Home Blog Page 186

India vs New Zealand: ನನಗೆ ಸಿಗುವ ಟ್ರೋಫಿಗಳನ್ನು ನನ್ನ ತಾಯಿಗೆ ಕಳುಹಿಸುತ್ತೇನೆ: ವಿರಾಟ್ ಕೊಹ್ಲಿ

0

2026ರ ಮೊದಲ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಈ ಗೆಲುವಿನ ಪ್ರಮುಖ ಶಿಲ್ಪಿ ವಿರಾಟ್ ಕೊಹ್ಲಿ ಆಗಿದ್ದಾರೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 300 ರನ್‌ಗಳ ಕಠಿಣ ಗುರಿ ನೀಡಿತು. ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿ ಒತ್ತಡ ಇದ್ದರೂ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಇನಿಂಗ್ಸ್‌ನ್ನು ಅದ್ಭುತವಾಗಿ ಕಟ್ಟಿದರು.

ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್‌ಗಳ ಸಹಿತ 93 ರನ್‌ಗಳನ್ನು ಬಾರಿಸಿ ಔಟಾದರು. ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 49 ಓವರ್‌ಗಳಲ್ಲಿ 306 ರನ್ ಗಳಿಸಿ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.

ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ‘ಇದು ನಿಮ್ಮ ಎಷ್ಟನೇ ಪ್ಲೇಯರ್ ಆಫ್ ದಿ ಮ್ಯಾಚ್?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “ನಿಜವಾಗಿ ನನಗೆ ಎಷ್ಟನೇದು ಎಂಬುದು ಗೊತ್ತಿಲ್ಲ” ಎಂದು ನಗುತ್ತಾ ಹೇಳಿದರು.

ಇನ್ನೂ ತಮ್ಮ ಪ್ರಶಸ್ತಿಗಳ ಕುರಿತು ಮಾತನಾಡಿದ ಅವರು, “ನನಗೆ ಸಿಗುವ ಟ್ರೋಫಿಗಳನ್ನು ನಾನು ಗುರುಗಾಂವ್‌ನಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೇನೆ. ಅವುಗಳನ್ನು ನೋಡಿ ಅವರು ತುಂಬಾ ಹೆಮ್ಮೆಪಡುತ್ತಾರೆ. ಎಲ್ಲಾ ಪ್ರಶಸ್ತಿಗಳನ್ನು ಅವರೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ” ಎಂದು ಭಾವನಾತ್ಮಕವಾಗಿ ಹೇಳಿದರು. ಈ ಗೆಲುವಿನೊಂದಿಗೆ ಭಾರತ ತಂಡ ಹೊಸ ವರ್ಷದ ಕ್ರಿಕೆಟ್ ಪ್ರಯಾಣವನ್ನು ಆತ್ಮವಿಶ್ವಾಸದಿಂದ ಆರಂಭಿಸಿದೆ.

ಮುಗಿಯುತ್ತಿಲ್ಲ ಹಾವೇರಿ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ: ಕೆಎಂಎಫ್ ಖರೀದಿ ಕೇಂದ್ರಗಳಲ್ಲಿ ರಿಜೆಕ್ಷನ್, ರೈತರ ಆಕ್ರೋಶ

