Home Blog Page 268

ನಿಂಬೆ ನೀರು ಕುಡಿಯುವುದರಿಂದ ಹೈ ಬಿಪಿಯನ್ನು ಕಂಟ್ರೋಲ್ʼಗೆ ತರಬಹುದೇ? ಇಲ್ಲಿದೆ ಉತ್ತರ

0

ಹೆಚ್ಚಿನವರಿಗೆ ಅಧಿಕ ರಕ್ತದೊತ್ತಡ ಸಾಮಾನ್ಯ ಸಮಸ್ಯೆಯಂತೆ ಕಾಣಬಹುದು. ಆದರೂ, ಇದು ಹೃದಯ, ಮೂತ್ರಪಿಂಡ, ರಕ್ತನಾಳಗಳ ಆರೋಗ್ಯಕ್ಕೆ ನೇರವಾಗಿ ಹಾನಿ ಮಾಡುತ್ತದೆ. ಕ್ರಮೇಣ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಕೆಲವರು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ನಿಂಬೆ ನೀರು ಕುಡಿಯುತ್ತಾರೆ. ನಿಂಬೆಹಣ್ಣಿನಲ್ಲಿ ವಿಟಮಿನ್ C ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಆದರೆ, ಇದು ನಿಜವಾಗಿಯೂ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ ಎಂಬ ಪ್ರಶ್ನೆ ಬರಬಹುದು.

ಎನ್‌ಸಿಬಿಐ ಅಧ್ಯಯನಗಳ ಪ್ರಕಾರ, ನಿಂಬೆ ನೀರು ತನ್ನ ಸಿಟ್ರಿಕ್ ಆಮ್ಲ (Citric Acid) ಮತ್ತು ವಿಟಮಿನ್ C ಅಂಶಗಳಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಸುಧಾರಿಸುತ್ತವೆ ಮತ್ತು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ.

ಆಷ್ಯನ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಅಂಡ್ ರಿಸರ್ಚ್ ಪ್ರಕಾರ, ನಿಂಬೆಹಣ್ಣಿನ ವಿಟಮಿನ್ C ರಕ್ತನಾಳಗಳ ಆರೋಗ್ಯಕ್ಕೆ ಪೋಷಕವಾಗಿದೆ ಮತ್ತು ಹೃದಯದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ನೀರು ಕುಡಿಯುವ ಪ್ರಯೋಜನಗಳು

  1. ರಕ್ತಪರಿಚಲನೆಯನ್ನು ಸುಧಾರಿಸುತ್ತದೆ:
    ನಿಂಬೆಹಣ್ಣಿನಲ್ಲಿ ವಿಟಮಿನ್ C ಮತ್ತು ಸಿಟ್ರಸ್ ಫ್ಲೇವನಾಯ್ಡ್‌ಗಳು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತಪರಿಚಲನೆಯನ್ನು ಸುಧಾರಿಸುತ್ತವೆ.

  2. ಜಲಸಂಚಯನವನ್ನು ಹೆಚ್ಚಿಸುತ್ತದೆ:
    ದೇಹದಲ್ಲಿ ಜಲಸಂಚಯನ ಹೆಚ್ಚುವುದರಿಂದ ಅಧಿಕ ರಕ್ತದೊತ್ತಡದಿಂದ ಹೃದಯದ ಮೇಲೆ ಬರುವ ಒತ್ತಡ ಕಡಿಮೆಯಾಗುತ್ತದೆ.

ರಕ್ತದೊತ್ತಡ ನಿಯಂತ್ರಣಕ್ಕಾಗಿ ನಿಂಬೆ ನೀರು ಸಹಾಯಕರ ಆಗಿದೆಯಾದರೂ, ಇದು standalone ಚಿಕಿತ್ಸೆಯಲ್ಲ. ನೀವು ನಿಯಮಿತವಾಗಿ ನಿಂಬೆ ನೀರು ಸೇವಿಸಬಹುದು, ಆದರೆ ವೈದ್ಯರ ಸಲಹೆ ಪಡೆದು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ.

