ವಿಜಯಸಾಕ್ಷಿ ಸುದ್ದಿ, ಗದಗ: ನೊಂದ ಅಮಾಯಕ ಮಹಿಳೆಯರು ದೂರು ನೀಡಲು ಕಚೇರಿಗೆ ಬಂದರೆ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಡಿಐಜಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿದೆ. ಆದರೆ ರಾಮಚಂದ್ರ ರಾವ್ ಅವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಶಿಡ್ಲಘಟ್ಟ ನಗರಸಭೆಯ ಆಯುಕ್ತರಾದ ಅಮೃತಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಗರಸಭೆ ಕಚೇರಿಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ ರಾಜೀವಗೌಡನ ಮೇಲೆ ಎಫ್‌ಐಆರ್ ಆಗಿ 8 ದಿನಗಳೇ ಕಳೆದರೂ ಇನ್ನೂ ಬಂಧಿಸಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ನಿರ್ಮಲಾ ಕೊಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಜಯಶ್ರೀ ಉಗಲಾಟದ, ಜಿಲ್ಲಾ ಕಾರ್ಯದರ್ಶಿ ಅಶೋಕ ಕುಡತಿನಿ, ಮಖಂಡರಾದ ಶ್ರೀಪತಿ ಉಡುಪಿ, ಅಶೋಕ ಸಂಕಣ್ಣವರ, ಗದಗ ನಗರ ಮಂಡಲ ಉಪಾಧ್ಯಕ್ಷರಾದ ಪದ್ಮಿನಿ ಮುತ್ತಲದಿನ್ನಿ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಜಯಲಕ್ಷಿಮೀ ಮಾನ್ವಿ, ಪ್ರಧಾನ ಕಾರ್ಯದರ್ಶಿಗಳಾದ ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರೇಖಾ ಬಂಗಾರಶೆಟ್ಟರ, ಮಂಜುನಾಥ ಶಾಂತಗೇರಿ, ಗದಗ ನಗರ ಮಂಡಲ ಕಾರ್ಯದರ್ಶಿಯಾದ ಸಿದ್ರಾಮೇಶ ಹಿರೇಮಠ, ಪ್ರಮುಖರಾದ ಅಶ್ವಿನಿ ಜಗತಾಪ್, ವಂದನಾ ವರ್ಣೇಕರ್, ಜಯಶ್ರೀ ಅಣ್ಣಿಗೇರಿ, ನಗರಸಭಾ ಸದಸ್ಯೆ ಲಕ್ಷಿಮೀ ಶಂಕರ ಕಾಕಿ, ಮಾಧುಸಾ ಮೇರವಾಡೆ, ರಾಚಯ್ಯ ಹೊಸಮಠ, ದೇವೆಂದ್ರಪ್ಪ ಹೂಗಾರ, ವಿರೂಪಾಕ್ಷಪ್ಪ ಐಲಿ, ಪ್ರೀತಿ ಶಿವಪ್ಪನಮಠ, ರೇಖಾ ಗೌಳಿ, ರವಿ ಮಾನ್ವಿ, ವಿನೋದ ಹಂಸನೂರ ಮುಂತಾದವರಿದ್ದರು.