0

ಹಾವೇರಿ: ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೇ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಮೆಕ್ಕೆಜೋಳ ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ನಡೆಸಿದ ಹೋರಾಟದ ಬಳಿಕ ಸರ್ಕಾರ ಪ್ರತಿ ರೈತನಿಂದ 12 ಕ್ವಿಂಟಾಲ್ ಖರೀದಿ ಘೋಷಿಸಿ, ನಂತರ 20 ಕ್ವಿಂಟಾಲ್ ಹಾಗೂ ಕೊನೆಗೆ 50 ಕ್ವಿಂಟಾಲ್‌ವರೆಗೆ ಖರೀದಿ ಪ್ರಮಾಣ ಹೆಚ್ಚಿಸಿತ್ತು. ಆದರೆ ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿರುವ ಕೆಎಂಎಫ್ ಖರೀದಿ ಕೇಂದ್ರದಲ್ಲಿ ಖರೀದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ನೋಂದಣಿ ವೇಳೆ ಸ್ಯಾಂಪಲ್‌ ಒಪ್ಪಿಗೆಯಾದರೂ, ನಂತರ ತೇವಾಂಶ ಅಧಿಕ, ಫಂಗಸ್ ಇದೆ ಎಂಬ ಕಾರಣ ನೀಡಿ ಮೆಕ್ಕೆಜೋಳವನ್ನು ಖರೀದಿ ಮಾಡದೆ ಹಿಂದಿರುಗಿಸಲಾಗುತ್ತಿದೆ. ಪರಿಣಾಮವಾಗಿ ರೈತರು ಟ್ರಾಕ್ಟರ್‌ಗಳಲ್ಲೇ ಮಲಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಊಟ, ವಸತಿ, ಸಾರಿಗೆ ಖರ್ಚು ಹೆಚ್ಚಿದ್ದು, ಆರ್ಥಿಕ ಸಂಕಷ್ಟ ಗಂಭೀರವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಕೆಲ ರೈತರು ಮಾತ್ರ ಬೆಳೆ ಮಾರಾಟ ಮಾಡಿ ಸಾಲ ತೀರಿಸಿದ್ದಾರೆ. ಇನ್ನೂ ಅನೇಕ ರೈತರು ಬೆಳೆ ಮಾರಾಟ ಮಾಡಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಮಾರುಕಟ್ಟೆಗೆ ಬೆಳೆ ತಂದ ಬಳಿಕ ನಿಯಮಗಳನ್ನು ಹೇಳಿ ನಿರಾಕರಿಸುವುದು ಅನ್ಯಾಯ ಎಂದು ರೈತರು ಆರೋಪಿಸಿದ್ದು, ಖರೀದಿ ಕೇಂದ್ರಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ರಾಮಮೂರ್ತಿ ನಗರ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಸಾವು ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು

0

“ರಾಮಮೂರ್ತಿ ನಗರ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಸಾವು: ನಿಗೂಢತೆ ಬಿಚ್ಚಿಟ್ಟ ತನಿಖೆ, ಹತ್ಯೆ ಪ್ರಕರಣವಾಗಿ ದಾಖಲು – 18 ವರ್ಷದ ಯುವಕನ ಬಂಧನ”

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣದಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ಅಸಹಜ ಸಾವೆಂದು ಪರಿಗಣಿಸಲಾಗಿದ್ದ ಪ್ರಕರಣ, ಪೊಲೀಸ್ ತನಿಖೆ ವೇಳೆ ಹತ್ಯೆಯೆಂದು ದೃಢಪಟ್ಟಿದೆ.

ಪೊಲೀಸರ ತನಿಖೆಯ ಪ್ರಕಾರ, ಶರ್ಮಿಳಾರ ಕೊಲೆಯನ್ನು 18 ವರ್ಷದ ಯುವಕ ಕರ್ಣಲ್ ಕುರೈ ಎಸಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸುಬ್ರಮಣ್ಯ ಲೇಔಟ್‌ನಲ್ಲಿರುವ ಶರ್ಮಿಳಾ ಮನೆಯ ಎದುರಿನ ಮನೆಯಲ್ಲಿ ವಾಸವಿದ್ದ ಕರ್ಣಲ್, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ.

ಜನವರಿ 3ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿ ಶರ್ಮಿಳಾ ಮನೆಗೆ ನುಗ್ಗಿ, ಆಕೆಯನ್ನು ತಬ್ಬಿ ಅನುಚಿತವಾಗಿ ವರ್ತಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಆತನನ್ನು ತಳ್ಳಿದಾಗ, ಕೋಪಗೊಂಡ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶರ್ಮಿಳಾ ಮಲಗಿದ್ದ ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಮಂಗಳೂರು ಮೂಲದ ಶರ್ಮಿಳಾ ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್‌ನಲ್ಲಿ ವಾಸವಾಗಿದ್ದು, ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಜನವರಿ 3ರಂದು ರಾತ್ರಿ 10.30ರ ಸುಮಾರಿಗೆ ಮನೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಮನೆ ಮಾಲೀಕ ವಿಜಯೇಂದ್ರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ, ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಮನೆ ಒಳಗಿನ ವಸ್ತುಗಳು ಸುಟ್ಟುಹೋಗಿದ್ದವು ಹಾಗೂ ಶರ್ಮಿಳಾ ಪ್ರಜ್ಞಾಹೀನಳಾಗಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಆದಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಮಗ್ರ ತನಿಖೆ ಬಳಿಕ ಇದು ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