‘ಗಿಲ್ಲಿಯನ್ನು ಬಿಟ್ಟುಕೊಡಬೇಡ!’: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯಾ ತಾಯಿಯ ಸರ್ಪ್ರೈಸ್ ಮಾತು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫ್ಯಾಮಿಲಿ ವೀಕ್‌ನಲ್ಲಿ ಕಾವ್ಯಾ ಶೈವ–ಗಿಲ್ಲಿ ನಟ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆದ್ದಿದೆ. ಆರಂಭದಿಂದಲೂ ಕ್ಲೋಸ್ ಆಗಿರುವ ಈ ಜೋಡಿ, ಇದೀಗ ಮದುವೆ ಮಾತುಕತೆ ಮೂಲಕ ಹೊಸ ಚರ್ಚೆಗೆ ಕಾರಣವಾಗಿದೆ.

ಕಾವ್ಯಾ ಪೋಷಕರು ದೊಡ್ಮನೆಗೆ ಬಂದಾಗ ಮದುವೆ ವಿಷಯವೇ ಚರ್ಚೆಯಾಗಬೇಕು ಎಂಬ ಆಸೆಯನ್ನು ಗಿಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. “ನಾಳೆ ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ?” ಎಂದು ಗಿಲ್ಲಿ ಕಾವ್ಯಾವನ್ನು ರೇಗಿಸಿದರೆ, ಕಾವ್ಯಾ ಕೂಡ ತಿರುಗೇಟು ನೀಡಿ ಫನ್ನಿ ವಾತಾವರಣ ಸೃಷ್ಟಿಸಿದ್ದಾರೆ.

ಈ ವೇಳೆ ಕಾವ್ಯಾ ತಾಯಿ ಸಾವಿತ್ರಿ ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಗಿಲ್ಲಿಯನ್ನು ಎಂದಿಗೂ ಬಿಟ್ಟುಕೊಡಬೇಡ. ಅವನು ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಹಣ್ಣು, ಮೊಟ್ಟೆ ಕೇಳಿದರೆ ಕೊಡು” ಎಂದು ಹೇಳಿದ್ದು ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದೆ.

ಪ್ರೇಕ್ಷಕರಿಗೂ ಗಿಲ್ಲಿ ನಟ ಸಖತ್ ಫೇವರಿಟ್ ಆಗಿದ್ದಾರೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಮನೆಯವರಿಗೆ ಗಿಲ್ಲಿ ಆಟ ಮೆಚ್ಚುಗೆಯಾಗಿದೆ. ಈಗಾಗಲೇ ನಾಲ್ಕು ವೋಟ್ ಪಡೆದುಕೊಂಡಿರುವ ಗಿಲ್ಲಿ ಈ ವಾರದ ಕ್ಯಾಪ್ಟನ್ ಆಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಳಿ ತೀವ್ರ: ಈ ಜಿಲ್ಲೆಗಳಲ್ಲಿ ಒಣಹವೆ, ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ!

0

ಬೆಂಗಳೂರು:- ರಾಜ್ಯದೆಲ್ಲೆಡೆ ಇಂದು ಚಳಿಯಿರಲಿದ್ದು, ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನರ್ಸ್ ಬಟ್ಟೆ ಬದಲಿಸುವ ವಿಡಿಯೋ ಮಾಡಿದ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್!

0

ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುತ್ತಿದ್ದ ಸಂದರ್ಭದಲ್ಲಿ ಕದ್ದುಮುಚ್ಚಿ ವಿಡಿಯೋ ಚಿತ್ರೀಕರಿಸುತ್ತಿದ್ದ ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ.

ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ನಾಗರಭಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆಪರೇಷನ್ ಥಿಯೇಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ನರ್ಸ್ ಗಮನಿಸಿದ್ದರು. ನರ್ಸ್ ಈ ವಿಷಯವನ್ನು ಹಿರಿಯ ವೈದ್ಯ ಚೇತನ್ ಅವರಿಗೆ ತಿಳಿಸಿದ್ದಾರೆ.

