ್ಟು ಹಾಕಿದರು. ಸಾಲಿಗರ ಮನೆಯಲ್ಲಿ ಬರೀ ನೀರು ಕುಡಿದು ನಿಮ್ಮ ಸಾಲ ಮುಟ್ಟಿರುತ್ತದೆ ಎಂದು ಹೇಳಿದರು. ಇವರ ಹೊಲದಲ್ಲಿ ಕುಸುಬಿ ಕದ್ದ ಕಳ್ಳರಿಗೆ ಬುದ್ಧಿ ಬರುವಂತೆ ಮಾಡಿ ಸನ್ಮಾರ್ಗಕ್ಕೆ ಹಚ್ಚಿದರು. ಸುಳ್ಳು ಹೇಳಿದ ಜಂಗಮನಿಗೆ ಬುದ್ದಿ ಹೇಳಿದರು.

ಶರಣರ ಕಾಲಿಗೆ ಹುಣ್ಣು ಆಗಿತ್ತು. ಹುಳಗಳು ಬಿದ್ದಿರಲು ಅವುಗಳಿಗೆ ಸಕ್ಕರಿ ಹಾಕಿ ಜೋಪಾನ ಮಾಡುತ್ತಿದ್ದರು. ಸದ್ಭಕ್ತರಿಗೆ ಸಂತಾನ ಫಲವನ್ನು ಆಗ್ರಹಿಸಿದರು. ಮುಚ್ಚಿದ್ದ ಕದವನ್ನು ಕೂಡಲ ಸಂಗಮೇಶ್ವರನಿಂದ ತೆಗೆಯಿಸಿದರು. ಹಾವಿನ ಹೆಡೆಯಲ್ಲಿದ್ದ ರತ್ನದ ದೇವರ ಗರ್ಭ ಗುಡಿಯಲ್ಲಿಯ ಲಿಂಗಕ್ಕೆ ಬೆಳಕು ಮಾಡಿದರು. ಅಚ್ಚು ಮುರಿದ ಬಂಡಿಯನ್ನು ಹಾಲಕೆರೆಯಿಂದ ಜಕ್ಕಲಿಯವರೆಗೂ ನಡೆಯಿಸಿದರು. ಹೀಗೆ ಅನಂತಾ ಮಹಿಮೆಗಳಿಂದ ಜನರ ಮನ ಮಾಲಿನ್ಯವನ್ನು ಕಳೆದು ಅವರಿಗೆ ಸತ್ಯ, ಜ್ಞಾನದ ಬೆಳಕನ್ನು ತೋರಿಸಿದರು.

ಇಂತಹ ಪುಣ್ಯ ಪುರುಷರು ನಡೆದಾಡಿದ ಈ ನೆಲ ಪಾವನವಾಗಿದೆ.ಅವರ ಕಾಯಕದ ಬದುಕು, ನಮ್ಮ ಜೀವನದ ಸೂತ್ರವಾಗಿದೆ. ಪುಣ್ಯಾತ್ಮರು ತೋರಿದ ಮಾರ್ಗದಲ್ಲಿ ಭಕ್ತರೆಲ್ಲರೂ ಬದುಕು ಕಂಡುಕೊಂಡರೆ ಸಜ್ಜನ ಸಮಾಜ ನಿರ್ಮಾಣಗೊಂಡು ಸುಭಿಕ್ಷೆ ನೆಲೆಸಲು ಸಾಧ್ಯ. ಅವರ ದಾಸೋಹ ಕಾಯಕದ ಪ್ರೀತಿ, ಹಸಿವು ಮುಕ್ತ ಸಮಾಜ ನಿರ್ಮಾಣದ ಶರಣರ ಕಳಕಳಿ, ಸದೃಢ ಸಮಾಜದ ಪರಿಕಲ್ಪನೆ, ಇಂದಿನ ಪ್ರಜಾಪ್ರಭುತ್ವದ ಆಶಯ ಬಿಂಬಿಸುವ ಸದಾಶಯವಾಗಿದೆ.

– ಸಂಗಮೇಶ ಮೆಣಸಗಿ.

ಜಕ್ಕಲಿ.

error: Content is protected !!