‘ನಾನ್ ಕನ್ನಡ HR’ ನೇಮಕಾತಿ ಜಾಹೀರಾತು: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಖಾಸಗಿ ಕಂಪನಿ!

0

ಬೆಂಗಳೂರು: ಖಾಸಗಿ ಕಂಪನಿಗಳು ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡಿಗರನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳು ಮತ್ತೆ ಕೇಳಿಬಂದಿವೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎಂಬ ಖಾಸಗಿ ಕಂಪನಿಯೊಂದು ನೌಕ್ರಿ ಡಾಟ್ ಕಾಮ್‌ನಲ್ಲಿ ಪ್ರಕಟಿಸಿದ ನೇಮಕಾತಿ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಂಪನಿಯು ಮಾನವ ಸಂಪನ್ಮೂಲ (HR) ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದು, “NON KANNADA HR” ಅಭ್ಯರ್ಥಿಗಳಿಗೆ ಆದ್ಯತೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಜಾಹೀರಾತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.

ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಆದ್ಯತೆ ನೀಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಸಂಘಟನೆಗಳೂ ಪ್ರತಿಕ್ರಿಯಿಸಿದ್ದು, ಕನ್ನಡ ನೆಲದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಪಿಸಿವೆ. ಕಂಪನಿಯು ಕೂಡಲೇ ಕ್ಷಮೆ ಕೇಳಬೇಕು ಹಾಗೂ ವಿವಾದಾತ್ಮಕ ಜಾಹೀರಾತನ್ನು ವಾಪಸ್ ಪಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಶೋಕಿಗಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಇಬ್ಬರು ಖದೀಮರು ಅರೆಸ್ಟ್!

0

ಮಂಡ್ಯ: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸದ್ಧಾಂ ಹುಸೇನ್ ಮತ್ತು ಸೈಯದ್ ಅಯೂಬ್ ಬಂಧಿತರು. ಆರೋಪಿಗಳು ಈ ಹಿಂದೆ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದೆ, ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವುದು, ಮನೆಗಳಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ಮಾಡುವುದು, ಹೀಗೆ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಇತ್ತೀಚೆಗೆ ಕಿರುಗಾವಲು ಪೊಲೀಸರು ತನಿಖೆ ನಡೆಸಿ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಹ ಕಳ್ಳತನ ನಡೆಸಿದ್ದಾರೆ ಎಂಬುವುದು ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.

ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್: ಆರೋಪಿ ಬಂಧನ

0

ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿ ಅವಮಾನಿಸಿದ ಯುವಕ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಯನಾ ಮೋಟಮ್ಮ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಎರಡು ಖಾತೆಗಳಿವೆ — ಒಂದು ವೈಯಕ್ತಿಕ, ಮತ್ತೊಂದು ರಾಜಕೀಯ. ವೈಯಕ್ತಿಕ ಖಾತೆಯಲ್ಲಿ ಪ್ರವಾಸ ಹಾಗೂ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ವೇಳೆ, ಬಟ್ಟೆ ವಿಚಾರ ಹಿಡಿದು ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡತೊಡಗಿದರು. ಈ ಕಾಮೆಂಟ್‌ಗಳು ಕ್ರಮೇಣ ಅವಮಾನಕಾರಿ ಮಟ್ಟ ತಲುಪಿದ್ದವು.