ವೈದ್ಯರು ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ, ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಡಿಯೋ ಸೆರೆಮಾಡಿದ್ದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ತನಿಖೆಯನ್ನೂ ಮುಂದುವರೆಸುತ್ತಿದ್ದು, ವಿಡಿಯೋಗಳನ್ನೂ ಬೇರೆವರಿಗೆ ಕಳುಹಿಸಿದ್ದಾನೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಕ್ರಿಸ್‌ಮಸ್ ಬಾಕ್ಸ್ ಆಫೀಸ್ ಬ್ಲಾಸ್ಟ್: ಕಲೆಕ್ಷನ್‌ನಲ್ಲಿ ಕಮಾಲ್‌ ಮಾಡಿದ ‘ಮಾರ್ಕ್’ ‘45’

ಕ್ರಿಸ್‌ಮಸ್ ರಿಲೀಸ್ ಆಗಿರುವ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಅಬ್ಬರದ ಸೂಚನೆ ನೀಡಿವೆ. ರಜೆ ಇಲ್ಲದ ವಾರದ ದಿನದಲ್ಲೇ ಈ ಮಟ್ಟದ ಕಲೆಕ್ಷನ್ ಮಾಡಿರುವುದು ವೀಕೆಂಡ್‌ನಲ್ಲಿ ಭರ್ಜರಿ ಜಿಗಿತಕ್ಕೆ ಸೂಚನೆ ನೀಡುತ್ತಿದೆ.

ಸುದೀಪ್ ನಾಯಕತ್ವದ ‘ಮಾರ್ಕ್’ ಸಿನಿಮಾ ಮೊದಲ ದಿನ 6.28 ಕೋಟಿ ರೂಪಾಯಿ ಗಳಿಕೆ ಮಾಡಿ ಬಲಿಷ್ಠ ಓಪನಿಂಗ್ ಪಡೆದುಕೊಂಡಿದೆ. ‘ಮ್ಯಾಕ್ಸ್’ ಸಿನಿಮಾ ಶೇಡ್ ಕಾಣಿಸುತ್ತದೆ ಎನ್ನುವ ಚರ್ಚೆಯ ನಡುವೆಯೂ ಪಾಸಿಟಿವ್ ಟಾಕ್ ಚಿತ್ರಕ್ಕೆ ಲಾಭ ತಂದಿದೆ. ಎರಡು ದಿನಗಳಲ್ಲಿ ನಡೆಯುವ ಕಥೆ ಮತ್ತು ಫಾಸ್ಟ್ ಪೇಸ್ ಪ್ರೇಕ್ಷಕರನ್ನು ಸೆಳೆದಿದೆ.

ಇನ್ನು ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಸಿನಿಮಾ ಮೊದಲ ದಿನ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರೀಮಿಯರ್ ಶೋಗಳ ಲೆಕ್ಕ ಸೇರಿದರೆ 5 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಮಲ್ಟಿ ಸ್ಟಾರ್ ಕಾಸ್ಟ್ ಇರುವ ಕಾರಣ ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಇನ್ನಷ್ಟು ಬೆಂಬಲ ಸಿಗಲಿದೆ ಎಂಬ ನಿರೀಕ್ಷೆ ಇದೆ.

ವಾರಾಂತ್ಯ ಮತ್ತು ಹೊಸ ವರ್ಷದ ಹಬ್ಬದ ದಿನಗಳಲ್ಲಿ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಸಾಧ್ಯತೆ ಇದ್ದು, ಒಟ್ಟಾರೆ ಗಳಿಕೆ ಎಷ್ಟು ಆಗಲಿದೆ ಎಂಬ ಕುತೂಹಲ ಸಿನಿರಂಗದಲ್ಲಿ ಹೆಚ್ಚಾಗಿದೆ.

ಟಿಪ್ಪರ್-ಬೈಕ್ ಡಿಕ್ಕಿ: ಸ್ಥಳದಲ್ಲೇ ನಾಲ್ವರು ಯುವಕರು ಸಾವು

0

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಜರುಗಿದೆ.

ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಮೃತರು. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು. ಮೃತ ನಾಲ್ವರು ಯುವಕರು ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು ಇನ್ನೇನು ಅಜ್ಜವಾರ ಗ್ರಾಮಕ್ಕೆ ಹೈವೇಯಿಂದ ಬಲತಿರುವು ಪಡೆದುಕೊಳ್ಳಬೇಕಿತ್ತು. ಅಷ್ಟರಲ್ಲೇ ಯಮಸ್ವರೂಪಿಯಂತೆ ಟಿಪ್ಪರ್ ಲಾರಿ ಅಡ್ಡ ಬಂದಿದ್ದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಎಸ್‌ಪಿ ಕುಶಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ಮಾಡಿ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಟಿಪ್ಪರ್ ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅರಮನೆ ಮುಂಭಾಗ ಸ್ಫೋಟ; ಓರ್ವ ಸಾವು, ದೇಹ ಛಿದ್ರ ಛಿದ್ರ; ಹಲವರಿಗೆ ಗಂಭೀರ ಗಾಯ

0

ಮೈಸೂರು:- ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದಲ್ಲಿ ನೈಟ್ರೋಜನ್ ಗ್ಯಾಸ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.

ಬಲೂನ್​​ಗೆ ಗ್ಯಾಸ್ ತುಂಬಿಸುವ ವೇಳೆ ಅವಘಡ ಸಂಭವಿಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ದೇಹ ಛಿದ್ರ ಛಿದ್ರವಾಗಿದೆ. ಗಾಯಾಳುಗಳನ್ನ ಕೆ.ಆರ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮೃತ ದುರ್ದೈವಿಯನ್ನ 40 ವರ್ಷದ ಖಮರುದ್ದಿನ್ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಕನೋಜ್​​ ಜಿಲ್ಲೆಯ ತೊಫಿಯ ಗ್ರಾಮದವರಾಗಿದ್ದ ಖಮರುದ್ದೀನ್​​, ಬಲೂನ್​​ ಮಾರಾಟ ಮಾಡಲು ಮೈಸೂರಿಗೆ ಬಂದಿದ್ದರು, ಆದ್ರೆ ದುರಾದೃಷ್ಟವಶಾತ್​ ಹೀಲಿಯಂ ಸಿಲಿಂಡರ್​ ಬ್ಲಾಸ್ಟ್​​ ಆಗಿ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಬೆಂಗಳೂರಿನ ಲಕ್ಷ್ಮಿ, ನಂಜನಗೂಡಿನ ಮಂಜುಳ, ಕೋಲ್ಕತ್ತಾ ಮೂಲದ ಶಾಹಿನಾ ಶೇಬರ್ ಹಾಗೂ ರಾಣೆಬೆನ್ನೂರಿನ ಕೊಟ್ರೇಶ್​ ಗುಟ್ಟೆ ಎಂಬುವರಿಗೆ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮೈಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಪ್ಪಳದಲ್ಲಿ ಜಾತ್ರಾ ಸಂಭ್ರಮ: ಟನಕನಕಲ್ ಗ್ರಾಮಸ್ಥರಿಂದ ಅನ್ನಸೇವೆ

0

ಕೊಪ್ಪಳ: ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಮಹಾದಾಸೋಹಕ್ಕೆ ಟನಕನಕಲ್ ಗ್ರಾಮದ ಸದ್ಭಕ್ತರು 15 ಸಾವಿರ ರೊಟ್ಟಿಗಳು, ಅಕ್ಕಿ, ಮೆಕ್ಕೆಜೋಳ, ನೆಲ್ಲು ಸೇರಿದಂತೆ ದವಸ-ಧಾನ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ-ಸಡಗರದೊಂದಿಗೆ ಶ್ರೀಗವಿಮಠಕ್ಕೆ ಅರ್ಪಿಸಿದರು. ದಾನಿಗಳ ಸೇವೆಗೆ ಪೂಜ್ಯರು ಆಶೀರ್ವಾದ ನೀಡಿದರು.

ಉತ್ತಮ ಸೇವೆಗೆ ಆಝಾದ್ ಬ್ಯಾಂಕ್ ಬದ್ಧ: ಸರಫ್‌ರಾಜ್ ಅಹ್ಮದ್ ಎಸ್. ಉಮಚಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ. ಆಝಾದ್ ಕೋ-ಆಪ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ ಒದಗಿಸಲು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ ಎಂದು ಬ್ಯಾಂಕ್‌ನ ಚೇರಮನ್ ಸರಫ್‌ರಾಜ್ ಅಹ್ಮದ್ ಎಸ್. ಉಮಚಗಿ ಹೇಳಿದರು.