ಈ ಬಗ್ಗೆ ಶಾಸಕಿ ಅವರ ಪಿಎ ಸಂಸುದ್ದೀನ್ ಅವರು ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಕಾಮೆಂಟ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ತನಿಖೆ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮರುಮರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದು, ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ನಯನಾ ಮೋಟಮ್ಮ ಅವರು ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನೋವು ಹೊರಹಾಕಿದ್ದರು. “ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ಕೆಲವರು ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿದಿದ್ದಾರೆ. ಡಿಪಿ ಇಲ್ಲದ ಪ್ರೊಫೈಲ್‌ಗಳಿಂದ ಕಾಮೆಂಟ್ ಮಾಡುತ್ತಾರೆ. ಆದರೆ ಒಂದು ದಿನ ನಾನವರನ್ನು ಎದುರಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

ಒಟ್ಟಿನಲ್ಲಿ, ಈ ಪ್ರಕರಣ ಇದೀಗ ಮಹಿಳೆಯರ ಮೇಲೆ ನಡೆಯುವ ಆನ್‌ಲೈನ್ ಕಿರುಕುಳದ ವಿರುದ್ಧ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್ ಮಾಡಿದ್ದ ಯುವಕ ಅರೆಸ್ಟ್!

0

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದ ಅರೋಪಿಯೋರ್ವನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ಯಕ್ಷಿತ್ ರಾಜ್ ಬಂಧಿತ ಆರೋಪಿ. ಬಂಧಿತನನ್ನು ಮೂಡಿಗೆರೆ ಪೊಲೀಸರು ಕಸ್ಟಡಿಗೆ ತೆಗೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯು, ಶಾಸಕಿ ನಯನಾ ಮೋಟಮ್ಮ ಅವರ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಅವರ ಬಟ್ಟೆ ಮತ್ತು ವೈಯಕ್ತಿಕ ಜೀವನದ ಕುರಿತು ನಿರಂತರವಾಗಿ ಕಾಮೆಂಟ್ ಮಾಡಿದ್ದ. ಈ ಸಂಬಂಧ ಶಾಸಕಿಯ ಪಿಎ ಸಂಸುದ್ದೀನ್ ಕಳೆದ ಅಕ್ಟೋಬರ್ ತಿಂಗಳಲ್ಲೇ ದೂರು ದಾಖಿಸಿದ್ದರು.

ತನಿಖೆ ಚುರುಕು ಮಾಡಿದ್ದ ಪೋಲೀಸರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ನಮ್ಮದೇ ಜನರು ಸಿನಿಮಾಗೆ ಶತ್ರುಗಳಾಗಿದ್ದಾರೆʼ: ಫೇಕ್ ರಿವ್ಯೂಗಳಿಂದ ಬೇಸತ್ತ ವಿಜಯ್ ದೇವರಕೊಂಡ

ಸಿನಿಮಾ ಚೆನ್ನಾಗಿದ್ದರೂ ಫೇಕ್ ರಿವ್ಯೂಗಳಿಂದ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ — ಈ ವಿಷಯದ ಬಗ್ಗೆ ನಟ ವಿಜಯ್ ದೇವರಕೊಂಡ ಓಪನ್ ಆಗಿ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಮರ್ಶೆಗಳನ್ನು ಹರಡುವ ಮೂಲಕ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾಗಳನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಕಲಿ ವಿಮರ್ಶೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವುದು ವಿಜಯ್ ಅವರಿಗೆ ಖುಷಿ ಕೊಟ್ಟಿದೆಯಾದರೂ, ಅದೇ ಸಮಯದಲ್ಲಿ ಇದು ನೋವನ್ನೂ ಕೊಡುತ್ತದೆ ಎನ್ನುತ್ತಾರೆ.

“ಬುಕ್ ಮೈ ಶೋನಲ್ಲಿ ಈ ಬದಲಾವಣೆ ನೋಡೋದು ಖುಷಿಯೂ ಹೌದು, ದುಃಖವೂ ಹೌದು. ಜನರ ಕನಸು, ಕಷ್ಟ, ಹಣವನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ ನಮ್ಮದೇ ಜನರು ಈ ಸಮಸ್ಯೆ ಹುಟ್ಟುಹಾಕುತ್ತಿದ್ದಾರೆ ಅನ್ನೋದು ತುಂಬಾ ದುಃಖಕರ” ಎಂದು ಅವರು ಬರೆದುಕೊಂಡಿದ್ದಾರೆ.