ಅವರು ಬ್ಯಾಂಕ್‌ನ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಸಭೆ ಹಾಗೂ 2026ರ ದಿನದರ್ಶಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಹಕರು ಈ ಬ್ಯಾಂಕ್‌ನ ಮೇಲೆ ಇಟ್ಟಿರುವ ವಿಶ್ವಾಸದಿಂದಾಗಿ ಹಾಗೂ ಅವರ ಠೇವಣಿ, ಭದ್ರತಾ ಠೇವಣಿಯಿಂದಾಗಿ ಬ್ಯಾಂಕ್ ಲಾಭದೆಡೆಗೆ ಮುನ್ನಡೆದಿದೆ. ಬಡ ಮತ್ತು ಮಧ್ಯಮ ವರ್ಗದ ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್ ಸಹಕರಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಹೆಸ್ಕಾಂನ ಅಧೀಕ್ಷಕ ಅಭಿಯಂತರರಾದ ನಜ್ಮುನ್ನಿಸಾ ಕೆ. ಅಲ್ಲಾವಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಆಝಾದ್ ಬ್ಯಾಂಕ್ ಪ್ರಗತಿಪಥದಲ್ಲಿ ಸಾಗಿ ಬಂದಿರುವುದು ಹೆಮ್ಮೆಯ ವಿಚಾರ. ಬರಲಿರುವ ದಿನಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯಗಳನ್ನು ನೀಡಲಿ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಮುಹಮ್ಮದ್ ಖಾನ್ ಪಠಾಣ, ಎಂ.ಎನ್. ಕುಕನೂರ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನ ಗ್ರಾಹಕರಾದ ನಿವೃತ್ತ ಪ್ರಾಚಾರ್ಯ ಎಂ.ಎಲ್. ಗುಳೇದಗುಡ್ಡ, ಡಾ. ಪ್ಯಾರ ಅಲಿ ನೂರಾನಿ ಮಾತನಾಡಿದರು.

ಬಿಲಾಲವಲಿದ್ ಖಾಲಿದ್ ಕುರಾನ್ ಪಠಿಸಿದರು, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸ್ವಾಗತಿಸಿದರು. ಪ್ರಾ. ಮುಸ್ತಾನ ಅಲಿ ಶಿರಹಟ್ಟಿ ಪರಿಚಯಿಸಿ ನಿರೂಪಿಸಿದರು. ಟಿಕಣದಾರ ಹೊಸ ವರ್ಷದ ಗೀತೆ ಹಾಡಿದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ವಂದಿಸಿದರು.

ಬೀದರ್| ಪಿಡಿಓ ಕುರ್ಚಿ ಮೇಲೆ ಮಲಗಿದ ಶ್ವಾನ! Video Viral!

0

ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ‌ಏಕಂಬ ಗ್ರಾಮ ಪಂಚಾಯಿತಿ ಬೀದಿ ನಾಯಿಗಳ ತಾಣವಾಗಿದೆ ಮರ್ರೆ.

ಹೌದು, ಗ್ರಾಮ ಪಂಚಾಯತಿ ಸಿಬ್ಬಂದಿ ಎಂದಿನಂತೆ ಬೆಳಗ್ಗೆ ಪಂಚಾಯಿತಿ ಕಚೇರಿ ಬಾಗಿಲು ಓಪನ್ ಮಾಡಿ ಹೋಗಿದ್ದಾರೆ. ಈ ವೇಳೆ ಶ್ವಾನ, ಯಾರ ಭಯವೂ ಇಲ್ಲದೇ ನೇರವಾಗಿ ಪಂಚಾಯ್ತಿ ಕಚೇರಿಯೊಳಗೆ ನುಗ್ಗಿ ಪಿಡಿಓ ಕುರ್ಚಿ ಏರಿ ಆಯಾಗಿ ಮಲಗಿಕೊಂಡಿದೆ. ಈ ವಿಚಿತ್ರ ಘಟನೆ ಸ್ಥಳೀಯರ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.

ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಚೇರಿಯ ನಿರ್ವಹಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!