‘ಡಿಯರ್ ಕಾಮ್ರೇಡ್’ ಸಿನಿಮಾ ಸಮಯದಲ್ಲಿ ಸಂಘಟಿತ ದಾಳಿಗಳನ್ನು ಎದುರಿಸಿದ್ದೆ ಎಂದು ವಿಜಯ್ ಹೇಳಿದ್ದು, “ನಾನು ಮಾತಾಡಿದಾಗ ಯಾರೂ ಕೇಳದಂತೆ ಅನ್ನಿಸುತಿತ್ತು. ಒಳ್ಳೆಯ ಸಿನಿಮಾ ಯಾರೂ ತಡೆಯಲು ಸಾಧ್ಯವಿಲ್ಲ ಅಂತ ಕೆಲವರು ಸಮಾಧಾನ ಕೊಟ್ಟಿದ್ದರು. ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ನೋವನ್ನು ಅರ್ಥ ಮಾಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.

“ಯಾಕೆ ಇವರು ಹೀಗೆ ಮಾಡುತ್ತಾರೆ ಅಂತ ಯೋಚಿಸುತ್ತಾ ಅನೇಕ ರಾತ್ರಿ ನಿದ್ದೆಯೇ ಬಂದಿಲ್ಲ. ನನ್ನ ಕನಸುಗಳನ್ನು ಉಳಿಸಿಕೊಳ್ಳಲು ಹೇಗೆ ಹೋರಾಡಬೇಕು ಎಂದು ಯೋಚಿಸಿದ್ದೇನೆ. ಇಷ್ಟು ವರ್ಷಗಳ ಬಳಿಕ ಈ ವಿಚಾರ ಹೊರಬಂದಿರುವುದು ಸಂತೋಷ. ಚಿರಂಜೀವಿಯಂಥ ಟಾಪ್ ಹೀರೋ ಸಿನಿಮಾಗಿಗೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿರುವುದು ನನಗೆ ಧೈರ್ಯ ನೀಡಿದೆ” ಎಂದು ವಿಜಯ್ ಹೇಳಿದ್ದಾರೆ.

ಒಟ್ಟಿನಲ್ಲಿ, ಫೇಕ್ ರಿವ್ಯೂಗಳ ವಿರುದ್ಧ ವಿಜಯ್ ದೇವರಕೊಂಡ ನೀಡಿರುವ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕುಂಭಮೇಳದ ರುದ್ರಾಕ್ಷಿ ಹುಡುಗಿ ಈಗ ಸಿನಿಮಾ ಹೀರೋಯಿನ್! ಮೊನಾಲಿಸಾದ ‘ದಿಲ್ ಜಾನಿಯಾ’ ಸಾಂಗ್ ವೈರಲ್

2025ರ ಮಹಾಕುಂಭಮೇಳದಲ್ಲಿ ನೀಲಿ ಕಣ್ಣುಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಈಗ ಫುಲ್‌ ಫ್ಲೆಡ್ಜ್ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮೊನಾಲಿಸಾ ಮತ್ತು ಸಮರ್ಥ್ ಮೆಹ್ತಾ ಅಭಿನಯದ ‘ದಿಲ್ ಜಾನಿಯಾ’ ರೊಮ್ಯಾಂಟಿಕ್ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ.

ಹಾಡಿನಲ್ಲಿ ಸಮರ್ಥ್ ಮೆಹ್ತಾ ಜೊತೆ ಮೊನಾಲಿಸಾ ಡ್ಯಾನ್ಸ್ ಮಾಡಿದ್ದು, ಆಕೆಯ ನ್ಯಾಚುರಲ್ ಚಾರ್ಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡು ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದಲ್ಲಿ, ರಿಥಮ್ ಸಂಧ್ಯಾ ನಿರ್ದೇಶನದಲ್ಲಿ ಮೂಡಿಬಂದಿದೆ. ರಾಜಾ ಹರ್ಭಜನ್ ಸಿಂಗ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಗಗನ್‌ದೀಪ್ ಲಿರಿಕ್ಸ್ ನೀಡಿದ್ದಾರೆ. ‘ದಿಲ್ ಜಾನಿಯಾ’ ಹಾಡು ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ.

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಇಂದು ಪೂರ್ತಿ ದೇಶಕ್ಕೆ ಪರಿಚಿತ ಹೆಸರು. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪ್ರದೇಶದ ಯುವತಿ ಮೊನಾಲಿಸಾ, ತನ್ನ ವಿಭಿನ್ನ ನೀಲಿ ಕಣ್ಣುಗಳಿಂದ ವೈರಲ್ ಆದ ಬಳಿಕ ಜೀವನವೇ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋ-ವೀಡಿಯೋಗಳು ಟ್ರೆಂಡ್ ಆದ ನಂತರ, ನಿರ್ದೇಶಕ ಸನೋಜ್ ಮಿಶ್ರಾ ಅವರು ‘ದಿ ಡೈರಿ ಆಫ್ ಮಣಿಪುರ’ ಸಿನಿಮಾದಲ್ಲಿ ಅವಕಾಶ ನೀಡಿದರು. ಕಳೆದ ಒಂದು ವರ್ಷದಿಂದ ಮೊನಾಲಿಸಾ ಈ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಚಿತ್ರೀಕರಣ ಮುಂದುವರಿದಿದೆ. ಶೀಘ್ರದಲ್ಲೇ ಸಿನಿಮಾ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಒಟ್ಟಿನಲ್ಲಿ, ಕುಂಭಮೇಳದ ಸ್ಟಾಲ್‌ನಿಂದ ಸಿನಿಮಾ ಸ್ಟಾರ್ ಆಗುವವರೆಗೆ ಮೊನಾಲಿಸಾದ ಜರ್ನಿ ಈಗ ಲಕ್ಷಾಂತರ ಯುವತಿಯರಿಗೆ ಇನ್ಸ್ಪಿರೇಷನ್ ಆಗಿದೆ.

ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ ಉಡುಪಿಯಲ್ಲಿ; ತಜ್ಞರಿಂದ ಎಚ್ಚರಿಕೆ!

0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ಏರ್ ಕ್ವಾಲಿಟಿ ಇಂದು ಸುಧಾರಣೆಯತ್ತ ಸಾಗುತ್ತಿದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 138 ಆಗಿದ್ದು, ಡಿಸೆಂಬರ್ ತಿಂಗಳಿಗೆ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಮೈಸೂರು (59) ಮತ್ತು ವಿಜಯಪುರ (62) ಸ್ಥಳಗಳಲ್ಲಿಯೂ ಏರ್ ಕ್ವಾಲಿಟಿ ಉತ್ತಮವಾಗಿದೆ. ಆದರೆ ಶಿವಮೊಗ್ಗ (154) ಮತ್ತು ಉಡುಪಿ (166) ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಅನಾರೋಗ್ಯಕರ ಮಟ್ಟದಲ್ಲಿದೆ. ಉಡುಪಿಯ ವಾಯು ಮಾಲಿನ್ಯ ಕಳೆದ ತಿಂಗಳು 50–100ರ ನಡುವೆ ಇಂದು 166ಕ್ಕೆ ಏರಿಕೆ ಕಂಡಿದೆ.

ವೈದ್ಯರು ಹೇಳಿದಂತೆ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಸಾಧ್ಯವಾಗಲಿಲ್ಲ. ಸಾರ್ವಜನಿಕರು ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಪೀಕ್ ಟ್ರಾಫಿಕ್ ಸಮಯ ತಪ್ಪಿಸುವುದು, ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸೇವಿಸುವುದನ್ನು ಕಾಪಾಡುವುದು ಮಹತ್ತರ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಇಂದಿನ ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟ (AQI):
ಬೆಂಗಳೂರು – 138
ಮಂಗಳೂರು – ೧೬೧
ಮೈಸೂರು – ೫೯
ಬೆಳಗಾವಿ – ೧೪೦
ಕಲಬುರ್ಗಿ – 79
ಶಿವಮೊಗ್ಗ – 154
ಬಳ್ಳಾರಿ – ೧೪೪
ಹುಬ್ಬಳ್ಳಿ – 87
ಉಡುಪಿ – ೧೬೬
ವಿಜಯಪುರ – ೬೨.

error: Content is protected !!